22nd December 2024
Share

TUMAKURU:SHAKTHIPEETA FOUNDATION

ತುಮಕೂರು ನಗರದಲ್ಲಿ ಮೂರನೇ ಹಂತದ ಹಸಿರು ತುಮಕೂರು  ಯೋಜನೆ ಮತ್ತು ಉಧ್ಯಾನವನಗಳ ದತ್ತು ಆಂದೋಲನ ಕಾರ್ಯಕ್ರಮದ ಸಭೆ ತುಮಕೂರಿನಲ್ಲಿ ಇಂದು (14.07.2022)  ನಡೆಯಿತು.

ಅನಿವಾರ್ಯ ಕಾರಣಗಳಿಂದ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಈ ಸಭೆಗೆ ಹಾಜರಾಗಿರಲಿಲ್ಲ. ಮಧ್ಯಾಹ್ನ ಕುಣಿಗಲ್ ರಸ್ತೆಯ ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಗುರುಪೂರ್ಣಿಮಾ ಅಂಗವಾಗಿ ದರ್ಶನಕ್ಕೆ ಬಂದಿದ್ದರು.

ಸಾಯಿಬಾಬಾ ದೇವಾಯಲದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಹೇಳಿದ ಮಾತು. ತುಮಕೂರು ನಗರದಲ್ಲಿ ಹಸಿರು ತುಮಕೂರು ಯೋಜನೆಯನ್ನು ಯಶಸ್ವಿಯಾಗಿ ಮಾಡೋಣ ಎಂಬ ಮಾತು ಕಾಕತಾಳಿಯವಾಗಿತ್ತು. ಅರಣ್ಯ ಅಧಿಕಾರಿಗಳಿಂದ ಪ್ರಸ್ತಾವನೆ ಬಂದ ತಕ್ಷಣ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಎರಡನೇ ಹಂತದ ಹಸಿರು-ತುಮಕೂರು ಯೋಜನೆ ಗಿಡಗಳನ್ನು, ನಿರ್ಮಾಣ ಹಂತದಲ್ಲಿ ಇದ್ದ  ಇದೇ ಸಾಯಿಬಾಬಾ ದೇವಾಲಯದ ಆವರಣದಲ್ಲಿ ಸಂಗ್ರಹ ಮಾಡಿ, ನಗರದ ತುಂಬ ಹಂಚಲಾಗಿತ್ತು.

ಆಗಿನ ಜಿಲ್ಲಾಧಿಕಾರಿಗಳಾದ ಶ್ರೀ ಡಾ. ಸಿ.ಸೋಮಶೇಖರ್ ರವರು ಹಸಿರು ತುಮಕೂರು ಯೋಜನೆಯ ಗಿಡ ಹಾಕಲು ಬಂದಿದ್ದು, ಜಯನಗರಪೂರ್ವದಲ್ಲಿರುವ ಸಾಯಿಬಾಬಾ ದೇವಾಲಯದ ಆವರಣದ ರಸ್ತೆಗೆ. ಅದೂ ಬೆಳಿಗ್ಗೆ 6 ಗಂಟೆಗೆ.

ಇದರಲ್ಲಿ ಏನಿದೆ ಅಂಥ ವಿಶೇಷ ಅಂದು ಕೊಳ್ಳುತ್ತಿರಾ ? ಹೌದು ಅಂದು ಹಸಿರು ತುಮಕೂರು ಯೋಜನೆಗೆ ಆಗಿನ ಶಾಸಕರಾದ ಶ್ರೀ ಸೊಗಡುಶಿವಣ್ಣನವರಿಗೂ ಹಸಿರು ತುಮಕೂರು ಯೋಜನೆಗೂ ಹಸಿರು ಯುದ್ಧ ನಡೆಯುತ್ತಿತ್ತು.

ಜಿಲ್ಲಾಧಿಕಾರಿಗಳು ಈ ವಿವಾದದಲ್ಲಿಯೂ ಗಿಡ ಹಾಕಲು ಮುಂದಾದರೂ, ಬೆಳಿಗ್ಗೆ ಯಾರು ಜನ ಸೇರುವುದಿಲ್ಲ, ಯಾರಿಗೂ ಗೊತ್ತಾಗುವುದಿಲ್ಲ ಎಂದು ಕೊಂಡು ಬಂದಿದ್ದರು ಎಂಬ ಮಾತು ನನ್ನದಾಗಿತ್ತು.  ಶ್ರೀ ವೀರಪ್ಪದೇವರು ಮತ್ತು ತಂಡದ ಸುಮಾರು ನೂರಾರು ಜನರು ಬೆಳಿಗ್ಗೆ 6 ಗಂಟೆಗೆ ಜಮಾಯಿಸಿದ್ದರು. ನಾಳಿನ ಪತ್ರಿಕೆಗಳಲ್ಲಿ ದೊಡ್ಡವರದಿಯೂ ಆಗಿತ್ತು.

ಸೊಗಡುರವರ  ಬಾóಷೆಯಲ್ಲಿ  ಸುಭಾಷಿತ ಪದಗಳು ಹರಿದಾಡಿದ್ದು ಇತಿಹಾಸ.  ಎಷ್ಟೇ ವಿವಾದಗಳು ಇದ್ದರು, ಹಸಿರು ತುಮಕೂರು ಯೋಜನೆಯಡಿ ಹಾಕಿದ ಗಿಡಗಳು ಇಂದು ರಾರಾಜಿಸುತ್ತಿವೆ. ಇಂದು ಸಹ ಜಿಲ್ಲಾಧಿಕಾರಿಗಳು ಸಾಯಿಬಾಬಾ ಮಂದಿರದಲ್ಲಿ ಹೇಳಿದ ಮಾತುಗಳು ನಿಜಕ್ಕೂ ಅರ್ಥಪೂರ್ಣವಾಗಿತ್ತು.

ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಚನ್ನಬಸಪ್ಪನವರು ಹಾಜರಿದ್ದರು, ತುಮಕೂರಿನ ಸರ್ಕಾರಿ ಐಟಿಐ ಕಾಲೇಜಿಗೆ ಜಮೀನು ಮಂಜೂರಾತಿ ಬಗ್ಗೆ, ದಿಶಾ ಸಭೆಯಲ್ಲಿ ಚರ್ಚೆ ನಡೆದಿದ್ದರ ಹಿನ್ನಲೆಯಲ್ಲಿ ಒಂದು ವಾರದಲ್ಲಿ ಐಟಿಐ ಕಾಲೇಜಿಗೆ ಜಮೀನು ಮಂಜೂರು ಮಾಡಲೇ ಬೇಕು ಎಂದು ಜಿಲ್ಲಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಹೇಳಿದ ವಿಚಾರವೂ ಅರ್ಥಪೂರ್ಣವಾಗಿತ್ತು.

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಸಾಯಿಬಾಬಾ ಮಂದಿರದಲ್ಲಿ, ಜಿಲ್ಲಾಧಿಕಾರಿಗಳು ಹೇಳಿದÀ ಹಸಿರು ತುಮಕೂರು ಮಾತಿಗೆ ಪ್ರತಿಕ್ರಿಯಿಸಿ, ಸಾಯಿಬಾಬಾ ಪ್ರೇರಣೆ ಇದೆ. ಈ ಯೋಜನೆ ಯಶಸ್ವಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಳಿಗ್ಗೆ ನಡೆದ ಸಭೆಯಲ್ಲಿ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಅಧಿಕಾರಿಗಳಿಗೆ ನೀಡಿದ ಖಡಕ್ ಹಸಿರು ಸೂಚನೆ ಮತ್ತು ಸಾಯಿಬಾಬಾರವರ ಹಸಿರು ಆದೇಶ ಖಂಡಿತಾ ಯೋಜನೆ ಯಶಸ್ವಿಯಾಗಲಿದೆ ಎಂಬ ಭಾವನೆ ನನ್ನದಾಗಿದೆ.