TUMAKURU:SHAKTHIPEETA FOUNDATION
ಭಾರತ ದೇಶ ಡಿಜಿಟಲ್‍ನಲ್ಲಿ ನಾಗಾಲೋಟದಲ್ಲಿ ಸಾಗುತ್ತಿದೆ. ಮುಂದೊಂದು ದಿನ ಭಾರತ ದೇಶ ‘ಡಿಜಿಟಲ್ ಗುರು’ ಆಗಲಿದೆ ಎಂಬ ಭಾವನೆ ಪರಿಣಿತ ತಜ್ಞರಲ್ಲಿದೆ.
ಡಿಜಿಟಲ್ ಇಂಡಿಯಾಕ್ಕೆ ಮುನ್ನುಡಿ ಬರೆದಿದ್ದು ಮಾಜಿ ಪ್ರಧಾನಿಯವರಾದ ದಿ.ರಾಜೀವ್ ಗಾಂಧಿಯವರು, ವೇಗ ನೀಡಿದ್ದು ಮಾಜಿ ಪ್ರಧಾನಿಯವರಾದ ಶ್ರೀ ಡಾ.ಮನಮೋಹನ್ ಸಿಂಗ್ ರವರು, ನಾಗಾಲೋಟಕ್ಕೆ ಚಾಲನೆ ನೀಡಿದ್ದು ಪ್ರಧಾನಿ ಶ್ರೀ ನರೇಂದ್ರಮೋದಿಯವರು.
ನಾನು ಈ ಬಗ್ಗೆ ಪ್ರವೀಣನಲ್ಲ, ನಾನೊಬ್ಬ ಮೂಲತಃ ರೈತನಾಗಿ ಮಾತ್ರ ಗಮನಿಸಿದ ಅಂಶಗಳ ಬಗ್ಗೆ ಈ ಲೇಖನ ಮಾಡಿದ್ದೇನೆ ಅಷ್ಟೆ. ನಾನು ಸುಮಾರು 108 ಜನರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಡಿಜಿಟಲ್ ಇಂಡಿಯಾ ಬಗ್ಗೆ ವಿಶ್ವವೇ ಭಾರತದ ನಾಗಾಲೋಟ ಕಂಡು ಬೆಚ್ಚಿದೆಯಂತೆ. ಭಾರತದ ವೇಗದಲ್ಲಿ ಯಾವ ಮುಂದುವರೆದ ದೇಶವೂ ಸರಿಸಾಟಿಯಿಲ್ಲವಂತೆ.
ಶಿಕ್ಷಣ ಮತ್ತು ಡಿಜಿಟಲ್ ಕ್ರಾಂತಿ ಯಾವುದೇ ಪ್ರಚಾರ ಇಲ್ಲದಿದ್ದರೂ, ತಾನು ತಾನಾಗಿಯೇ ಭಾರತದ ಪ್ರತಿಯೊಬ್ಬರನ್ನು ತಲುಪಿದೆ ಎಂದರೆ ಅತಿಶಯೋಕ್ತಿಯಲ್ಲ. ಕೋವಿಡ್-19 ಡಿಜಿಟಲ್ ಇಂಡಿಯಾಕ್ಕೆ ‘ಆನೆ ಬಲ’ ತಂದಿದೆ ಎಂದರೆ ತಪ್ಪಾಗಲಾರದು.
ಇಂದು ಡಿಜಿಟಲ್ ಕ್ರಾಂತಿಯಲ್ಲಿ ಭಾಗವಹಿಸದೇ ಇರುವ ಜನರ ಸಂಖ್ಯೆ, ಭಾರತದಲ್ಲಿ ಇಲ್ಲವೇ ಇಲ್ಲವಂತೆ. ಇದು ಹೇಗೆ ಸಾಧ್ಯಾ ಅನ್ನುತ್ತೀರಾ?
- ಮನೆಯಲ್ಲಿ ಕುಳಿತು ಟಿವಿ ನೋಡುತ್ತೀರಾ?
- ಮನೆಯಲ್ಲಿ ಕುಳಿತು ರೇಡಿಯೋ ಕೇಳುತ್ತೀರಾ?
- ಬೆರಳ ತುದಿಯಲ್ಲಿ ಮೊಬೈಲ್ ಮೂಲಕ ಇಡಿ ವಿಶ್ವವನ್ನೇ ಜಾಲಾಡುತ್ತೀರಾ?
- ನಗದು ಇಲ್ಲದಿದ್ದರೂ ಜೀವನ ನಡೆಸುತ್ತೀರಾ?
- ಫೋನ್ ಪೇ ಮೂಲಕ ಚಪ್ಪಲಿ ಪಾಲೀಶ್ ಮಾಡುವವರಿಂದ ಆರಂಭಿಸಿ, ದೇಶದ ಖಜಾನೆವರೆಗೂ ಹಣ ಪಾವತಿ ಮಾಡುತ್ತೀರಾ?
- ಇ ಮೇಲ್ ಮೂಲಕ ಕ್ಷಣ ಮಾತ್ರದಲ್ಲಿ ದಾಖಲೆ ರವಾನಿಸುತ್ತೀರಾ?
- ಸೋಶಿಯಲ್ ಮೀಡಿಯಾ ಮೂಲಕ ಯಾರನ್ನು ಬೇಕಾದರೂ ಕ್ಷಣ ಮಾತ್ರದಲ್ಲಿ ತಲುಪತ್ತೀರಾ?
- ಸ್ವಿಚ್ ಆನ್ ಮಾಡಿದ ತಕ್ಷಣ ನೀವೂ ಬಯಸಿದ್ದನ್ನು ಪಡೆಯುತ್ತೀರಾ?
- ನಿಮ್ಮ ಖಾತೆಗೆ ನೇರವಾಗಿ ಸರ್ಕಾರಿ ಹಣ ಪಡೆಯತ್ತೀರಾ?
ಇಷ್ಟೆಲ್ಲಾ ಪ್ರಯೋಜ£ಗಳಲ್ಲಿ ಕನಿಷ್ಟ ಪಕ್ಷ ಒಂದು ಯೋಜನೆಯ ನೆರವನ್ನಾದರೂ ಪಡೆಯದೇ ಇರುವವರು ಭಾರತದಲ್ಲಿ ಯಾರು ಇದ್ದಾರೆ, ಎಲ್ಲಿ ಇದ್ದಾರೆ, ಹೇಗೆ ಇದ್ದಾರೆ, ಅವರಿಗೆ ಡಿಜಿಟಲ್ ವ್ಯವಸ್ಥೆಯನ್ನು ಹೇಗೆ ತಲುಪಿಸಬೇಕು, ಎಂದು ಭಾರತ ಹುಡುಕಾಟ ಮಾಡುತ್ತಿದೆ.
ಆನ್ ಲೈನೋ ಅಥವಾ ಆಫ್ ಲೈನೋ
ಭಾರತ ದೇಶ, ಬಡ ದೇಶ ಎನ್ನುತ್ತಿದ್ದವರು ಈಗ ಹುಬ್ಬೇರಿಸುವಂತೆ ಮಾಡಿರುವುದೇ ನಮ್ಮ ದೇಶದ ‘ಡಿಜಿಟಲ್ ಕ್ರಾಂತಿ’ ಎಂದರೆ ತಪ್ಪಾಗಲಾರದು. ಒಂದು ಹಳ್ಳಿಯಲ್ಲಿನ, ಕಲ್ಲುಕಟ್ಟೆಯ ಮೇಲೆ ಕುಳಿತು ಕೊಂಡು, ಯಾವುದೇ ಅಪ್ಲಿಕೇಷನ್ ಬಗ್ಗೆ ಚರ್ಚೆ ಮಾಡುವಾಗ ‘ಆನ್ ಲೈನೋ ಅಥವಾ ಆಫ್ ಲೈನೋ’ ಎಂದು ಕೇಳುವಷ್ಟು ನಮ್ಮ ರೈತರು ಮುಂದುವರೆದಿದ್ದಾರೆ ಎಂದರೆ, ಡಿಜಿಟಲ್ ಇಂಡಿಯಾ ಹೇಗೆ ‘ಪವಾಡ’ ಸೃಷ್ಠಿಸಿದೆ ನೋಡಿ.
ಡಿಜಿಟಲ್ ನಿಂದ ಆಗುತ್ತಿರುವ ಅನೂಕೂಲ
- ಸಮಯ ಉಳಿತಾಯ,
- ಭ್ರಷ್ಠಾಚಾರಕ್ಕೆ ಕಡಿವಾಣ.
- ನಿಖರವಾದ ತಾಜಾ ಮಾಹಿತಿ.
- ನೇರವಾಗಿ ಪಲಾನುಭುವಿಗಳ ಖಾತೆಗೆ ಹಣ ಜಮಾ.
- ಕರಾರುವಕ್ಕಾದ ದಾಖಲೆ.
- ಯಾವುದೇ ಕಾಮಗಾರಿ ಡೂಪ್ಲಿಕೇಟ್ ಆಗದಂತೆ ತಡೆಗಟ್ಟಲು ಜಿಐಎಸ್ ಲೇಯರ್ ಸಹಕರಿಸಲಿದೆ.
- ನಗದು ಸಮಸ್ಯೆಗೆ ಕಡಿವಾಣ.
- ಬ್ಯಾಂಕಿನ ಮೂಲಕವೇ ವಹಿವಾಟು.
- ಸೋಶಿಯಲ್ ಮೀಡಿಯಾ ಕ್ರಾಂತಿ.
ಒಂದು ನಕ್ಷೆ- ಒಂದು ದೇಶ ಹಾಗೂ ಒಂದು ಡಾಟಾ-ಒಂದು ದೇಶ
ಇನ್ನೂ ಸಾಕಷ್ಟು ಕೆಳಹಂತದಲ್ಲಿ ವಿವಿಧ ಯೋಜನೆಗಳ ಜಿಐಎಸ್ ಲೇಯರ್ ಮಾಡುತ್ತಿಲ್ಲ, ಕಾರಣ ಪಕ್ಕಾ ಜಿಐಎಸ್ ಲೇಯರ್ ಮಾಡಿದರೆ, ಒಂದೇ ಕೆಲಸಕ್ಕೆ ಎರಡು ಮೂರು ಬಿಲ್ ಮಾಡುವವರಿಗೆ, ತಿನ್ನುವವರಿಗೆ ಅವಕಾಶವಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಡೆ ಡಾಟಾ ಸಂಗ್ರಹ ಬಿಟ್ಟು ‘ಒಂದು ನಕ್ಷೆ- ಒಂದು ದೇಶ’ ಹಾಗೂ ‘ಒಂದು ಡಾಟಾ-ಒಂದು ದೇಶ’ ಈ ಎರಡು ಕಾನೂನು ಜಾರಿಗೆ ತಂದಾಗ ಮಾತ್ರ ಪಕ್ಕಾ ಆಗಲಿದೆ.
ಜಿಐಎಸ್ ಲೇಯರ್ ನಕ್ಷೆ ಕಡ್ಡಾಯ
ಯಾವುದೇ ಒಂದು ಯೋಜನೆಯ ಸ್ಥಳದ ಜಿಐಎಸ್ ಲೇಯರ್ ನಕ್ಷೆಯನ್ನು ಅಂದಾಜು ಪಟ್ಟಿ ಅನುಮೋದನೆಗೆ, ಪ್ರತಿ ಹಂತದ ಬಿಲ್ ನೀಡುವಾಗ ಕಡ್ಡಾಯ ಮಾಡಿದರೆ ಮಾತ್ರ, ಯೋಜನೆಗಳು ಡೂಪ್ಲಿಕೇಟ್ ಆಗುವುದು ತಪ್ಪಲಿದೆ.
ಸರ್ಕಾರಗಳ ಚಿಂತನೆಗೆ ಇನ್ನೂ ಎಳ್ಳು ನೀರು ಬಿಡುತ್ತಿರುವ ಉದಾಹರಣೆಗಳು ಬಹಳಷ್ಟು ಇವೆ. ಗ್ರಾಮ ಮಟ್ಟದವರೆಗೂ, ಸರ್ವೇ ನಂಬರ್ ವರೆಗೂ, ಕಾಮಗಾರಿವರೆಗೂ ಜಿಐಎಸ್ ಕೋಆರ್ಡಿನೇಟ್ ದಾಖಲೆ ಇದ್ದರೂ, ಕೈಚಳಕಗಳು ನಡೆಯತ್ತಲೇ ಇವೆ.
ಪ್ರತಿ ಕಚೇರಿಯಲ್ಲೂ ಜಿಐಎಸ್ ಉದ್ಯೋಗಿ.
ಇದು ‘ಡಾಟಾ ಯುಗ’ ಯಾವುದೇ ಯೋಜನೆಯ ತಾಜಾ ಡಾಟಾ, ಒಂದು ಕಡೆ ಇದ್ದಲ್ಲಿ ಪ್ರತಿಯೊಂದು ಯೋಜನೆಗಳಲ್ಲಿಯೂ ಸಾಮಾಜಿಕ ನ್ಯಾಯ ಒದಗಿಸಬಹುದಾಗಿದೆ. ಅಭಿವೃದ್ದಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಈಗ ಆರಂಭವಾಗಿದೆ.
ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಅಂಕಿ ಅಂಶಗಳನ್ನು ಪ್ರದರ್ಶನ ಮಾಡುವ ಮೂಲಕ ಸಭೆ ನಡೆಸುವುದು ಅಗತ್ಯವಾಗಿದೆ. ಅತಿ ಶೀಘ್ರದಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಡಿಜಿಟಲ್ ಯಶಸ್ವಿ ಯೋಜನೆ
ಈಗ ‘ಜಿಎಸ್‍ಟಿ’ ಸಂಗ್ರಹ ಮಾಡಲು, ಆದಾಯ ತೆರಿಗೆ ಪಾವತಿಗೆ ತರಲು ಹೇಗೆ ಸರ್ಕಾರ ಶತಾಯ ಗತಾಯ ಸರ್ಕಸ್ ಮಾಡುತ್ತಿದೆಯೋ, ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ವ್ಯಕ್ತಿಗೆ ನೀಡುತ್ತಿರುವ ‘ಸಾಮಾಜಿಕ ಭಧ್ರತೆ’ ಯೋಜನೆಗಳ ಮಾಹಿತಿಯನ್ನು ಒಂದೇ ಕಡೆ ಸಂಗ್ರಹ ಮಾಡುತ್ತಿದೆಯೋ, ಇದೇ ಮಾದರಿಯಲ್ಲಿ ಪ್ರತಿ ಯೋಜನೆಯ ಡಾಟಾ ಸಿದ್ಧಪಡಿಸಿದಲ್ಲಿ, ನಮ್ಮ ದೇಶದಲ್ಲಿ ದುರುಪಯೋಗ ಆಗುತ್ತಿರುವ ಇನ್ನೂ ಕೋಟಿಗಟ್ಟಲೆ ಹಣ ವಾರ್ಷಿಕವಾಗಿ ಉಳಿಯಲಿದೆ.
ಮರಣ ದಂಡನೆ ಶಿಕ್ಷೆ.
ಸುಳ್ಳು ಡಾಟಾ ಹೇಳುವ ಅಧಿಕಾರಿಗಳನ್ನು ಮರಣ ದಂಡನೆಗೆ ಶಿಕ್ಷೆಗೆ ಒಳಪಡಿಸುವ ಕಾನೂನು ದೇಶದಲ್ಲಿ ಜಾರಿಯಾಗಬೇಕು. ಭ್ರಷ್ಠಾಚಾರ ಕಡಿವಾಣಕ್ಕೆ ಡಿಜಿಟಲ್ ಟಚ್ ಮೂಲಕ, ಬಲೆ ಬೀಸುವ ಡಿಜಿಟಲ್ ಯುಗದಲ್ಲಿ ಮುದೊಂದು ದಿವಸ ಕಠೀಣ ಪರಿಸ್ಥಿತಿ ಬರಲಿದೆ. ಈ ಬಗ್ಗೆ ಗಂಭೀರವಾದ ಅಲೋಚನೆ ಕೇಂದ್ರ ಸರ್ಕಾರದ ಹಂತದಲ್ಲಿ ನಡೆಯಲಿದೆ.