11th November 2025
Share

TUMAKURU:SHAKTHIPEETA FOUNDATION

ಈ ಶುಭ ದಿನಕ್ಕೆ -ತುಣುಕು ಬರಹ-2022

“ಇಂದಿಗೆ (17.05.2022)ತುಂಬಿತು ನಮ್ಮ ಸಂಸಾರಕ್ಕೆ ನಲವತ್ತೇಳು ವರುಷ

ಇನ್ನೂ ಕುಂದಿಲ್ಲ, ನಿರಂತರ ಸಾಗಿದೆ  ನಮ್ಮ ನಡುವಿನ ಹರುಷ

ಈ ನಡುವೆ  ಕಾಲಲ್ಲಿ ಅಲ್ಲ್ಲಿ ನೋವು, ಇಲ್ಲಿನೋವು ಕಣ್ರೀ ಅಂತಾಳೆ

ಜೆಲ್ ಹಚ್ಕೋತ್ತಾಳೆ ತುಸು ಕಡಿಮೆ ಆಯಿತು ಎಂದು ಖುಷಿ ಪಡ್ತಾಳೆ

ಓಮ್ಮೊಮ್ಮೆ ಅಂತಾಳೆ ಎಲ್ಲಿಂದ ಬಂತು ರೀ ಈನೋವು, ಅಂತ ಹೇಳತ್ತಾಳೆ

ಕಾಲಿಗೆ ನೋವು ಎಣ್ಣೆ ಸವರುತ್ತಾಳೆ, ಈಗ ನೋವೇ ಇಲ್ಲಾರೀ ಅಂತಾಳೆ.

ಆಗ ತನ್ನ ನಗು ಮುಖ ತೋರಿಸುತ್ತಾಳೆ, ನನಗೆ ಸಮಾಧಾನ ತರುತ್ತಾಳೆ

ಈ ದಿನ ನಮ್ಮ ಮದುವೆ ಆದ ದಿನ ಹೇಳಿ ಸಂತೋಷದ ಪೆÇೀಸು ಕೊಡ್ತಾಳೆ

ಎಲ್ಲಾ ನೋವನ್ನು ಮರೆತು ನನ್ನ ಮನಸ್ಸಿಗೆ ಸಂತೋಷದ ಮುದಕೊಡ್ತಾಳೆ,

ಸಣ್ಣದಾಗಿ ಹಾಡುಗುಣಗುತ್ತಾಳೆ, ಆಗ ಅಂದ್ಕೋಂತ್ತೀನಿ ಇವಳಿಗೆ ನೋವು ಮಂಗಮಾಯಾ

ಬಿಗಿಯಾಗಿದೆ ನಮ್ಮಿಬ್ಬರ ನಡುವಿನ  ಸಂತೋಷದ ಜಾಲ, ಇದುವೇ ದೇವರ ಮಾಯಾ”

ನಮ್ಮ ಆರೋಗ್ಯ ಭಾಗ್ಯಕ್ಕೆ ಕಿರಿಯರ ಪ್ರೀತಿ, ಹಿರಿಯರ ಆಶೀರ್ವಾದ  ಸದಾ ಇರಲಿ

–                                                                                 –ಟಿ.ಆರ್.ರಘೋತ್ತಮ ರಾವ್