22nd December 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಪ್ರತಿಯೊಂದು ಸ್ವತ್ತಿನಲ್ಲಿರುವ ಮರಗಳ ಡಿಜಿಟಲ್ ಗಣತಿ ಮಾಡಲು ಒಂದು ಆಪ್ ಅನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಸಿದ್ಧಪಡಿಸಿದೆ. ಈ ಆಪ್ ಗೆ ಇನ್ನೂ ಹೆಸರು ಇಟ್ಟಿಲ್ಲ,

 ಪ್ರಾಯೋಗಿಕವಾಗಿ ತುಮಕೂರು ನಗರzಲ್ಲಿರುವÀ ಜಿಲ್ಲಾಧಿಕಾರಿಯವg ಮನೆಯ ಆವರಣದಿಂದಲೇ ದಿನಾಂಕ:22.07.2022 ನೇ ಶುಕ್ರವಾರ ಬೆಳಿಗ್ಗೆ ಡಿಜಿಟಲ್ ಗಣತಿ ಮಾಡಲು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರು ವಿಶೇಷ ಆಸಕ್ತಿ ವಹಿಸಿದ್ದಾರೆ. ನಂತರ ಆಪ್ ನ ಸಾಧಕ-ಭಾದಕಗಳನ್ನು ನೋಡಿಕೊಂಡು ಆಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.

ಸ್ವತಃ ಜಿಲ್ಲಾಧಿಕಾರಿಯವರೇ ತಮ್ಮ ಮನೆ ಆವರಣದಲ್ಲಿನ ಮರಗಿಡಗಳನ್ನು ಪೋರ್ಟಲ್ ಗೆ ಅಫ್ ಲೋಡ್ ಮಾಡಿದ್ದಾರೆ, ನಾವು ಸಹ ನಮ್ಮ ನಮ್ಮ ಸ್ವತ್ತಿನಲ್ಲಿರುವ ಮರಗಿಡಗಳನ್ನು ಪೋರ್ಟಲ್ ಗೆ ಅಫ್ ಲೋಡ್ ಮಾಡಲೇ ಬೇಕು ಎಂಬ ಭಾವನೆ ನಗರದ ಸಾರ್ವಜನಿಕರಿಗೆ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳ ಮನಸ್ಸಿನಲ್ಲಿ ಬರಲಿ ಎಂಬುದು ಇದರ ಹಿನ್ನಲೆ.

ಈ ಬಗ್ಗೆ ದಿನಾಂಕ:20.07.2022 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ಉಪವಿಭಾಗಾಧಿಕಾರಿಯವರಾದ ಶ್ರೀ ಅಜಯ್ ರವರು ಇದ್ದರು.

ದಿನಾಂಕ:14.07.2022 ರಂದು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಅಧ್ಯಕ್ಷತೆಯಲ್ಲಿ ಹಸಿರು ತುಮಕೂರು ಮತ್ತು ಉಧ್ಯಾನವನಗಳ ದತ್ತು ಆಂದೋಲನದ ಜನ ಜಾಗೃತಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶಾಸಕರು ಮತ್ತು ಸಂಸದರು ವಿವಿಧ ಇಲಾಖಾ ಅಧಿಕಾರಿಗಳಿಗೆ ಹಲವಾರು ಸೂಚನೆಗಳನ್ನು ನೀಡಿದ್ದರು,

ಇಲಾಖಾವಾರು ಏನೇನು ಕ್ರಮ ಕೈಗೊಂಡಿದ್ದಾರೆ ಎಂಬ ಟಿಪ್ಪಣೆಯೊಂದಿಗೆ ಜಿಲ್ಲಾಧಿಕಾರಿಯವರ ಮನೆ ಆವರಣಕ್ಕೆ ಬರಲು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರಿಗೆ ಜಿಲ್ಲಾಧಿಕಾರಿಗಳಿಂದಲೇ ಪತ್ರ ಬರೆಸಲು ಶ್ರೀ ಜಿ.ಎಸ್.ಬಸವರಾಜ್ ರವರು ಸೂಚಿಸಿದ್ದಾರೆ.

  1. ಅರಣ್ಯ ಇಲಾಖಾ ಅಧಿಕಾರಿಗಳು ಹಸಿರು ತುಮಕೂರು ಯೋಜನೆಯ ರೂಪುರೇಷೆಗಳ  ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  2. ಸಾಮಾಜಿಕ ಅರಣ್ಯ ಇಲಾಖಾ ಅಧಿಕಾರಿಗಳು ಹಸಿರು ತುಮಕೂರು ಯೋಜನೆಯ ರೂಪುರೇಷೆಗಳ  ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  3. ತುಮಕೂರು ಮಹಾನಗರ ಪಾಲಿಕೆಯ ಗ್ರೀನ್ ನೋಡೆಲ್ ಆಫೀಸರ್ ರವರಿಗೆ ಈಗಾಗಲೇ ಟಾಸ್ಕ್ ನೀಡಿದ್ದು ಅವರು ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  4. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ  ಗ್ರೀನ್ ನೋಡೆಲ್ ಆಫೀಸರ್ ರವರಿಗೆ ಈಗಾಗಲೇ ಟಾಸ್ಕ್ ನೀಡಿದ್ದು ಅವರು ಸಹ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  5. ತುಮಕೂರು ಸ್ಮಾರ್ಟ್ ಸಿಟಿ ಗ್ರೀನ್ ನೋಡೆಲ್ ಆಫೀಸರ್ ರವರಿಗೆ ಈಗಾಗಲೇ ಟಾಸ್ಕ್ ನೀಡಿದ್ದು ಅವರು ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  6. ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ ಆಫೀಸರ್ ರವರಿಗೆ ಈಗಾಗಲೇ ಟಾಸ್ಕ್ ನೀಡಿದ್ದು ಅವರು ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  7. ಡಿಡಿಪಿಐ ರವರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲೂ ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  8. ಪಿಯು, ಡಿಡಿ ರವರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲೂ  ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  9. ತುಮಕೂರು ವಿಶ್ವ ವಿದ್ಯಾಲಯದ ಕುಲಪತಿಗಳು  ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲೂ  ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  10. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಇಂಜಿನಿಯರ್ ಕಾಲೇಜುಗಳಲ್ಲೂ  ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  11. ತುಮಕೂರು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರವರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನ್ಯಾಷನಲ್ ಬ್ಯಾಂಕ್‍ಗಳಲ್ಲೂ   ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  12. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಗನವಾಡಿ ಮತ್ತು ಸ್ತ್ರಿ ಶಕ್ತಿ ಸಂಘಗಳಲ್ಲೂ ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  13. ತುಮಕೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಎನ್.ಆರ್.ಎಲ್ ಎಮ್ ಫೆಡರೇಷನ್ ಮತ್ತು ಸಂಘಗಳಲ್ಲೂ ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  14. ಪಾಲಿಕೆ ಅಧಿಕಾರಿಗಳು ತುಮಕೂರು ಮಹಾನಗರ ಪಾಲಿಕೆಯ  ವ್ಯಾಪ್ತಿಯಲ್ಲಿರುವ ನಾಗರೀಕ ಹಿತರಕ್ಷಣಾ ಸಮಿತಿಗಳ/ ಸಂಘಗಳಲ್ಲೂ ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  15. ಪಾಲಿಕೆ ಅಧಿಕಾರಿಗಳು ತುಮಕೂರು ಮಹಾನಗರ ಪಾಲಿಕೆಯ  ಬಿಎಲ್‍ಓಗಳ ವ್ಯಾಪ್ತಿ ನಕ್ಷೆ ಮತ್ತು  ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  16. ಪಾಲಿಕೆ ಅಧಿಕಾರಿಗಳು ತುಮಕೂರು ಮಹಾನಗರ ಪಾಲಿಕೆಯ  ಬಡಾವಣೆಗಳÀ ವ್ಯಾಪ್ತಿ ನಕ್ಷೆ ಮತ್ತು  ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  17. ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯವರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯುವ ಸಂಘಟನೆಗಳಲ್ಲೂ ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  18. ನೆಹರು ಯುವ ಕೇಂದ್ರದವರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯುವ ಸಂಘಟನೆಗಳಲ್ಲೂ ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  19. ತುಮಕೂರು ಜಿಲ್ಲಾ ಸಹಕಾರ ಸಂಘಗಳ ನಿಬಂಧಕರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪತ್ತಿನ ಸಹಕಾರ ಸಂಘಗಳು ಮತ್ತು ಅರ್ಬನ್ ಸಹಕಾರಿ ಬ್ಯಾಂಕ್‍ಗಳಲ್ಲೂ   ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಿ, ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  20. ರೈಸ್ ಮಿಲ್ ಅಸೋಶಿಯೇಷನ್ ಪಧಾದಿಕಾರಿಗಳು ಎಷ್ಟು ಉಧ್ಯಾನವನಗಳನ್ನು ದತ್ತು ಪಡೆಯಲು ಆಸಕ್ತಿ ಇದ್ದಾರೆ ಎಂಬ ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  21. ಜಿಲ್ಲಾ ಕೈಗಾರಿಕಾ ಕೇಂದ್ರದವರು ಎಷ್ಟು ಕೈಗಾರಿಕೆಗಳು, ಎಷ್ಟು ಉಧ್ಯಾನವನಗಳನ್ನು ದತ್ತು ಪಡೆಯಲು ಆಸಕ್ತಿ ಇದ್ದಾರೆ ಎಂಬ ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  22. ತುಮಕೂರು ಎಂಪ್ರೆಸ್ ಕಾಲೇಜಿನ ಕುಟುಂಬದವರಿಗೆ ಈಗಾಗಲೇ ಟಾಸ್ಕ್ ನೀಡಿದ್ದು ಅವರು ಸಹ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  23. ಕೆಪಿಟಿಸಿಎಲ್ ಇಂಜಿನಿಯರ್ ಗಳು ನಗರದ ಹೆಚ್.ಟಿ. ಲೈನ್ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  24. ಬೆಸ್ಕಾಂ ಇಂಜಿನಿÀಯರ್‍ಗಳು ಲೈನ್ ಕೆಳಗಿನ ಮರಗಳ ಟ್ರಿಮ್ ಮಾಡುವ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  25. ಯುಜಿಡಿ ಇಂಜಿನಿÀಯರ್‍ಗಳು ನಗರದಲ್ಲಿರುವ ಅವರ ಪೈಪ್ ಗಳ ಜಾಲಗಳಿಗೆ ಮರಗಳಿಂದ ಆಗುವ ಸಾಧಕ-ಬಾಧಕಗಳ   ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  26. ಗ್ಯಾಸ್ ಕಂಪನಿಯ ಇಂಜಿನಿÀಯರ್‍ಗಳು ನಗರದಲ್ಲಿರುವ ಅವರ ಪೈಪ್ ಗಳ ಜಾಲಗಳಿಗೆ ಮರಗಳಿಂದ ಆಗುವ ಸಾಧಕ-ಬಾಧಕಗಳ   ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  27. ಬಿಎಸ್‍ಎನ್‍ಎಲ್ ಹಾಗೂ ಇತರೆ ಖಾಸಗಿ ಕಂಪನಿಗಳ ಇಂಜಿನಿÀಯರ್‍ಗಳು ನಗರದಲ್ಲಿರುವ ಅವರ ಕೇಬಲ್ ಜಾಲಗಳಿಗೆ ಮರಗಳಿಂದ ಆಗುವ ಸಾಧಕ-ಬಾಧಕಗಳ   ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  28. ಹಸಿರು ತುಮಕೂರು ಮತ್ತು ಉಧ್ಯಾನವನಗಳ ದತ್ತು ಆಂದೋಲನದ ಜನಜಾಗೃತಿ ಮತ್ತು ಪಾರದರ್ಶಕತೆ ಬಗ್ಗೆ ಅರಿವು ಮೂಡಿಸಲು ಮುಂದೆ ಬಂದಿರುವ ತುಮಕೂರು ಪ್ರೆಸ್ ಕ್ಲಬ್ ಲಿಖಿತ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  29. ನಗರದ ಪರಿಸರ ಆಸಕ್ತರು ಅವರ ಸಲಹೆಗಳ ಲಿಖಿತ ಪಟ್ಟಿಯೊಂದಿಗೆ ಸಭೆಗೆ ಆಗಮಿಸಬೇಕಿದೆ.
  30. ಇನ್ನೂ ಯಾವುದಾದರೂ ಇಲಾಖೆಗಳ ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಚರ್ಚೆ ಮಾಡಿ ಅಂತಹ ಇಲಾಖೆಗಳಿಗೂ ಸಭೆಯ ನೋಟೀಸ್ ನೀಡುವುದು ಸೂಕ್ತವಾಗಿದೆ.

ಮುಂದಿನ ಸಭೆ ಗ್ರೀನ್ ನೋಡೆಲ್ ಆಫೀಸರ್ ಗಳಿಗೆ ತರಬೇತಿ ನೀಡುವುದಾಗಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ಸಹ ಗ್ರೀನ್ ನೋಡೆಲ್ ಆಫೀಸರ್ ನೇಮಕ ಮಾಡಲೇ ಬೇಕಿದೆ. ನಂತರ ನಿರ್ದಿಷ್ಠ ಸ್ಥಳಗಳನ್ನು, ನಿರ್ಧಿಷ್ಠ ಸಂಸ್ಥೆಗಳಿಗೆ ಜಿಐಎಸ್ ಲೇಯರ್ ಗಳೊಂದಿಗೆ ಹಂಚಿಕೆ ಮಾಡಲಾಗುವುದು.