24th November 2024
Share

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಂಡಿರುವ ಮಹಾತ್ಮ ಗಾಂಧಿ ಸ್ಟೇಡಿಯಂ ಅನ್ನು ತುಮಕೂರು ಜನತೆಗೆ ಪರಿಚಯಿಸುವ ನಮ್ಮೂರ ಸ್ಟೇಡಿಯಂ ನೋಡ ಬನ್ನಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಶಕ್ತಿಪೀಠ ಫೌಂಡೇಷನ್ ಚಿಂತನೆ ನಡೆಸಿದೆ.

ಇದೇ ರೀತಿ ತುಮಕೂರು ನಗರದಲ್ಲಿ ಕೈಗೊಂಡಿರುವ ಜನಪರ ಯೋಜನೆಗಳ ಬಗ್ಗೆಯೂ ಜನರಿಗೆ ಹೇಗೆ ಮಾಹಿತಿ ಮುಟ್ಟಿಸಬೇಕು ಎಂಬ ಆಲೋಚನೆ ನಡೆಸುತ್ತಿದೆ.ಜೊತೆಗೆ ಮುಂದಿನ 50 ವರ್ಷಗಳಲ್ಲಿ ತುಮಕೂರು ನಗರ ಮತ್ತು ತುಮಕೂರು ಜಿಲ್ಲೆ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬ ಚಿತ್ರಣ ಜನರ ಮನಸ್ಸಿಗೆ ಬರುವಂತಹ ಕಾರ್ಯಕ್ರಮ ಆಯೋಜಿಸಲು ಸಹ ಯೋಚನೆ ನಡೆಸುತ್ತಿದೆ.

ಈ ಕಾರ್ಯಕ್ರಮಕ್ಕೆ ನಗರದ ಮತ್ತು ಜಿಲ್ಲೆಯ ಹಲವಾರು ಸಂಘಸಂಸ್ಥೆಗಳ ಸಹಕಾರ ಪಡೆಯಲಾಗುವುದು. ಆಸಕ್ತರು ಕೈಜೋಡಿಸ ಬಹುದಾಗಿದೆ.

ನೋಡಿ ಒಂದು ಉದಾಹರಣೆ ನಿಮ್ಮ ಮುಂದೆ ಇಡುತ್ತೇನೆ.

ತುಮಕೂರು ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನವನ್ನು ಮಾಸ್ಟರ್ ಪ್ಲಾನ್ ನಲ್ಲಿ ಹೇಗೆ ಬದಲಾಯಿಸಿದ್ದಾರೆ. ಆಟದ ಮೈದಾನದ ಲ್ಯಾಂಡ್ ಯೂಸ್ ಬದಲಾವಣೆ ಏಕೆ ಮಾಡಿದ್ದಾರೆ ಎಂಬ ಯಕ್ಷ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಪರಿಸರ ತಜ್ಞ ಡಾ.ಶ್ರೀ ಎಂ.ಎಸ್.ರುದ್ರಮೂರ್ತಿಯವರು ಈ ಬಗ್ಗೆ ಮಾಹಿತಿ ನೀಡಲು ನನಗೆ ಬಾಯಿಗೆ ಬಂದ ಹಾಗೆ ನನಗೆ ಬೈದಿದ್ದಾರೆ. ನಾನು ಟೂಡಾ ಆಯುಕ್ತರಿಗೆ ಈ ಬಗ್ಗೆ ವಿವರ ನೀಡಲು ಹೇಳಿದ್ದರೂ ಇನ್ನೂ ಮಾಹಿತಿ ನೀಡಲು ಅವರಿಗೆ ಸಾಧ್ಯಾವಾಗಿಲ್ಲ.

ಇದೇ ರೀತಿ ಅಧಿಕಾರಿಗಳುÀ ಮನಸ್ಸಿಗೆ ಬಂದಂತೆ ನಡೆದುಕೊಂಡರೇ ಹೇಗೆ?

  1. ಆಟದ ಮೈದಾನ ಯಾರಿಗೆ ಹೊರೆಯಾಗಿತ್ತು.
  2. ಆಟದ ಮೈದಾನದ ಲ್ಯಾಂಡ್ ಯೂಸ್ ಬದಲಾವಣೆ ಮಾಡಲು ಯಾರು ಸೂಚಿಸಿದರು.
  3. ಇದರಿಂದ ಯಾರಿಗೆ ಯಾವ ರೀತಿ ತೊಂದರೆ ಆಗಿತ್ತು.
  4. ಇದೇ ನನಗೆ ನಿಗೂಢವಾಗಿದೆ.
  5. ಅಭಿವೃದ್ಧಿ ಪರ ಚಿಂತಕರೂ ಈ ಬಗ್ಗೆ ಮಾಹಿತಿ ಕೇಳಿದರೆ, ನೀಡುವ ಸೌಜನ್ಯವಾದರೂ ಇಲ್ಲವೇ?
  6. ಇಂಥಹ ಚಟುವಟಿಕೆಗಳ ಬಗ್ಗೆ ಜನಜಾಗೃತಿಯೂ ಆಗತ್ಯವಾಗಿದೆ.