22nd December 2024
Share

TUMAKURU:SHAKTHIPEETA FOUNDATION

ಬಿಜೆಪಿ ಮತ್ತು ಆರ್.ಎಸ್.ಎಸ್. ಶಿಸ್ತಿನ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೆ. ನಿನ್ನೆ ತುಮಕೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯ ಕಾರಿಣಿ ಸಭೆಯಲ್ಲಿ ನೀರಾವರಿ ಬಗ್ಗೆ ಉಪನ್ಯಾಸ ನೀಡಲು ಅವಕಾಶವಿದ್ದರಿಂದ, ಬಾಜಪ ಸಭೆಯಲ್ಲಿ ಕುಳಿತು ಕೊಂಡು ವೀಕ್ಷಣೆ ಮಾಡಿದಾಗ ನನಗೆ ಅನಿಸಿದ್ದು, ಒಂದು ರಾಜಕೀಯ ಪಕ್ಷದಲ್ಲಿ, ತರಹನೂ ಸಭೆ ಮಾಡಬಹುದಾ ಎನಿಸಿತು.’

ರೈತರ ಸಭೆಯಾದರೂ ಒಂದು ಐಟಿ ಕಂಪನಿಯ ಶಿಸ್ತಿಗೆ ಕಡಿಮೆ ಇರಲಿಲ್ಲ. ಬಹಳ ಹಿಂದೆ ತುಮಕೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಸಭೆ ಆಯೋಜಿಸುತ್ತಿದ್ದ ನನಗೆ ಅಚ್ಚರಿ ಎನಿಸಿತು ಈ ಸಭೆಯ ಶಿಸ್ತು.

ಕೇವಲ ಎರಡು ಲೋಕಸಭಾ ಕ್ಷೇತ್ರ ಗೆಲ್ಲುತ್ತಿದ್ದ ಬಾಜಪ, ಇಂದು ದೇಶವನ್ನೇ ಆವರಿಸಿರುವದಕ್ಕೆ ಕಾರಣ ನನಗೆ ಇಂದು ಗೋಚರವಾಯಿತು. ಭಲೇ ಬಿಜೆಪಿ ಎನಿಸಿತು. ನನಗೆ ಈ ಸಭೆಯಲ್ಲಿ ಬಾಗವಹಿಸಲು ಅವಕಾಶ ನೀಡಿದ್ದ ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ಕರ್ನಾಟಕ ರೈತ ಮೋರ್ಚಾದ ರಾಜ್ಯಾಧ್ಯಕ್ಷರು ಆದ ಶ್ರೀ ಈರಣ್ಣ ಕಡಾಡಿಯವರು ಮತ್ತು ಬಾಜಪ ನಾಯಕರಾದ ಶ್ರೀ ಶಿವಪ್ರಸಾದ್‍ರವರಿಗೆ ಧನ್ಯವಾದ ಹೇಳಲೇ ಬೇಕಿನಿಸಿತು.

ಬಾಜಪ ಐಟಿ ಸೆಲ್ ನ ಶ್ರೀ ಗುರುಪ್ರಸಾದ್ ರವರು ಪಿಪಿಟಿ ವ್ಯವಸ್ಥೆ ಬಹಳ ಚೆನ್ನಾಗಿತ್ತು, ಅವರು ನನಗೆ ಬಹಳ ವರ್ಷಗಳಿಂದ ಆಗಾಗ ಹೇಳುತ್ತಿದ್ದರು ಸಾರ್ ನಿಮ್ಮ ಫೋರಂ ಚಿಂತನೆ ಮತ್ತು ನಮ್ಮ ಪಕ್ಷದ ಆಲೋಚನೆ ಒಂದೇ ತರ ಇರುತ್ತದೆ. ನಾನು ಬಹಳ ವಿಚಾರಗಳನ್ನು ಗಮನಿಸಿದ್ದೇನೆ ಎಂದು ಹೇಳುತ್ತಿದ್ದುದು ಸರಿಯೇನಿಸಿತು.

ಇತಿಹಾಸದ ನೆನಪು

ನಾನು 2004 ರ ಮೊದಲಿಗೆ ಕಾಂಗ್ರೆಸ್ ನಲ್ಲಿ ಸಕ್ರೀಯವಾಗಿ ಬಾಗವಹಿಸುತ್ತಿದ್ದೆ, ಗುಬ್ಬಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಗುಬ್ಬಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ನಂತರ ತುಮಕೂರಿಗೆ ಬಂದ ಮೇಲೆ ತುಮಕೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೆ.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದಾಗ, ನಮ್ಮ ಶ್ರೀ ಸೊಗಡು ಶಿವಣ್ಣನವರು ನಾನು ಬಿಜೆಪಿಗೆ ಸೇರಬೇಕಾದರೆ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ವಿಸರ್ಜನೆ ಮಾಡಿ ಬರಬೇಕು ಎಂಬುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದಾಗ ಪಕ್ಷ ಬದಲಾವಣೆಗೆÉ ಅಡ್ಡಿಯಾಯಿತು.

ಆಗಿನ ಜಿಲ್ಲಾಧ್ಯಾಕ್ಷರಾಗಿದ್ದ ಶ್ರೀ ಕಿರಣ್ ಕುಮಾರ್ ಸ್ವತಃ ಆಹ್ವಾನ ನೀಡಿದರೂ, ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಕರೆದರೂ ನಾನು ಬಿಜೆಪಿಗೆ ಹೋಗಲು ಸಾಧ್ಯಾವಾಗಲಿಲ್ಲ. ಕಾಂಗ್ರೆಸ್ ನಲ್ಲಿ ಉಳಿದರೂ ಅವರ್ಯಾರು ನನ್ನನ್ನು ನಂಬಲಿಲ್ಲ. ಅಂದಿನಿಂದ ಪಕ್ಷ ರಾಜಕಾರಣದಿಂದ ದೂರ ಉಳಿದ್ದಿದ್ದೇನೆ.

ನನಗೇಕೋ ಪಕ್ಷಾಂತರ ಮಾಡಲು ಮನಸ್ಸು ಬರಲಿಲ್ಲ, ಎಲ್ಲಾ ಪಕ್ಷದಲ್ಲೂ ಒಳ್ಳೆಯವರು ಇರುತ್ತಾರೆ, ಕೆಟ್ಟವರು ಇರುತ್ತಾರೆ, ನಾನು ಸಹ ಕೆಲವರಿಗೆ ಒಳ್ಳೆಯವನಾದರೆ, ಕೆಲವರಿಗೆ ಪ್ರಳಯಾಂತಕ, ಆನೆ ನಡೆದಿದ್ದೇ ದಾರಿ, ಅವನು ಹೇಳಿದ್ದೇ ನಡೆಯ ಬೇಕು ಎನ್ನುವವರು ಇದ್ದಾರೆ.

ತುಮಕೂರು ನಗರದ ಶ್ರೀನಗರದಲ್ಲಿ ಒಂದು ಕಾಂಗ್ರೆಸ್ ¸ಮಾರಂಭಕ್ಕೆ, ಬೆಂಗಳೂರಿನ ಆಗಿನ ಶಾಸಕರಾಗಿದ್ದ ಕ್ರಿಯಾ ಶೀಲ ವ್ಯಕ್ತಿ ಶ್ರೀ ಚಂದ್ರಶೇಖರ್ ರವರನ್ನು ಆಹ್ವಾನ ನೀಡಲು ನಾನು ಶ್ರೀ ಶಿವಕುಮಾರ್ ರವರು, ಶ್ರೀ ದೀಪುರವರು ಸೇರಿದಂತೆ ಒಂದು ತಂಡ ಹೋಗಿದ್ದೆವು.

 ಅವರು ಯಾವುದೋ ಉಧ್ಯಾನವನದಲ್ಲಿ ಇದ್ದರು, ಅಲ್ಲಿಗೆ ಹೋಗಿ ಆಹ್ವಾನ ಪತ್ರಿಕೆ ನೀಡಿದಾಗ, ಓದಿದರು, ಕೆಲವು ಕಾಲ ಮೌನವಾದರು, ನಂತರ ಬನ್ನಿ ನನ್ನ ಜೊತೆ ಎಂದು ಅವರ ಮನೆಗೆ ಕರೆದರು, ನಾವೂ ಹೋದೆವು. ಕಾಫಿ ಕೊಟ್ಟ ನಂತರ ನಾನು ಇದೂವರೆಗೂ ಯಾರನ್ನು ಮನೆಗೆ ಕರೆಯುವುದಿಲ್ಲಾ, ನಿಮ್ಮ ಆಹ್ವಾನ ಪತ್ರಿಕೆಯ ಅಂಶಗಳನ್ನು ನೋಡಿ ನನಗೆ ಬಹಳ ಆಶ್ಚರ್ಯ ಆಯಿತು. ಅದಕ್ಕೋಸ್ಕರ ಮನೆಗೆ ಕರೆದಿದ್ದೇನೆ ಎಂಬ ಮಾತು ಅದ್ಭುತ ಎನಿಸಿತ್ತು.

ನೀವೂ ಮೊದಲು ಬಿಜೆಪಿಯಲ್ಲಿ ಅಥವಾ ಆರ್.ಎಸ್.ಎಸ್.ನಲ್ಲಿ ಇದ್ರಾ ಎಂದು ಕೇಳಿದಾಗ ನನಗೂ ಆಶ್ಚರ್ಯ ಆಯಿತು. ಏಕೆ ಸಾರ್ ಕಾಂಗ್ರೆಸ್ ನಲ್ಲಿ ಈ ಥರ ಕಾರ್ಯ ಚಟುವಟಿಕೆ ಮಾಡಬಾರದು ಎಂದಾಗ, ಇದೇ ನನ್ನ ವಾದವೂ ಎಂಬ ಮಾತು ಆಡಿದ್ದು ಇತಿಹಾಸ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಎಸ್.ಸುರೇಶ್ ಕುಮಾರ್ ರವರು ನಾನು ಅವರಿಗೆ ಬರೆಯುತ್ತಿದ್ದ ಅಭಿವೃದ್ಧಿ ವಿಚಾರಗಳ ಪತ್ರ ನೋಡಿ, ಅವರ ಮನೆಗೆ ಆಹ್ವಾನ ನೀಡಿದ್ದರು. ನನಗೆ ಈ ವಿಷಯವನ್ನು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀ ಡಾ.ಎ.ಆರ್.ಮಂಜುನಾಥ್ ರವರು ತಿಳಿಸಿದ್ದರು.

ನಾನು ಮತ್ತು ನನ್ನ ಸ್ನೇಹಿತ ಶ್ರೀ ವಿನಯ್  ಭಟ್ಟ ಇಬ್ಬರೂ ಹೋಗಿದ್ದೆವು, ಅವರು ನನ್ನೊಂದಿಗೆ ಮಾತನಾಡಿದ ನಂತರ ಹೇಳಿದ ಒಂದು ಮಾತು ರಮೇಶ್ ನೀವೂ ಆರ್.ಎಸ್.ಎಸ್ ನಲ್ಲಿ ಆಥÀವಾ ಬಿಜೆಪಿಯಲ್ಲಿ ಇದ್ದರೆ, ಯಾವುದೋ ಮಟ್ಟಕ್ಕೆ ಹೋಗುತ್ತಿದ್ರಿ, ನಿಮ್ಮ ಆಯ್ಕೆ ಕಾಂಗ್ರೆಸ್, ನೀವೂ ಬದಲಾಗುವ ಹಾಗೆ ಕಾಣುತ್ತಿಲ್ಲ ಎಂದಿದ್ದ ಇತಿಹಾಸದ ಮಾತು ಇಂದು ನನಗೆ ನೆನಪಿಗೆ ಬಂತು.