22nd December 2024
Share

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ಮಾಣ ಮಾಡುತ್ತಿರುವ ತುಮಕೂರಿನ ಮಹಾತ್ಮ ಗಾಂಧಿ ಸ್ಟೇಡಿಯಂ ವೀಕ್ಷಣೆ ಮಾಡಿದೆ. ಇಲ್ಲಿ ಇರುವ ವ್ಯವಸ್ಥೆ ಮತ್ತು ಮೂಲಬೂತ ಸೌಕರ್ಯಗಳ ಬಗ್ಗೆ ಒಂದು 10 ನಿಮಿಷದ ವಿಡಿಯೋ ಮತ್ತು ಒಂದು ಕಿರುಹೊತ್ತಿಗೆ ಸಿದ್ಧಪಡಿಸಲು ಎಂಡಿಯವರಾದ ಶ್ರೀ ರಂಗಸ್ವಾಮಿರವರಿಗೆ ಸಲಹೆ ನೀಡಲಾಗಿದೆ.

ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇನ್ನು ಒಂದೆರಡು ತಿಂಗಳಲ್ಲಿ ಲೋಕಾರ್ಪಣೆ ಮಾಡಲು ಇಚ್ಚಿಸಿದ್ದಾರೆ. ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಇದರ ಬಳಕೆ ಬಗ್ಗೆ ಒಂದು ಸವಾಲು ಎನಿಸುತ್ತಿದೆ.

ನಮ್ಮೂರ ಸ್ಟೇಡಿಯಂ ನೋಡ ಬನ್ನಿ ಕಾರ್ಯಕ್ರಮ ಆಯೋಜಿಸಲು, ಮಾರ್ಕೇಟ್ ಮಾಡುವ ಮೂಲಕ, ಅಂತರರಾಷ್ಟ್ರೀಯ,  ರಾಷ್ಟ್ರೀಯ, ರಾಜ್ಯ ಮಟ್ಟದ ಸರ್ಕಾರಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಒಂದು ಚಿಂತನೆ ಮೊಳಕೆಯೊಡಿದಿದೆ.

ಕಾವೇರಿ ನೀರಾವರಿ ನಿಗಮದ ವ್ಯಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರು ಮತ್ತು ಅವರ ಮುಂಜಾನೆ ಬಳಗದ ಸದಸ್ಯರು ಸುತ್ತಾಡಿ ಹಲವಾರು ವಿಷಯ ಹಂಚಿಕೊಂಡಿದ್ದಾರೆ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಕ್ರೀಡಾ ಪ್ರೇಮಿ ಶ್ರೀ ನರಸಿಂಹರಾಜುರವರು ಸಹ ಬಂದು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಇನ್ನೂ ಹಲವಾರು ಜನ ನನ್ನೊಂದಿಗೆ ಕೆಲವು ವಿಷಯ ಚರ್ಚೆ ಮಾಡಲು ಮುಂದಾಗಿದ್ದಾರೆ. ಜೊತೆಯಲ್ಲಿ ಬಿಜೆಪಿ ಧುರೀಣರಾದ ಶ್ರೀ ಶಿವಪ್ರಸಾದ್ ರವರು, ತಜ್ಞ ಶ್ರೀ ಸತ್ಯಾನಂದ್, ಶ್ರೀ ಶಶಿಧರ್, ಕೃಷಿಕ ಶ್ರೀ ಶಿವಕುಮಾರ್ ರವರು ಮತ್ತು ಇಲಾಖಾ ಅಧಿಕಾರಿಗಳು ಇದ್ದರು.