14th July 2024
Share

TUMAKURU:SHAKTHIPEETA FOUNDATIN

ಶಕ್ತಿಪೀಠ ಫೌಂಡೇಷನ್ ವತಿಯಿಂದ ಸ್ಥಾಪನೆ ಮಾಡುವ ಶಕ್ತಿಪೀಠ ಕ್ಯಾಂಪಸ್ ಗೆ ದಾನ ನೀಡಲು ಬಹಿರಂಗವಾಗಿ ಮನವಿ ಮಾಡಿದ ಹಿನ್ನಲೆಯಲ್ಲಿ, ಹಲವಾರು ಜನರು ಆರ್ಥಿಕ ನೆರವು ನೀಡಲು ಮುಂದಾಗಿದ್ದು, ಯೋಜನೆಯ ಬಗ್ಗೆ ಮಾಹಿತಿ ನೀಡಲು ಸಲಹೆ ನೀಡಿದ್ದರಿಂದ, ಈ ಮಾಹಿತಿ ನೀಡಲಾಗಿದೆ.

ಶಕ್ತಿಪೀಠ ಫೌಂಡೇಷನ್  ಮತ್ತು ಶಕ್ತಿಪೀಠ ಕ್ಯಾಂಪಸ್ ಜಮೀನಿನ ವಿಶೇಷತೆಗಳು.

 1. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಜೆ.ಜಿ.ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಬಗ್ಗನಡು ಕಾವಲ್‍ನಲ್ಲಿ(ವಡ್ಡನಹಳ್ಳಿ ಪಕ್ಕ)ನ ಸುಮಾರು 12 ಎಕರೆ 15 ಗುಂಟೆ ಜಮೀನಿನನ್ನು ರೈತರಿಂದ ಗುತ್ತಿಗೆ ಆಧಾರದಲ್ಲಿ ಪಡೆದು, ಶಕ್ತಿಪೀಠ ಫೌಂಡೇಷನ್  ವಿವಿಧ ಥೀಮ್ ಪಾರ್ಕ್ ಮತ್ತು ಮ್ಯೂಸಿಯಂ ಸ್ಥಾಪನೆ ಮಾqಲು ಮುಂದಾಗಿದೆ.
 2. ಜಮೀನು ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಮತ್ತು ಚನ್ನೈ-ಬೆಂಗಳೂರು- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ನಿಂದ ಕೇವಲ 900 ಮೀಟರ್ ದೂರದಲ್ಲಿದೆ.
 3. ರಾಜ್ಯದ ಸುಮಾರು 19 ಜಿಲ್ಲೆಗಳ ಜನತೆ ಈ ರಸ್ತೆಯಲ್ಲಿ ಓಡಾಡುತ್ತಾರೆ.
 4. ವಡ್ಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿದೆ.
 5. ರಾಜ್ಯದ ಬರಪೀಡಿತ ಜಿಲ್ಲೆಯಲ್ಲಿ ಇರುವುದು ಒಂದು ವಿಶೇಷತೆಯಾಗಿದೆ.
 6. ಸುಮಾರು 583 ಕ್ಯುಸೆಕ್ಸ್ ಮಳೆ ನೀರು ಹರಿಯುವ ಕಾಲುವೆ ಈ ಜಮೀನಿನ ಮೂಲಕ ಹಾದು ಹೋಗಿದೆ. ಕೃತಕವಾಗಿ ನಿರ್ಮಾಣ ಮಾಡಿರುವ ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾ ಸಾಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಳೆ ನೀರು ತುಂಬಿದೆ. ಸುಮಾರು ಒಂದು ಕೋಟಿ ಲೀಟರ್ ಗಿಂತ ಹೆಚ್ಚಿಗೆ ಮಳೆ ನೀರು ಸಂಗ್ರಹವಾಗಲಿದೆ.
 7. ಈ ಜಮೀನಿಗೆ ಹೊಂದಿಕೊಂಡಂತೆ ಸುಮಾರು 30 ಎಕರೆ ರೈತರ ಜಮೀನನಲ್ಲಿ ಗುತ್ತಿಗೆ ಆಧಾರದ ಯೋಜನೆಯಡಿಯಲ್ಲಿ ವಿವಿಧ ಯೋಜನೆ ಆರಂಭಿಸಲು ಒಡಂಬಡಿಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.
 8. ಈ ಜಮೀನಿನಲ್ಲಿಯೇ ವಾಣಿ ವಿಲಾಸ ಕಾಲುವೆ ಹರಿಯಲಿದೆ. ಬೇಸಿಗೆಯಲ್ಲಿ ಅಗತ್ಯವಿದ್ದಲ್ಲಿ ಕೃತಕವಾಗಿ ನಿರ್ಮಾಣ ಮಾಡಿರುವ ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾ ಸಾಗರಕ್ಕೆ ನೀರು ಮಂಜೂರು ಮಾಡಿಸಿಕೊಳ್ಳ ಬಹುದಾಗಿದೆ.
 9. ಈಗಾಗಲೇ ಜಿಐಎಸ್ ಆಧಾರಿತ ಸುಮಾರು ಒಂದು ಎಕರೆ ಭೂಮಿಯಲ್ಲಿ ತಾತ್ಕಾಲಿಕವಾಗಿ ಭಾರತ ನಕ್ಷೆ ಗುರುತಿಸಲಾಗಿದೆ.
 10. ಭೂಮಿಯ ಮೇಲಿನ ಭಾರತ ನಕ್ಷೆಯಲ್ಲಿ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರದ 30 ನದಿ ಜೋಡಣೆಗಳ ಗುರುತು ಮಾಡಲಾಗಿದೆ.
 11. ಭೂಮಿಯ ಮೇಲಿನ ಭಾರತ ನಕ್ಷೆಯಲ್ಲಿ ತಾತ್ಕಾಲಿಕವಾಗಿ ವಿಶ್ವದ 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗಗಳು ಮತ್ತು ಭಾರತ ದರ್ಶನದ ಹಲವಾರು ಪ್ರಾತ್ಯಾಕ್ಷಿಕೆಗಳನ್ನು  ಗುರುತು ಮಾಡಲಾಗಿದೆ.
 12. ಭಾರತ ನಕ್ಷೆಯ ಸುತ್ತ ಸುಮಾರು 475 ಮೀಟರ್ ಉದ್ದದ 30 ಅಡಿ ಅಗಲದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗಿದೆ.
 13. ಜಮೀನಿನ ಎಂಟು ದಿಕ್ಕುಗಳಲ್ಲೂ ದಿಕ್ಕು ಮತ್ತು ಉಪದಿಕ್ಕು ಗುರುತು ಮಾಡಿ, ನವಗ್ರಹಗಳವಾರು ಗಿಡಗಳನ್ನು ಹಾಕಿ ಬೆಳೆಲಾಗಿದೆ.
 14. ರಿಂಗ್ ರಸ್ತೆ ಸುತ್ತಲೂ ಸುಮಾರು 400 ಜಾತಿಯ ಔಷಧಿ ಗಿಡಗಳನ್ನು ಹಾಕಲಾಗಿದೆ. ಮಳೆ ಜಾಸ್ತಿಯಾದ ಕಾರಣ ಕೆಲವು ಜಾತಿಯ ಗಿಡಗಳು ಹಾಳಾದರೂ ಕೆಲವು ಗಿಡಗಳು ಚೆನ್ನಾಗಿ ಬೆಳೆಯುತ್ತಿವೆ.
 15. ಜಮೀನಿಗೆ ವಿದ್ಯುತ್ ಸಂಪರ್ಕ ಈಗಾಗಲೇ ಇದೆ.
 16. ಮೊಬೈಲ್ ಟವರ್ ಈ ಗ್ರಾಮದಲ್ಲಿ ಈಗಾಗಲೇ ಇದೆ. ಉತ್ತಮ ಇಂಟರ್‍ನೆಟ್ ವ್ಯವಸ್ಥೆ ದೊರೆಯುವ ಭರವಸೆ ಇದೆ.
 17. ಜಮೀನಿಗೆ ಹೊಂದಿಕೊಂಡಂತೆ ಡಾಂಬರು ರಸ್ತೆ ಇದೆ.
 18. ಶಕ್ತಿಪೀಠ ಕ್ಯಾಂಪಸ್ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಪ್ರಾಧಿಕಾರಿÀಗಳಿಂದ ಅನುಮೋದನೆ ಪಡೆಯಬೇಕಿದೆ.
 19. ಅಲಿನೇಷನ್‍ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಯೋಜನೆಯ ಅಂತಿಮ ರೂಪುರೇಷೆ ನಂತರ ಅಲಿನೇಷನ್ ಮಾಡಿಸಲು ಚಿಂತನೆ ನಡೆಸಲಾಗಿದೆ.
 20. ಕಳೆದ ಮೂರು ವರ್ಷಗಳಿಂದ ಸಂಶೋಧನೆ ನಡೆಸುವ ಮೂಲಕ, ಭೂಮಿಯ ಮೇಲೆ ಜಿಐಎಸ್ ಆಧಾರದಲ್ಲಿ ಗುರುತು ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
 21. ಭಾರತ ನಕ್ಷೆಗೆ ಅನುಗುಣವಾಗಿ  ವಾಸ್ತು ಪ್ರಕಾರ ಜಮೀನನ್ನು ಸಮತಟ್ಟು ಮಾಡಲಾಗಿದೆ.
 22. ನೀರು, ಮರಗಿಡಗಳು ಸೇರಿದಂತೆ ‘ಪರಸರವೇ ದೇವರು’ ಎಂಬ ಭಾವನೆಗೆ ತಕ್ಕಂತೆ ಕ್ಯಾಂಪಸ್ ಬಯೋಡೈವರ್ಸಿಟಿ ಕ್ಯಾಂಪಸ್ ಆಗಿ ನಿರ್ಮಾಣ ಮಾಡಲು ವಿವಿಧ ಜಾತಿಯ ಗಿಡಗಳನ್ನು ಹಾಕಲಾಗಿದೆ. ಇನ್ನೂ ಹಲವಾರು ಗಿಡಗಳ ಸಂಗ್ರಹ ಕಾರ್ಯ ಆರಂಭವಾಗಿದೆ.
 23. ಶಕ್ತಿಪೀಠ ಫೌಂಡೇಷನ್ ದಿನಾಂಕ:16.08.2019 ರಂದು ನೊಂದಾವಣೆಯಾಗಿ 3 ವರ್ಷ ಆಗಿದೆ.
 24. ತುಮಕೂರಿನ ಜಯನಗರದಲ್ಲಿರುವ ಕೆನರಾ ಬ್ಯಾಂಕ್‍ನಲ್ಲಿ ಶಕ್ತಿಪೀಠ ಫೌಂಡೇಷನ್ ಕರೆಂಟ್ ಅಕೌಂಟ್ ಖಾತೆ ತೆರೆಯಲಾಗಿದೆ.
 25. ಶಕ್ತಿಪೀಠ ಫೌಂಡೇಷನ್ ಗೆ ಈಗಾಗಲೇ 80 ಜಿ ಅನುಮತಿ ಪಡೆಯಲಾಗಿದೆ.
 26. ಶಕ್ತಿಪೀಠ ಫೌಂಡೇಷನ್ ನ ಮೂರು ವರ್ಷಗಳ ಆಡಿಟ್ ರಿಪೋರ್ಟ್ ಇದೆ.
 27. ಈ ಯೋಜನೆಗೆ 35 ಎಸಿ ಅನುಮತಿ ಪಡೆಯಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ.
 28. ಮ್ಯೂಸಿಯಂಗೆ ಒಂದು ಕೋಟಿ ಹಣವನ್ನು ಹೂಡಿಕೆ ಮಾಡುವ ಸಾಮಾಥ್ರ್ಯ ಶಕ್ತಿಪೀಠ ಫೌಂಡೇಷನ್ ಇದೆ.
 29. ಸರ್ಕಾರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಯೋಜನೆಗಳ ಮೌಲ್ಯಮಾಪನವನ್ನು ಆರಂಭಿಸಲಾಗಿದೆ.
 30. ತುಮಕೂರಿನ ಮೇಲ್ಕಂಡ ವಿಳಾಸದಲ್ಲಿ ಶಕ್ತಿಪೀಠ ಫೌಂಡೇಷನ್ ಆಡಳಿತ ಕಚೇರಿಯಿದೆ.
 31. ಶಕ್ತಿಪೀಠ ಇ-ಪೇಪರ್ ನಲ್ಲಿ ಪ್ರತಿ ದಿನ ದಿನಚರಿ ವರದಿ ಮಾಡುವ ಮೂಲಕ ಪಾರದರ್ಶಕತೆಗೆ ಒತ್ತು ನೀಡಲಾಗಿದೆ.
 32. ವಿವಿಧ ಯೋಜನೆಗಳಿಗೆ ವಿಷನ್ ಗ್ರೂಪ್ ರಚಿಸಿಕೊಂಡು ಸಂಶೋಧನೆ ನಡೆಸಲಾಗುತ್ತಿದೆ.
 33. ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕರಿಗೆ ಸುಮಾರು 34 ವರ್ಷಗಳ ಸುಧೀರ್ಘ ಅನುಭವ ಇದೆ. ಸರಿ ತಪ್ಪುಗಳ ಆತ್ಮಾವಲೋಕದೊಂದಿಗೆ ಯೋಜನೆಗೆ ಚಾಲನೆ ನೀಡಲಾಗಿದೆ.
 34. ಯೋಜನೆಗೆ ಸ್ಪೆಷಲ್ ಆಫೀಸರ್ ಆಗಿ ಸಂಸ್ಥೆಯ ಸಿಇಓ ಡಾಟಾ ವಿಜ್ಞಾನಿ ಶ್ರೀ.ಕೆ.ಆರ್.ಸೋಹನ್ ರವರನ್ನು ನೇಮಕ ಮಾಡಲಾಗಿದ್ದು, ಅವರು ಈಗಾಗಲೇ ದೆಹಲಿಯಲ್ಲಿ ವಿವಿಧ ಯೋಜನೆಗಳ ಅಧ್ಯಯನ ಆರಂಭಿಸಿದ್ದಾರೆ.
 35. ವಾಣಿ ವಿಲಾಸದ ಅಕ್ಕ ಪಕ್ಕ ಇರುವ ವಿಜೆಎನ್‍ಎಲ್ ನಿಗಮದ ಜಮೀನಿನನಲ್ಲಿ ರೈತರ ಹಾಗೂ ನಿರುದ್ಯೋಗಿಗಳ ಸಹಭಾಗಿತ್ವದಲ್ಲಿ ಪಿಪಿಪಿ ಯೋಜನೆಯಡಿ ವಿವಿಧ ಅಗ್ರೋ ಟೂರಿಸಂ ಹಾಗೂ ಕ್ಲಸ್ಟರ್ ಹಾಗೂ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ಮೂಲಕ ಹಲವಾರು ಉದ್ಯೋಗ ಸೃಷ್ಠಿಸ ಬಹುದಾಗಿದೆ. ನಿಗಮದ ವತಿಯಿಂದ ಜಮೀನಿನ ಸಮೀಕ್ಷೆ ಈಗಾಗಲೇ ಆರಂಭವಾಗಿದೆ.
 36. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಪಿಪಿಪಿ ಸಮಿತಿಯ ಸಭೆಯ ನಿರ್ಣಯದಂತೆ ಯೋಜನೆಯ ಡಿಪಿಆರ್ ಅಂತಿಮ ಗೊಳಿಸಲಾಗುವುದು.