3rd February 2025
Share

TUMAKURU:SHAKTHIPEETA FOUNDATION

ತುಮಕೂರು ನಗರಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಪ್ರಗತಿ ಪರಿಶೀಲನೆ ನಡೆಸಿದ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆಯ ನಿರುದ್ಯೋಗಿಗಳ ಜೊತೆ ಚೆಲ್ಲಾಟ ಆಡಬೇಡಿ, ಉದ್ಯೋಗ ಸೃಷ್ಠಿಗೆ ಪೂರಕವಾದ ಚಟುವಟಿಕೆಗಳನ್ನು ಆರಂಭಿಸಿ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು

ದಿನಾಂಕ:27.05.2022 ರಂದು ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಎಡಿಬಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿರುವ ಕಟ್ಟಡದಲ್ಲಿ ನಿರಂತರವಾದ ಸ್ಕಿಲ್ ಟ್ರೈನಿಂಗ್ ನೀಡಲು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಸ್ಕಿಲ್ ಡೆವಲಪ್ ಮೆಂಟ್ ಇಲಾಖೆಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ತುಮಕೂರು ಜಿಲ್ಲೆಯ ಎಲ್ಲಾ ಇಂಜಿನಿಯರ್ ಕಾಲೇಜುಗಳು ಮತ್ತು ಕೈಗಾರಿಕಾ ಪ್ರದೇಶದ ಅಸೋಸಿಯೇಷನ್ ಹೇಳುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ನಿರಂತರವಾಗಿ ಪ್ರತಿ ತಿಂಗಳು ಸಭೆ ಕರೆಯಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ.ನಾಗೇಶ್ ರವರಿಗೆ  ಸೂಚನೆ ನೀಡಿದರು.

ತುಮಕೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಅನೂಕೂಲವಾಗುವ ಒಂದು ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದರು. ವಸಂತಾನರಸಾಪುರದ ಹಸೀರೀಕರಣಕ್ಕೆ ಚಾಲನೆ ನೀಡಲು ಸಲಹೆ ನೀಡಿದರು.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಲಹೆಯಂತೆ, ಗುಬ್ಬಿ ಶ್ರೀ ಚೆನ್ನಬಸವೇಶ್ವರ ಇಂಜಿನಿಯರ್ ಕಾಲೇಜಿನ ಶ್ರೀ ಡಿ.ಎಸ್.ಸುರೇಶ್ ಸಿದ್ಧಪಡಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ ಅಧಿಕಾರಿಗಳು ಮತ್ತು ಎಲ್ಲಾ ಇಂಜಿನಿಯರ್ ಕಾಲೇಜುಗಳ ಪ್ರತಿನಿಧಿಗಳು ಬಹುತೇಕ ಸಹಮತ ವ್ಯಕ್ತ ಪಡಿಸಿದರು.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರಿಗೆ  ಪಿಪಿಟಿ ಪ್ರದರ್ಶನ ಮಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಲು ಸ್ಮಾರ್ಟ್ ಸಿಟಿ ಎಂ.ಡಿ.ಯವರಾದ ಶ್ರೀ ರಂಗಸ್ವಾಮಿಯವರಿಗೆ ಸೂಚಿಸಿದರು.

ಜೊತೆಗೆ ತುಮಕೂರು ಜಿಲ್ಲೆಯ ಇಂಜಿನಿಯರ್ ಕಾಲೇಜುಗಳಲ್ಲಿರುವ ಇನ್ ಕ್ಯುಬೇಷನ್ ಸೆಂಟರ್ ಗಳಲ್ಲಿಯೂ ನಿರಂತರ ಚಟುವಟಿಕೆಗೆ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಸಭೆಯಲ್ಲಿ ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀ ಶಿವಶಂಕರ್, ಶ್ರೀ ಹರೀಶ್ ಮತ್ತು ಪದಾಧಿಕಾರಿಗಳು, ಜಿಲ್ಲೆಯ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲರುಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.