22nd December 2024
Share

TUMAKURU:SHAKTHIPEETA FOUNDATION

ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯಸ್ವಾಮಿ ರವರೊಂದಿಗೆ ತುಮಕೂರು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖಾ ವತಿಯಿಂದ, ನದಿ ನೀರಿನಿಂದ ಕೆರೆಗಳಿಗೆ ನೀರು ತುಂಬಿಸಲು  ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ  ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ದಿನಾಂಕ:31.05.2022 ರಂದು ವಿಕಾಸಸೌದದಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವತಿಯಿಂದ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಯೋಜನೆಗಳ ಮೌಲ್ಯ ಮಾಪನ ವರದಿ ಸಿದ್ಧಪಡಿಸಯವ ಹಿನ್ನಲೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. 

ಸಣ್ಣ ನೀರಾವರಿ ಇಲಾಖೆ, ಇತಿಹಾಸದಲ್ಲಿ ಕೈಗೊಂಡಿರುವ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗಳ ಬಗ್ಗೆ, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಯೋಜನೆಗಳ ಬಗ್ಗೆ, ಈಗಾಗಲೇ ತುಮಕೂರು ಜಿಲ್ಲೆಯ ಕೆರೆಗಳಿಗೆ ಅಲೋಕೇಷನ್ ಆಗಿರುವ ನದಿ ನೀರಿನ ಬಗ್ಗೆ, ಕೆರೆಗಳಿಗೆ ನದಿ ನೀರು ತುಂಬಿಸಲು ಇನ್ನೂ ಅಗತ್ಯವಿರುವ ನದಿ ನೀರಿನ ಅಲೋಕೇಷನ್ ಬಗ್ಗೆ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗಳ ಸ್ಥಿತಿಗತಿ ಬಗ್ಗೆಯೂ ಚರ್ಚೆ ನಡೆಯಿತು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಮಗ್ರ ನೀರಾವರಿ ಯೋಜನೆಗಳ ಮೌಲ್ಯ ಮಾಪನ ಮಾಡುವ ಹಿನ್ನಲೆಯಲ್ಲಿ, ತುಮಕೂರು ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಮಾಡಿದ ನಂತರ, ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಲಿದೆ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೂ ಪತ್ರ ಬರೆದು ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯಡಿ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಲು ಮನವಿ ಮಾಡಿದ್ದು ಇತಿಹಾಸ.

ತುಮಕೂರು ಜಿಲ್ಲೆಯ ಚುನಾಯಿತ ಜನ ಪ್ರತಿನಿಧಿಗಳ ಕಿತ್ತಾಟದಿಂದ, ಇಲಾಖೆಗಳ ಸಮನ್ವಯ ಕೊರತೆಯಿಂದ  ಯೋಜನೆ ಕುಂಟುತ್ತಾ ಸಾಗಿದೆ ಎಂದರೆ ತಪ್ಪಾಗಲಾರದು.

ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಡಿಯಲ್ಲಿ ಇರುವ ಜಿಯೋಮೆಟಿಕ್ ಸೆಂಟರ್ ಮತ್ತು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‍ಗೆ ಮತ್ತು ಮಾಹಿತಿ ಕಣಜಕ್ಕೆ ನಿಖರವಾದ ಎಲ್ಲಾ ಮಾಹಿತಿಗಳನ್ನು ಅಫ್ ಲೋಡ್ ಮಾಡುವ ಬಗ್ಗೆಯೂ  ಚರ್ಚೆ ನಡೆಯಿತು.

ತುಮಕೂರು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಎಲ್ಲಾ ಡಿಜಿಟಲ್ ಮಾಹಿತಿಯನ್ನು 10 ದಿವಸದೊಳಗಾಗಿ ಅಫ್ ಲೋಡ್ ಮಾಡಲು ಅಧಿಕಾರಿಗಳಿಗೆ ಶ್ರೀ ಮೃತ್ಯುಂಜಯಸ್ವಾಮಿ ಖಡಕ್ ಆಗಿ ಸೂಚಿಸದರು.

ದಿನಾಂಕ:12.06.2022 ನೇ ಭಾನುವಾರ ತುಮಕೂರು ಜಿಲ್ಲೆಯ ಆಸಕ್ತ ಎಲ್ಲಾ ಸಂಘಟನೆಗಳ, ರಾಜಕೀಯ ಪಕ್ಷಗಳ, ಪರಿಣಿತರ ಸಭೆ ಕರೆದು 11 ವಿಧಾನಸಭಾ ಕ್ಷೇತ್ರವಾರು ಮೌಲ್ಯ ಮಾಪನ ಕರಡು ಪ್ರಸ್ತಾವನೆ ಬಗ್ಗೆ ಸಂವಾದ ನಡೆಸಲು ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಪ್ಪನವರು, ಚಿಂತಕರಾದ ಶ್ರೀ ಸಿ.ಕೆ.ಮಹೇಂದ್ರರವರು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

ನಂತರ ಕರಡು ಪ್ರಸ್ತಾವನೆಯನ್ನು 11 ವಿಧಾನಸಭಾ ಸದಸ್ಯರುಗಳಿಗೆ ನೀಡಿ ಅವರ ಪರಿಕಲ್ಪನೆ ವರದಿಗಳ ಬಗ್ಗೆಯೂ ಚರ್ಚೆ ನಡೆಸಲು ಚಿಂತನೆಯಿದೆ.

ತುಮಕೂರು ಜಿಲ್ಲೆಯ ಯಾವ ಇಲಾಖೆ, ಜಿಯೋಮೆಟಿಕ್ ಸೆಂಟರ್ ಮತ್ತು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‍ಗೆ ಮತ್ತು ಮಾಹಿತಿ ಕಣಜಕ್ಕೆ ನಿಖರವಾದ ಮಾಹಿತಿ ಅಫ್ ಲೋಡ್ ಮಾಡುವುದಿಲ್ಲವೋ ಅಂಥಹ ಇಲಾಖೆ ಎದರು ಧರಣಿ ನಡೆಸುವ ಬಗ್ಗೆ ಹೋರಾಟಗಾರರು ಚಿಂತನೆ ನಡೆಸುತ್ತಿದ್ದಾರೆ.