23rd April 2024
Share

TUMAKURU:SHAKTHIPEETA FOUNDATION

ನನ್ನ ಆತ್ಮೀಯ ಮಾಧ್ಯಮ ಮಿತ್ರರೊಬ್ಬರು ಕರೆ ಮಾಡಿ, ಆಲದ ಮರದ ಪಾರ್ಕ್ ಬಗ್ಗೆ ಎಂ.ಎಲ್.ಎ ರವರು ಮಾಡಿದ್ದು ಸರಿನಾ? ರಮೇಶ್ ಎಂದರು. ನಾನು ಅವರು ಸರಿಯಾದ ನಿರ್ಧಾರ ತೆಗೆದು ಕೊಂಡಿದ್ದಾರೆ. ಯಾಕೆ ಸಾರ್ ಏನಾಯಿತು ಎಂದೆ.

ಹೀಗೆ ಕೊಡಬಹುದಾ ಎಂದಾಗ ಹೌದು ಸಾರ್ ನೀವೂ ಇನ್ನೊಂದು ತೆಗೆದು ಕೊಳ್ಳಿ ಅಥವಾ ಬೇರೆ ಏನಾದರೂ ಮಾಡಿ ಸಾರ್ ಕಾನೂನಿನಲ್ಲಿ ಅವಕಾಶವಿದೆ, ಶಾಸಕರು ಮನವಿ ಸಲ್ಲಿಸಿದವರಿಗೆ ಅನೂಕೂಲ ಮಾಡುವುದು ಕರ್ತವ್ಯವಲ್ಲವೇ? ಎಂದಾಗ  ಹೌದು ನಿಮ್ಮ ಮಾತು ಸರಿಯಾಗಿದೆ ಎಂಬುದಾಗಿ ಸ್ಪರ್ಧಾತ್ಮಕ ಮನೋಭಾವ ವ್ಯಕ್ತಪಡಿಸಿದರು.

ನಾವು ಏಕೆ ಒಂದು ಪತ್ರಿಕಾಭವನ ಮಾಡಬಾರದು ಎಂದು ಮರು ಪ್ರೆಶ್ನೆ ಹಾಕಿದರು. ನೋಡಿ ಸಾರ್ ದಿ.ಇಂದ್ರಕುಮಾರ್ ರವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತುಮಕೂರು ನಗರದ ಪಿ.ಎಲ್.ಡಿ ಬ್ಯಾಂಕ್ ಪಕ್ಕ ಇದ್ದ ಜಾಗದಲ್ಲಿ ಪತ್ರಿಕಾ ಭವನ ಮಾಡಲು ಸ್ಥಳ ಕೊಡಿಸಲು ನನಗೆ ಹೇಳಿದ್ದರು. ನಾನು ಮತ್ತು ಆಗಿನ ಮಾಜಿ ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಸುಮಾರು 7 ಭಾರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಜಾಮಧಾರ್ ಬಳಿ ಹೋಗಿದ್ದೆವು.

ಜಾಮಧಾರ್ ರವರು ಕೊನೆಗೆ ಒಂದು ತಂತ್ರಗಾರಿಕೆ ಹೇಳಿದ್ದರು, ಇಂದ್ರಕುಮಾರ್ ರವರು ಏಕೋ ಮನಸ್ಸು ಮಾಡಲಿಲ್ಲ, ನಾವು ಸಮ್ಮನಾದೆವು ಎಂದು ಗತಕಾಲದ ಅನುಭವ ಹಂಚಿಕೊಂಡಾಗ. ಅವರು ಸಹ ಬಹಳ ಹಿಂದೆ ನಾನು ಸಾಹಸ ಮಾಡಿ ಕೈಬಿಟ್ಟೆ ಎಂಬುದಾಗಿ ವಿಷಯ ಹಂಚಿಕೊಂಡರು.

ಅಲ್ಲದೇ ಸ್ಮಾರ್ಟ್ ಸಿಟಿ ಆರಂಭದಲ್ಲಿಯೇ ತುಮಕೂರು ನಗರದಲ್ಲಿ ಸ್ಮಾರ್ಟ್ ಮಾಧ್ಯಮ ಭವನ ಮಾಡುವ ಬಗ್ಗೆ ಶ್ರೀ ಜಗನ್ನಾಥ್ ರವರು ಸೇರಿದಂತೆ ಹಲವರೊಂದಿಗೆ ಚರ್ಚೆ ಮಾಡಿದ್ದೆ. ಅವರ್ಯಾರು ಸ್ಪಂಧಿಸದೆ ಇದ್ದರೆ ನಾವು ಏನು ಮಾಡಲು ಸಾಧ್ಯಾ ಸಾರ್ ಎಂದಾಗ ಅವರು ಸಹಮತ ವ್ಯಕ್ತ ಪಡಿಸಿದರು.

 ಸುಧೀರ್ಘ ಚರ್ಚೆ ನಡೆಸಿದ ನಂತರ ನಾನು ಅವರಿಗೆ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‍ರವರು, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಡೈನಾಮಿಕ್ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಇರುವಾಗಲೇ ತುಮಕೂರಿನಲ್ಲಿ ಹೈಟೆಕ್ ಮಾಧ್ಯಮ ಭವನ ಮಾಡುವುದಾಗಿ ನಿರ್ಣಯ ಕೈಗೊಳ್ಳಿ ಎಂದು ಸಲಹೆ ನೀಡಿದಾಗ ಒಂದೆರಡು ದಿವಸದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಪಿಪಿಪಿ ಮಾದರಿಯಲ್ಲಿ ಯೋಜನೆ ಕೈಗೊಳ್ಳಲು ಇರುವ ಅವಕಾಶದ ಬಗ್ಗೆ ಚರ್ಚೆ ಮಾಡಿದೆವು. ಸರ್ಕಾರದ ಹಂತದಲ್ಲಿ ನಿವೇಶನ ಪಡೆಯುವ ಬಗ್ಗೆಯೂ ಸುದೀರ್ಘ ಸಮಾಲೋಚನೆ ನಡೆಸಿದೆವು.