21st November 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಲೆಕ್ಕದಲ್ಲಿ ಇವೆ ಎನ್ನಲಾದ 1596 ಕೆರೆಕಟ್ಟೆಗಳು ಮತ್ತು ಗೂಗಲ್ ಇಮೇಜ್ ಇಮೇಜ್ ಮೂಲಕ ಇವೆ ಎನ್ನಲಾದ 4365 ಜಲಸಂಗ್ರಹಾಗಾರಗಳ ಬಗ್ಗೆ ನಿಖರವಾದ ಡಿಜಿಟಲ್ ಡಾಟಾ ತಪಾಸಣೆ ಕೆಲಸ ದಿನಾಂಕ:14.07.2022 ರಿಂದ  ಆರಂಭವಾಯಿತು.

ದಿನಾಂಕ:12.07.2022 ರಂದು ನಡೆದ ದಿಶಾ ಸಭೆಯಲ್ಲಿ ಈ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆದಿತ್ತು. ದಿಶಾ ಸಮಿತಿ ಸದಸ್ಯಕಾರ್ಯದರ್ಶಿಯವರಾದ ಶ್ರೀಮತಿ ಕೆ.ವಿದ್ಯಾಕುಮಾರಿರವರು, ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿ, ಜಿಲ್ಲೆಯ 330 ಗ್ರಾಮಪಂಚಾಯಿತಿಗಳಿಂದ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಿಂದ ಲಿಖಿತವಾದ ಅನುಮೋದಿತ ಪಟ್ಟಿಯನ್ನು ಸಂಗ್ರಹ ಮಾಡಲು ಸೂಚನೆ ನೀಡಿರುವ ಮಾಹಿತಿಯೂ ದೊರಕಿತು.

ಎನ್.ಆರ್.ಡಿ.ಎಂ.ಎಸ್ ವಿಭಾಗಕ್ಕೆ ಭೇಟಿ ನೀಡಿ, ಸಣ್ಣ ನೀರಾವರಿ ಇಲಾಖೆಯಲ್ಲಿನ 372 ರ ಪಟ್ಟಿ ಮತ್ತು ಜಿಲ್ಲಾ ಪಂಚಾಯತ್ ಕೆರೆ-ಕಟ್ಟೆಗಳ ಸುಮಾರು 999 ಸೇರಿದಂತೆ 1371 ರ ಪಟ್ಟಿಯನ್ನು ಶ್ರೀ ಸತೀಶ್ ರವರಿಂದ ಪಡೆಯಲಾಗಿದೆ. ಇಲ್ಲೂ ಸಹ ಸರ್ಕಾರಿ ಲೆಕ್ಕದಲ್ಲಿರುವ ಸುಮಾರು 1596 ರ ಡಿಜಿಟಲ್ ಮಾಹಿತಿ ಲಭ್ಯವಿಲ್ಲ. ಗ್ರಾಮಪಂಚಾಯತ್ ಪಿಡಿಓ ರವರು ಬಂದು ಮಾಹಿತಿ ನೀಡಿದರೆ ಅಪ್  ಡೇಟ್ ಮಾಡಲಾಗುವುದು ಎಂಬ ಮಾಹಿತಿ ನೀಡಿದರು.

ನಂತರ ಜಲಶಕ್ತಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರೊಂದಿಗೂ ಚರ್ಚೆ ನಡೆಸಲಾಗಿದೆ.

ಜಲಶಕ್ತಿ ಕೇಂದ್ರದಲ್ಲಿ ನಮ್ಮ ಪ್ರತಿಜ್ಞೆ, ದೇಶದ 734 ಜಿಲ್ಲೆಗಳಲ್ಲಿ ಆರಂಭವಾಗಿರುವ, ಜಲಶಕ್ತಿ ಕೇಂದ್ರಗಳಿಗೆ ಮಾದರಿಯಾಗ ಬೇಕು, ನಮ್ಮ ಜಿಲ್ಲೆಯ ಈ ಜಲಶಕ್ತಿ ಕೇಂದ್ರ ಎಂಬುದಾಗಿದೆ.

ಜೊತೆಯಲ್ಲಿ ಪ್ರಜಾ ಪ್ರಗತಿ ಪತ್ರಿಕೆಯ ಸಂಪಾದಕರಾದ ಶ್ರೀ ನಾಗಣ್ಣನವರು, ಶ್ರೀ ಸತ್ಯಾನಂದ್ ರವರು, ಶ್ರೀ ವೇದಾನಂದಮೂರ್ತಿಯವರು, ಶ್ರೀ ರಾಮಮೂರ್ತಿರವರು, ಶ್ರೀ ಹರೀಶ್ ಆಚಾರ್ಯರವರು ಭಾಗವಹಿÀಸಿದ್ದರು.

ಜಿಲ್ಲಾ ಪಂಚಾಯತ್ ಚೀಪ್ ಪ್ಲಾನಿಂಗ್ ಆಫೀಸರ್ ಶ್ರೀ ಸಣ್ಣಮಸಿಯಪ್ಪನವರು, ಶ್ರೀ ಉಮೇಶ್ ರವರು ಮತ್ತು ಶ್ರೀ ಸತೀಶ್ ಕುಮಾರ್ ರವರು ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ, ಅಗತ್ಯವಿರುವ  ಮೂಲಭೂತ ಸೌಕರ್ಯದ ಬಗ್ಗೆ ಬೆಳಕು ಚೆಲ್ಲಿದರು.

ಇಂದಿನಿಂದ ಪ್ರತಿ 15 ದಿವಸಕ್ಕೊಮ್ಮೆ ಡಿಜಿಟಲ್ ತಪಾಸಣೆ ಮಾಡಲಾಗುವುದು, ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಸೂತ್ರದಲ್ಲಿಯೇ, ಪ್ರತಿ 15 ದಿವಸಕ್ಕೊಮ್ಮೆ ಸಭೆ ಸೇರಿ ಚರ್ಚಿಸಲು ಆದೇಶ ಮಾಡಲಾಗಿದೆ.

ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ, ಕೇಂದ್ರ ಸರ್ಕಾರದ ಯೋಜನೆಗಳ ಅಧ್ಯಯನ ಮಾಡುವುದು ನನ್ನ ಕರ್ತವ್ಯವಾಗಿದೆ. ಜೊತೆಗೆ ಜಲಗ್ರಂಥದ ಮಾಹಿತಿ ಸಂಗ್ರಹಕ್ಕೂ ಇದು ಅನೂಕೂಲವಾಗಲಿದೆ.

ಜಿಲ್ಲೆಯ 330 ಗ್ರಾಮಪಂಚಾಯಿತಿಗಳಿಗೂ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಿಗೂ ಭೇಟಿ ನೀಡಲಾಗುವುದು. ಮತ್ತೊಮ್ಮೆ ಎಲ್ಲರಿಗೂ ಕೆರೆ-ಕಟ್ಟೆಗಳ ಮಾಹಿತಿ ನೀಡಲು ಜ್ಞಾಪನ ಪತ್ರ ಬರೆಯುವ ಬಗ್ಗೆ,  ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ಅತೀಕ್ ರವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.