TUMAKURU:SHAKTHIPEETA FOUNDATION
ನಾನು ಮುಖ್ಯಂಮತ್ರಿಯವರಾದ ಶ್ರೀ ಬೊಮ್ಮಾಯಿರವರನ್ನು ಸುಮಾರು ವರ್ಷಗಳು ಅಂದರೆ, ಅವರ ತಂದೆ ಕಾಲದಿಂದಲೂ ಗಮನಿಸುತ್ತಿದ್ದೇನೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಮತ್ತು ನಾನು ಈಗ ಬೊಮ್ಮಾಯಿರವರು ವಾಸವಿರುವ ಮನೆಯಲ್ಲಿಯೇ ಮಾಜಿ ಮುಖ್ಯ ಮಂತ್ರಿ ದಿ.ಎಸ್.ಆರ್.ಬೊಮ್ಮಾಯಿರವರನ್ನು ಹಲವಾರ ಭಾರಿ ಬೇಟಿ ಮಾಡುತ್ತಿದ್ದೆವು.
ದಿ.ಎಸ್.ಆರ್.ಬೊಮ್ಮಾಯಿರವರು ಬಸವರಾಜ್ ರವರಿಗೆ ಎಷ್ಟು ಗೌರವ ಕೊಡುತ್ತಿದ್ದರು ಎಂದರೆ ಎಲ್ಲಾ ಚರ್ಚೆ ಮಾಡಿದ ನಂತರ ಅವರು ಎದ್ದು ಕೈ ಕುಲಕಿ ಕಳುಹಿಸುತ್ತಿದ್ದರು.
ಮುಖ್ಯ ಮಂತ್ರಿಯವರಾದ ಬೊಮ್ಮಾಯಿರವರನ್ನು ಅಂದಿನಿಂದ ಆರಂಭಿಸಿ, ಕೆಲವು ಸಮಯ ಚಾಲುಕ್ಯ ಹೋಟೆಲ್ ಬಳಿ, ಜಲಸಂಪನ್ಮೂಲ ಸಚಿವರಾಗಿದ್ದಾಗ, ಬಿಜೆಪಿ ಅಭಿವೃದ್ಧಿ ಪ್ರಕೋಷ್ಟಕದಲ್ಲಿ, ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾಗ ಹೀಗೆ ನಿರಂತರವಾಗಿ ಗಮನಿಸುತ್ತಿದ್ದೇನೆ.
‘ಈಗ ಬದಲಾಗಿರುವುದು ಗಮನಿಸಿದರೆ, ಮುಖ್ಯಮಂತ್ರಿಯವರಾದ ಇಷ್ಟು ಕಡಿಮೆ ಅವಧಿಯಲ್ಲಿ ಅವರಿಗೆ ಇಷ್ಟೊಂದು ತಾಳ್ಮೆ ಹೇಗೆ ಬಂದಿದೆ. ಮಾನವೀಯತೆ ತಾಂಡವಾಡಲು ಆರಂಭಿಸಿದೆ ಇವರೇನಾ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಎಂಬ ಅನುಮಾನ ನನಗೆ ಬರಲಾರಂಭಿಸಿದೆ.’
ಕೆಲವು ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರ ಅಳಲು ಮುಖ್ಯ ಮಂತ್ರಿಯರವಾದ ಶ್ರೀ ಬೊಮ್ಮಾಯಿರವರು ನಮ್ಮನ್ನು ಚೆನ್ನಾಗಿ ಮಾತನಾಡಿಸುವುದಿಲ್ಲ, ನಗುವುದಿಲ್ಲ, ಕುಳಿತು ಕೊಳ್ಳಿ ಎನ್ನುವುದಿಲ್ಲ ನಿಂತು ಕೊಂಡೆ ಮಾತಾಡಿ ಕಳುಹಿಸುತ್ತಾರೆ.ಮುಕ್ತವಾಗಿ ಅವರೊಂದಿಗೆ ಚರ್ಚೆ ಮಾಡಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆಗಲ್ಲ, ಯಾರೇ ಹೋದರೂ ಮುಕ್ತವಾಗಿ ಮಾತನಾಡಿಸುತ್ತಿದ್ದರು ಎಂದು ಹೇಳುವುದು ಸಹಜ.
ನನ್ನ ಪ್ರಕಾರ ಬೊಮ್ಮಾಯಿರವರು ಬದಲಾಗಿದ್ದಾರೆ, ನಾನು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನಡೆಯುವ ಅವರ ಹಲವಾರು ಸಮಾರಂಭಗಳಲ್ಲಿ ಭಾಗವಹಿಸಿ ಗಮನಿಸುತ್ತಿದ್ದೇನೆ. ದಿನಾಂಕ:16.05.2022 ರಂದು ತುಮಕೂರು ಪ್ರೆಸ್ ಕ್ಲಬ್ ನವರಿಗೆ ತುಮಕೂರು ಸ್ಮಾರ್ಟ್ ಸಿಟಿಯವರು ನಿರ್ಮಾಣ ಮಾಡಿರುವ ಆಲದ ಮರದ ಪಾರ್ಕ್ ಹಸ್ತಾಂತರಕ್ಕೆ ಆಗಮಿಸಿದಾಗ ‘ಅವರು ನನ್ನೊಂದಿಗೆ ಮಾತನಾಡಿದ ನಂತರ ನನಗೆ ಏನೋ ಒಂದು ರೀತಿ ಸಂಚಲನ ಆಯಿತು.’
ನಾನು ಪ್ರೆಸ್ ಕ್ಲಬ್ ನವರ ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕ ಮಾತನಾಡಲು ಆರಂಭಿಸಿದಾಗ, ನನಗೆ ಅವರ ಮಾತಿನಿಂದ ನನ್ನ ಮೈಂಡ್ ಗೊಂದಲದಲ್ಲಿದೆ ಎನಿಸಿತು.
ಮುಖ್ಯ ಮಂತ್ರಿಯವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಸಮಿತಿಯಲ್ಲಿ ಸದಸ್ಯನಾಗಿರುವುದರಿಂದ, ರಾಜ್ಯ ಮಟ್ಟದ ದಿಶಾ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ರವರ ಸಹಕಾರದಿಂದ, ನಮ್ಮ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವುದು ಹೇಗೆ ಎಂಬ ಸ್ಟ್ರಾಟಜಿ ಸಿದ್ಧ ಪಡಿಸಲು, ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದೊಂದಿಗೆ ಈಗಾಗಲೇ ಎಂ.ಓ.ಯು ಮಾಡಿಕೊಂಡಿರುವುದರಿಂದ, ಅವರ ಸಹಭಾಗಿತ್ವದಲ್ಲಿ ಮೌಲ್ಯ ಮಾಪನ ವರದಿ ಸಿದ್ಧಪಡಿ¸ಲು ಆರಂಭಿಸಿದ್ದೇನೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ರಾಜ್ಯದ 224 ವಿಧಾನಸಭಾ ಕ್ಷೇತ್ರದ ಸಮಗ್ರ ನೀರಾವರಿ ಚಿತ್ರಣದ ಪುಸ್ತಕ ಬರೆಯಿರಿ ಎಂದು ನನಗೆ ಹಲವಾರು ಭಾರಿ ಹೇಳಿದ್ದರ ಹಿನ್ನೆಲೆಯಲ್ಲಿ, ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದ ಜೊತೆ ಫೈಲಟ್ ಪ್ರಾಜೆಕ್ಟ್ ಆಗಿ ಜಲಶಕ್ತಿ ಸಚಿವಾಲಯದ ಯೋಜನೆ ಆಯ್ಕೆ ಮಾಡಿಕೊಂಡಿದ್ದು ಈಗಾಗಲೇ ಮೌಲ್ಯ ಮಾಪನ ವರದಿ ಸಿದ್ಧಪಡಿಸಲು ಪ್ರಕ್ರೀಯೇ ಆರಂಭಿಸಿದ್ದೇನೆ.
ಮೊನ್ನೆ ತುಮಕೂರು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ನನಗೆ ಒಂದು ಗುರುತರವಾದ ಹೊಣೆಗಾರಿಕೆ ನೀಡಿದ್ದಾರೆ. ತುಮಕೂರು ನಗರದ ಎಲ್ಲಾ ಉಧ್ಯಾನವನಗಳ ಸಂರಕ್ಷಣೆಗೆ ನಗರದ ನಾಗರೀಕ ಸಂಸ್ಥೆಗಳಿಗೆ, ಕುಟುಂಬಗಳಿಗೆ ಮತ್ತು ವ್ಯಕ್ತಿಗಳಿಗೆ ನಿರ್ವಹಣೆಗಾಗಿ ನೀಡಲು ಒಂದು ಆಂದೋಲನ ಆರಂಭಿಸಿ ಎಂದಿದ್ದಾರೆ. ನಾನು ಆಲದ ಮರದ ಪಾರ್ಕ್ ನಲ್ಲಿ ಬೊಮ್ಮಾಯಿರವರ ಮುಂದೆಯೇ ಈ ಮಾತನ್ನು ಇಂದಿನಿಂದಲೇ ಚಾಲನೆ ನೀಡಲಾಗುವುದು ಎಂದು ಹೇಳಿದ್ದೇನೆ.
ನನ್ನ ಮಗ ಚಿ.ಕೆ.ಆರ್.ಸೋಹನ್ ದೆಹಲಿಯ ನೇತಾಜಿ ಸುಭಾಷ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂ.ಟೆಕ್ ಮಾಡುತ್ತಿದ್ದಾನೆ. ಅವನಿಗೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಯೋಜನಾ ಇಲಾಖೆ ಹಾಗೂ ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದಲ್ಲಿ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಪ್ರಾಜೆಕ್ಟ್ ವರ್ಕ್ ಮಾಡಲು ಅನುಮತಿ ಪಡೆಯಲಾಗಿದೆ. ಅವನು ಇಸ್ರೋದಲ್ಲಿಯೂ ಪ್ರಾಜೆಕ್ಟ್ ವರ್ಕ್ ಮಾಡಲು ಬಯಸಿದ್ದರಿಂದ ಅಲ್ಲಿಯೂ ಪ್ರಾಜೆಕ್ಟ್ ವರ್ಕ್ ಮಾಡುತ್ತಿದ್ದಾನೆ.
ಆತ ಡಾಟಾ ವಿಜ್ಞಾನಿ ಆಗಿರುವುದರಿಂದ ಈ ಮೂರು ಪ್ರಾಜೆಕ್ಟ್‍ಗಳ ಮೌಲ್ಯ ಮಾಪನವನ್ನು ಅವನಿಂದಲೇ ಮಾಡಿಸಲಾಗುವುದು. ನನ್ನ ಕೆಲಸ ಡಾಟಾ ಒದಗಿಸುವುದು, ನನ್ನ ಐಡಿಯಾ ನೀಡುವುದಷ್ಟೆ ಆಗಿದೆ. ಇದೇ ಒಂದು ಹರಸಾಹಸ, ‘ಶಕ್ತಿದೇವತೆಯ ಅಥವಾ ಶಿವನ ಉಗ್ರ ಅವತಾರ ಆಡಬೇಕೋ ಏನೋ ಎನಿಸುತ್ತಿದೆ’.
ತುಮಕೂರು ಜಿಲ್ಲೆಯಲ್ಲಿ ಈ ಮೂರು ಯೋಜನೆಗಳ ಬಗ್ಗೆ, ಜನ ಜಾಗೃತಿ ಮೂಡಿಸಲು ಸಹಕಾರ ಪಡೆಯಲು ತುಮಕೂರಿನಲ್ಲಿ ಮಾಧ್ಯಮ ಮಿತ್ರರ ಕೆಳಕಂಡ ಮೂರು ಗುಂಪುಗಳೊಂದಿಗೂ ಸಮಾಲೋಚನೆ ನಡೆಸಲು, ಡಿಜಿಟಲ್ ಮೂಲಕ ಬಹಿರಂಗವಾಗಿ ಮನವಿ ಮಾಡಿದ್ದೇನೆ.
- ತುಮಕೂರು ಪ್ರೆಸ್ ಕ್ಲಬ್
- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ.
- ಪ್ರಜಾಪ್ರಗತಿ ಮತ್ತು ಪ್ರಗತಿ ಟಿ.ವಿ.ಟೀಮ್ (ಪ್ರಜಾ ಪ್ರಗತಿ ಪತ್ರಿಕೆಯ ಮೇಲೆ 20 ವರ್ಷಗಳ ಹಿಂದೆ, ನಾನು ಮಾನ ನಷ್ಟ ಮೊಕೊದ್ದಮೆ ಹೂಡಿದ್ದ ಸಮಯದಿಂದ, ನನಗೂ ಶ್ರೀ ನಾಗಣ್ಣನವರಿಗೂ ವಿಶೇಷ ಒಡನಾಟವಿದೆ. ಈ ಒಡನಾಟಕ್ಕೆ ದಿ. ಎಂ.ಎನ್.ಕೋಟೆ ನಾಗಭೂಷಣ್ ಮತ್ತು ಶ್ರೀ ಐಯ್ಯರ್‍ರವರು ಕಾರಣ ಎಂದರೆ ತಪ್ಪಾಗಲಾರದು)
ಏಕೆಂದರೆ ನಾನು ರಾಜ್ಯದ 224 ವಿಧಾಸಭಾ ಕ್ಷೇತ್ರಗ¼ಲ್ಲಿ ವಿವಿಧÀ ಮೌಲ್ಯ ಮಾಪನ ವರದಿ ಮಾಡಲು ರಾಜ್ಯಾಧ್ಯಾಂತ ಆಸಕ್ತ ಮಾಧ್ಯಮ ಮಿತ್ರರ ಸಂಪರ್ಕ ಪಡೆಯುವುದು ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರುವುದರಿಂದ, ಫೈಲಟ್ ಆಗಿ ತುಮಕೂರಿನಲ್ಲಿ ಪ್ರಯೋಗ ಮಾಡಲು ಚಿಂತನೆ ಇದೆ.
ಈಗ ಕಾಲ ಒದಗಿ ಬಂದಿದೆ ಎನಿಸುತ್ತಿದೆ. ಆಲದ ಮರದ ಪಾರ್ಕ್‍ನಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದಲೇ ಆಲದ ಗಿಡ ಹಾಕಿಸಿ, ತುಮಕೂರು ಪ್ರೆಸ್ ಕ್ಲಬ್ ನಿಂದಲೇ ಆರಂಭವಾಗಿದೆಯೇನೋ ಎಂಬ ಭಾವನೆ ನನಗೆ ಮೂಡಿದೆ.
ಮುಂದೆ ಏನಾಗುವುದು ಕಾದು ನೋಡೋಣ?