TUMAKURU:SHAKTHIPEETA FOUNDATION
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅಪರೂಪಕ್ಕೆ ಬಹಳ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಿನಾಂಕ:30.04.2022 ರಂದು ಸಂಜೆ 4 ಗಂಟೆಗೆ ತುಮಕೂರಿನ ಅಮಾನಿಕೆರೆಯಲ್ಲಿರುವ ಸ್ಮಾರ್ಟ್ ಲಾಂಜ್‍ನಲ್ಲಿ ಹೆರಿಟೇಜ್ ತಜ್ಞರುಗಳಾದ ಶ್ರೀ ಡಾ.ಯೋಗೀಶ್‍ರವರು, ಶ್ರೀ ಸ್ವಾಮಿನಾಥನ್‍ರವರು, ಶ್ರೀ ಪಾಂಡು ರಂಗ ಶರ್ಮರವರು ಮತ್ತು ಶ್ರೀ ನಾಗರಾಜು ರವರು ಉಪನ್ಯಾಸ ಅಧ್ಭುತವಾಗಿತ್ತು. ಸುಮಾರು 3 ಗಂಟೆಗಳ ಕಾಲ ನನ್ನ ಕಾಲುಗಳನ್ನು ಕಟ್ಟಿ ಹಾಕಿತ್ತು.
ಯೋಗೀಶ್ ರವರು ತುಮಕೂರು ಜಿಲ್ಲೆಯನ್ನು 22 ಮನೆತನದ ಪ್ರಮುಖರು/ರಾಜರು ಆಳ್ವಿಕೆ ನಡೆಸಿದ್ದರು ಎಂದು ಹೇಳಿದಾಗ ಅಲ್ಲಿದ್ದವರಿಗೆ ರೋಮಾಂಚನವಾಗಿತ್ತು. ಇಂಥಹ ಕಾರ್ಯಕ್ರಮಗಳು ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿರುವ ಆಲದ ಮರದ ಪಾರ್ಕ್‍ನಲ್ಲಿ ವಾರಕ್ಕೊಂದು ವಿಚಾರ ನಡೆಯುವಂತಾಗ ಬೇಕು.
ಯಾವುದಾದರೂ ಒಂದು ಸಂಸ್ಥೆ ನಿರ್ವಹಣೆಗೆ ಮುಂದಾಗಬೇಕು. ನಾನು ಇಂದು ಅಮಾವಾಸೆ ದಿವಸ ಅಲ್ಲಿ ಮೊದಲ ಪತ್ರಿಕಾಘೋಷ್ಠಿ ನಡೆಸುವ ಮೂಲಕ ಸಾಮಾಜಿಕ ಕನಸುಗಾರರಿಗೆ ಸ್ಪೂರ್ತಿ ತುಂಬಲು ಒಂದು ಸಣ್ಣ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.
ತುಮಕೂರು ಜಿಲ್ಲೆಯ ಶಾಸನಗಳು, ಹೆರಿಟೇಜ್ ಕಟ್ಟಡಗಳ ಸಂರಕ್ಷಣೆಗಾಗಿ ಒಂದು ಪ್ರಸ್ತಾವನೆ ಸಲ್ಲಿಸಲು ತಜ್ಞರುಗಳಿಗೆ ಸಲಹೆ ನೀಡಿದ್ದೇನೆ. ಕೆಲವರು ತುಮಕೂರು ಜಿಲ್ಲೆಯ ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳು ಸ್ಪಂಧಿಸುತ್ತಿಲ್ಲಾ ಎಂದು ನೇರವಾಗಿ ಆರೋಪಿಸಿದರು. ಅವರ ಬಗ್ಗೆ ಬಿಡಿ,
ನೀವೂ ಪ್ರಸ್ತಾವನೆ ಸಿದ್ಧಪಡಿಸಿ, ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರಿಗೆ ಸಲ್ಲಿಸಿ, ನನಗೊಂದು ಪ್ರತಿ ಕಳುಹಿಸಿ, ನಂತರ ಮುಂದಿನ ಯೋಚನೆ ಎಂದು ತಿಳಿಸಿದ್ದೇನೆ.
ಭಾಷಣ ಮಾಡಿ ಇಲ್ಲಿಗೆ ನಿಲ್ಲಿಸಬೇಡಿ, ನನಗೆ ಹಿರಿಯ ಐಎಎಸ್ ಅಧಿಕಾರಿ ಶ್ರೀಮತಿ ಶಾಲಿನಿರಜನೀಶ್ ರವರು ಶ್ರೀ ಸ್ವಾಮಿನಾಥನ್ ರವರ ಬಗ್ಗೆ ಹೇಳಿದ್ದರು. ನನ್ನೊಂದಿಗೆ ಇವರು ಮೊಬೈಲ್ ಮೂಲಕ ಮಾತನಾಡಿದ್ದರು. ನಾನು ಅಂದೇ ಅವರಿಗೆ ಬರಲು ಹೇಳಿದ್ದೆ. ಆದರೂ ಪರವಾಗಿಲ್ಲ ಈಗಲಾದರೂ ತಮಿಳುನಾಡಿನಿಂದ ಬಂದು ತುಮಕೂರು ಜಿಲ್ಲೆಯ ಹೆರಿಟೇಜ್ ಬಗ್ಗೆ ಸಮಾಲೋಚನೆ ಮಾಡಿದ್ದು ಖುಷಿಯಾಗಿದೆ.
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಶ್ರೀ ಅಶ್ವಿನ್ ರವರು ಮತ್ತು ಶ್ರೀಮತಿ ದತ್ತಸ್ಮಿತಾರವರಿಗೆ ಬೆನ್ನು ತಟ್ಟಿ ಬಂದೆ. ಈ ರೀತಿ ಕಾರ್ಯಕ್ರಮ ಆಯೋಜಿಸಿ, ಇದು ಸ್ಮಾರ್ಟ್ ಸಿಟಿಯ ಪ್ರಮುಖ ಭಾಗ ಎಂದು ಮನವರಿಕೆ ಮಾಡಿದ್ದೇನೆ.