22nd December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ರಿಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್(RETE) ಯೋಜನೆಯಡಿಯಲ್ಲಿ, ಅಭಿವೃದ್ಧಿಯಲ್ಲಿ ರಾಜ್ಯದ 30 ಜಿಲ್ಲೆಗಳ ಇಂಜಿನಿಯರ್  ಕಾಲೇಜುಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಿರುವುದಕ್ಕೆ, ಉನ್ನತ ಶಿಕ್ಷಣ ಸಚಿವರಾದ ಶ್ರೀ ಅಶ್ವತ್ ನಾರಾಯಣರವರು ಮತ್ತು ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಮತ್ತು ಸಲಹೆ ನೀಡಿದ ವಿಷನ್ ಗ್ರೂಪ್ ಗೆ ಅಭಿನಂದನೆ.

ಇನ್ಮೊಂದು ಜಿಲ್ಲೆಗೂ ಒಂದು ಇಂಜಿನಿಯರ್ ಕಾಲೇಜು ಜೋಡಣೆ ಮಾಡಲು ಮನವಿ ಮಾಡಲಾಗುವುದು.

ರಾಜ್ಯದ 30 ಜಿಲ್ಲೆಗಳಲ್ಲೂ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆÀ ಕನಿಷ್ಟ 10 ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಲು ಘೋಷಣೆ ಮಾಡಿರುವುದು ಹರ್ಷ ತಂದಿದೆ. ಈ ಬಗ್ಗೆ ಉನ್ನತ ಸಮಿತಿಯ ಜೊತೆ ಸಮಾಲೋಚನೆ ಮಾಡಿದ ನಂತರ, ಯೋಜನೆಗೆ ನಿರ್ದಿಷ್ಠವಾದ ರೂಪುರೇಷೆ ರೂಪಿಸಲು ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಯೋಜನಾ ಇಲಾಖೆಯು ಸಹಭಾಗಿತ್ವ ಪಡೆಯಲು ಮಾನ್ಯ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು.

ತುಮಕೂರು ಜಿಲ್ಲೆಯಲ್ಲಿ ಶ್ರೀ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಿದ್ದು, ಮುಖ್ಯಸ್ಥರಾದ  ಶ್ರೀ ಸುರೇಶ್ ರವರೊಂದಿಗೆ ಈಗಾಗಲೇ ಸಮಾಲೋಚನೆ ಮಾಡಿದ್ದು. ಈ ಬಗ್ಗೆ ಮಾನ್ಯ ಶ್ರೀ ಅಶ್ವತ್ ನಾರಾಯಣರವರ ಅಧ್ಯಕ್ಷತೆಯಲ್ಲಿ 30 ಜಿಲ್ಲೆಗಳ ಇಂಜಿನಿಯರಿಂಗ್ ಕಾಲೇಜುಗಳ ಮತ್ತು ದಿಶಾ ಸಮಿತಿ ಸದಸ್ಯರ ಒಂದು ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ.

ಶೀಘ್ರದಲ್ಲಿಯೇ ಸಮಾವೇಶದ ರೂಪುರೇಷೆ ನಿರ್ಧರಿಸಲಾಗುವುದು.