23rd December 2024
Share

TUMAKURU:SHAKTHI PEETA FOUNDATION

ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿರುವ ಆಲದ ಮರಗಳ ವಯಸ್ಸು ಕಂಡು ಹಿಡಿಯುವುದು ಕಷ್ಟವಂತೆ. ತಜ್ಞರಿಂದ ವರದಿ ಪಡೆದ ಮೇಲೆ ಅಂತಿಮಗೊಳಿಸ ಬೇಕಂತೆ. ಅಥವಾ ಯಾರ ಬಳಿಯಾದರೂ ದಾಖಲೆಗಳು ಇವೆಯಾ ಎಂಬ ಬಗ್ಗೆ ಮಾಹಿತಿ ಸಂಗ್ರಹ ಮಾಡಬೇಕಿದೆ.

ಒಂದು ಅಂದಾಜಿನ ಪ್ರಕಾರ ಶಾಲಾ ಕಟ್ಟಡ ಉದ್ಘಾಟನೆಯಾದಾಗ ಆಲದ ಗಿಡ ಹಾಕಿದ್ದಾರೆ ಎಂಬ ಅಂದಾಜು ಮಾಡಿದರೆ, 122 ವರ್ಷಗಳಾಗಿರಬಹುದು ಅಥವಾ ಹಿಂದೆ ಮುಂದೆ ಆಗಿರಬಹುದು.

ಆಲದ ಮರದ ನೇತಾಡುವ ಬೇರುಗಳು ಭೂಮಿಯ ಒಳಕ್ಕೆ ಹೋಗಲೇ ಬೇಕಂತೆ, ಇಲ್ಲದಿದ್ದರೆ ಆಲದ ಮರಕ್ಕೆ ಭಧ್ರತೆ ಇರುವುದಿಲ್ಲವಂತೆ. ಕಾಂಕ್ರೀಟ್ ತೆಗೆಸಬೇಕೋ ಅಥವಾ ಬೇಡವೋ ಎಂಬ ಬಗ್ಗೆಯೂ ತಜ್ಞರಿಂದ ವರದಿ ಪಡೆದು ತೀರ್ಮಾನ ಮಾಡಬಹುದಾಗಿದೆಯಂತೆ.

ತುಮಕೂರು ಸ್ಮಾರ್ಟ್ ಸಿಟಿ ಎಂಡಿ ಶ್ರೀ ರಂಗಸ್ವಾಮಿ, ಎಸಿಎಫ್ ಶ್ರೀ ಚಿಕ್ಕರಾಜೇಂದ್ರ, ಆರ್.ಎಫ್.ಓ ನಟರಾಜ್ ತುಮಕೂರು ಪ್ರೆಸ್ ಕ್ಲಬ್ ಪದಾಧಿಕಾರಿಗಳು ಮರಗಳ ವಯಸ್ಸಿನ ಬಗ್ಗೆ ಚರ್ಚೆ ಮಾಡುತ್ತಿರುವುದು.