22nd December 2024
Share

TUMAKURU:SHAKTHIPEETA FOUNDATION

ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಉಧ್ಯಾನವನಗಳ ಹುಡುಕಾಟ 2001 ರಿಂದ ಇಲ್ಲಿಯವರೆಗೆ ಸುಮಾರು 21 ವರ್ಷಗಳ ನಿರಂತರ ಹೋರಾಟ.

ಹೋರಾಟದ ನೇತೃತ್ವ ವಹಿಸಿರುವುದು ಸಾಮಾನ್ಯ ಒಬ್ಬ ಪ್ರಜೆಯಲ್ಲ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 5 ಭಾರಿ ಸಂಸದರಾಗಿರುವ ಶ್ರೀ ಜಿ.ಎಸ್.ಬಸವರಾಜ್ ರವರು. ಅವರ ಜೊತೆ ಆವೇಶ, ಆಕ್ರೋಶ, ಕೂಗಾಟ, ಚೀರಾಟ ಮಾಡಿಕೊಂಡು  ಬಂದಿರುವ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಎಂಬ ಸಂಸ್ಥೆಯ ಪದಾಧಿಕಾರಿಗಳು.

ಈಗ ಸೋತು ಸುಣ್ಣವಾಗಿ ಶಕ್ತಿಪೀಠ ಫೌಂಡೇಷನ್ ಸಂಸ್ಥೆ, ತುಮಕೂರು ಪ್ರೆಸ್ ಕ್ಲಬ್ ಸಹಕಾರದಿಂದ ತನಿಖಾ ಪತ್ರಿಕಾವರದಿ ಮಾಡುವ ಮೂಲಕ, ತುಮಕೂರು ನಗರದಲ್ಲಿವೆ ಎಂದು ಹೇಳುತ್ತಿರುವ ಸುಮಾರು 939 ಉಧ್ಯಾನವನಗಳ ಜಿಯೋ ಟ್ಯಾಗಿಂಗ್ ಗೆ ಕೊನೆಯ ಪ್ರಯತ್ನ.

 ಪ್ರೆಸ್ ಕ್ಲಬ್ ಪದಾಧಿಕಾರಿಗಳು ಆಲದ ಮರದ ಪಾರ್ಕ್ ಸ್ಥಳಾಂತರ ಮಾಡಿದ 100 ದಿವಸದೊಳಗಾಗಿ ನಗರದಲ್ಲಿರುವ ಎಲ್ಲಾ ಉಧ್ಯಾವನಗಳ ಜಿಯೋಟ್ಯಾಗಿಂಗ್ ಮಾಡಿಸುವವರೆಗೂ ಶ್ರಮಿಸುವ ಪಣ ತೊಟ್ಟಿದ್ದಾರೆ. ಇಂದಿಗೆ 55 ದಿವಸ ಪೂರ್ಣಗೊಂಡಿದೆ. ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಮುಂದೆ, ಜಿಲ್ಲೆಯ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಘೋಷಣೆ ಮಾಡಲಾಗಿದೆ.

ನಗರಾಭಿವೃದ್ಧಿ ಕಾರ್ಯದರ್ಶಿಯವರಾದ ಶ್ರೀ ಅಜಯ್ ನಾಗಭೂಷಣ್ ರವರ ಬಳಿ ಸಮಾಲೋಚನೆ ನಡೆಸಿ, ಒತ್ತುವರಿ ಆಗಿರುವ ಉಧ್ಯಾನವನಗಳ ಬದಲಿಗೆ, ಒತ್ತುವರಿದಾರರು ಬದಲಿ ನಿವೇಶನ ನೀಡಿ, ಅಷ್ಟೆ ಪ್ರಮಾಣದ ಸ್ಥಳದಲ್ಲಿ ಉಧ್ಯಾನವನ ಮಾಡುವ ವಿನೂತನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ. ಸರ್ಕಾರಿ ಯೋಜನೆಗಳಿಗೆ ಉಧ್ಯಾನವನ ಬಳಸಿದ್ದರೆ, ಬದಲಿ ಸರ್ಕಾರಿ ಜಾಗದಲ್ಲಿ ಉಧ್ಯಾನವನ ಮಾಡಿ ಭೂ ಬಳಕೆ ಬದಲಾಯಿಸಿ.

ಈಗಾಗಲೇ ಇರುವ ಅರಣ್ಯ ಕಾಯ್ದೆ ಎಫ್.ಸಿ ಆಕ್ಟ್ ಮಾದರಿ ಅನುಸರಿಸಿ ನಿಯಮ ರೂಪಿಸಿದರೆ. ಒತ್ತುವರಿದಾರರು ನೆಮ್ಮದಿಯಿಂದ ಇರುತ್ತಾರೆ. ಪ್ರತಿ ವರ್ಷ ಕಪ್ಪಕಾಣಿಕೆ ಕೊಡುವುದು ತಪ್ಪುತ್ತದೆ.ಎಂಬ ಸಲಹೆಯನ್ನು ಜಿ.ಎಸ್.ಬಸವರಾಜ್ ರವರ ಸಮ್ಮುಖದಲ್ಲಿ ನೀಡಲಾಯಿತು. ಅವರು ತಕ್ಷಣ ಜಿಲ್ಲಾಧಿಕಾರಿಗಳಿಗೆ ಫೋನ್ ಮೂಲಕ ತಿಳಿಸಿದರು.

ಸಂಸದರು ಎಷ್ಟು ಭಾರಿ ಸಭೆ ಮಾಡಿರಬಹುದು, ದಿಶಾ ಸಮಿತಿ ಸಭೆಯಲ್ಲಿ, ಬಿಎಂಸಿ ಸಭೆಯಲ್ಲಿ, ಅಲ್ಲದೆ ಪ್ರತಿ ಶುಕ್ರವಾರ ಸಂಸದರು. ಶಾಸಕರು, ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸೇರಿದಂತೆ ಸಭೆ ನಡೆಸಿ ಜಿಐಎಸ್ ಲೇಯರ್ ಮಾಡಲು ನಿರಂತರವಾಗಿ ಶ್ರಮಿಸಿದ್ದರೂ ಸಾದ್ಯಾವಾಗಿಲ್ಲ ಎನ್ನುವುದಾದರೆ ಇದಕ್ಕಿಂತ ನಾಚಿಕೆಗೇಡು ಇನ್ನು ಏನಿದೆ.

ದಿನಾಂಕ:12.06.2022 ರಂದು ನಡೆಯುವ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ  ಪಕ್ಕಾ ಅನುಪಾಲನಾ ವರದಿ ನೀಡುವವರೆಗೂ ಮೇಲೆ ಹೇಳುವುದಿಲ್ಲ, ಮಾನ್ಯ ಎಸ್.ಪಿಯವರು ಜೈಲಿಗೆ ಬೇಕಾದರೂ ಹಾಕಿಸಲಿ. ಇದು ಕೊನೆಯ ಆಟ ಆಗ ಬಹುದು.