27th July 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‍ನಲ್ಲಿ ದಿನಾಂಕ:22.08.2021 ರಂದು ಶಂಕು ಸ್ಥಾಪನೆಯಾದ   ಪ್ರಥಮ ಕಟ್ಟಡಕ್ಕೆ  ಅನ್ನಜ್ಞಾನಪರಿಸರ ಎಂಬ ಹೆಸರು ಇಡಲು ಉದ್ದೇಶಿಸಲಾಗಿದೆ. ಈ ಕಟ್ಟಡದ ವಿಶೇಷತೆ  ರಾಜ್ಯದ 31 ಜಿಲ್ಲೆಗಳ ಮತ್ತು ದೇಶದ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಜ್ಞರು, ಚಿಂತಕರು, ರೈತರು, ಅಧಿಕಾರಿಗಳು ಬಂದು ಒಂದೆರಡು ದಿವಸ ಉಳಿದು ಕೊಂಡು ಜಿಲ್ಲೆಯ, ರಾಜ್ಯದ ಮತ್ತು ದೇಶದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವ ಅಭಿವೃದ್ಧಿ ದೇವಾಲಯವಾಗಲಿದೆ. 

ಜಿಲ್ಲೆ ಹಾಗೂ ರಾಜ್ಯಕ್ಕೊಂದು  ಕೊಠಡಿಯಂತೆ 37 ಕೊಠಡಿಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಸುಮಾರು 70 ಜನರ ಸಾಮಾಥ್ರ್ಯದ ಹೈಟೆಕ್ ಸಭಾಂಗಣ, ಪಿಪಿಟಿ ವ್ಯವಸ್ಥೆ, ಊಟದ ಮನೆ ಮತ್ತು ಎರಡು ವಿವಿಐಪಿ ಕೊಠಡಿಗಳ ನಿರ್ಮಾಣ ಸೇರಿದಂತೆ ಸುಮಾರು 120 ಚದುರದ ಕಟ್ಟಡ ಇದಾಗಿದೆ. ಅಂದಾಜು ರೂ 3.50 ಕೋಟಿ ವೆಚ್ಚವಾಗಲಿದೆ.

ಈ ಕಟ್ಟqದ ಕಾಮಗಾರಿÀ ಹಣಕಾಸಿನ ಆಭಾವದಿಂದ ನನೆಗುದಿಗೆ ಬಿದ್ದಿದೆ. ಸುಮಾರು ಒಂದು ವರ್ಷ ವಿಳಂಭವಾದ ಹಿನ್ನಲೆಯಲ್ಲಿ ಸ್ವಾಭಿಮಾನ ಬಿಟ್ಟು ಹಲವಾರು ಅಧಿಕಾರಿಗಳು ಮತ್ತು ದಾನಿಗಳೊಂದಿಗೆ ಚರ್ಚೆ ಮಾಡಿದಾಗ, ಬ್ರಹ್ಮವಿಷ್ಣುಮಹೇಶ್ವರಂತೆÀ ಮೂರು ಜನರ ಸಹಕಾರದಿಂದ ಮತ್ತೆ ಸೆಪ್ಟೆಂಬರ್ ತಿಂಗಳಿನಿಂದ ಈ ಕಟ್ಟಡ ಪುನರಾಂಭವಾಗಲಿದೆ. ಈ ಕಟ್ಟಡಕ್ಕೆ ಸಾವಿರಾರು ಜನರ ಕೊಡುಗೆ ದೊರೆಯಲಿದೆ ಎಂಬ ವಿಶ್ವಾಸ ಮತ್ತು ಭರವಸೆ ಇದೆ.

ಅನ್ನ: ದೇಶದ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವವರಿಗೆ ಉಚಿತ ಅನ್ನದÀ ವ್ಯವಸ್ಥೆ ದೊರೆಯಲಿದೆ.

ಜ್ಞಾನ: ದೇಶದ ಅಭಿವೃದ್ಧಿಗಾಗಿ ತಮ್ಮ ಜ್ಞಾನದ ಧಾರೆ ಜೊತೆಗೆ, ಇಲ್ಲಿ ಅಭಿವೃದ್ಧಿ ಜ್ಞಾನÀ ದಾನವನ್ನು ಮಾಡುವ ಸರ್ವಧರ್ಮ ದೇವಾಲಯವಾಗಲಿದೆ.

ಪರಿಸರ: ಪರಿಸರವೇ ದೇವರು ಎಂಬಂತೆ ಕ್ಯಾಂಪಸ್ ನಲ್ಲಿ ನೀರು, ಮರಗಿಡ, ಪತಂಗಗಳ ತವರು ಮನೆಯಾಗಲಿದೆ ಈ ಕ್ಯಾಂಪಸ್. ಪೂರಕವಾದ ವಾತಾವಾರಣ ಸೃಷ್ಠಿ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿಗೆ ಬಂದವರು ಈಗಲೇ, ಇಲ್ಲಿಂದ ಹೋಗಲು ಮನಸ್ಸೇ ಬರುವುದಿಲ್ಲಾ ಸಾರ್, ಇಲ್ಲಿ ಇನ್ನೂ ಸ್ವಲ್ಪ ಸಮಯ ಇರಬೇಕೆಂಬ ಮನಸ್ಸು ಇದೆ ಎನ್ನುತ್ತಾರೆ.

ನಾನು ಅವರಿಗೆ ಹೇಳುವುದು ಇಷ್ಟೆ, ಇಲ್ಲಿ ಸತಿಯ ಮೆದುಳಿನ ಭಾಗ ಬಿದ್ದಿರಬಹುದು. ಆ ಕಾರಣಕ್ಕೋಸ್ಕರವೇ ಇಲ್ಲಿ ವಿಶ್ವದಲ್ಲಿಯೇ, ಎಲ್ಲಿ ಮಾಡಿರದ ವಿಶೇಷ 108 ಶಕ್ತಿಪೀಠಗಳ ಮಿನಿಯೇಚರ್ ಇಲ್ಲಿ ಆಗಲಿದೆ, ಎಂದಾಗ ಬಂದವರು ಒಂದು ಕ್ಷಣ ಮೌನವಾಗುತ್ತಾರೆ.

ಈ 37 ವಿಭಾಗದಲ್ಲೂ  ತಲಾ 3 ಶಕ್ತಿಪೀಠಗಳಂತೆ 108 ಶಕ್ತಿಪೀಠಗಳ, ಜೊತೆಗೆ ಬ್ರಹ್ಮ-ವಿಷ್ಣು-ಮಹೇಶ್ವರರು ಸೇರಿದಂತೆ 111  ದೇವಾನ್ ದೇವತೆಗಳ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 111 ಸಚಿವಾಲಯಗಳ ಹಾಗೂ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಸಂಶೋಧನೆಯೂ ಆರಂಭವಾಗಲಿದೆ.

ಈ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವವರೆಗೂ ಕುದುರೆಗೆ ಮೊಕೊಡಾ ಹಾಕಿದಂತೆ, ಎಲ್ಲಾ ಚಟುವಟಿಕೆಗಳನ್ನು ಬದಿಗೊತ್ತಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಕರೆ ಕೊಟ್ಟ ಜೈ ಅನುಸಂಧಾನ್ 2022-2047 ರ ಅಭಿವೃದ್ಧಿ ದಿಕ್ಸೂಚಿ, ಈ ಕ್ಯಾಂಪಸ್ ನಿಂದ ವಿಶ್ವಾದ್ಯಾಂತ ಸುದ್ಧಿಯಾಗಲಿದೆ ಎಂಬ ಕನಸು ನನ್ನದಾಗಿದೆ.

ದಿನಾಂಕ:26.08.2022 ನೇ ಶುಕ್ರವಾರ ಅಮಾವಾಸ್ಯೆ ದಿವಸ ಕಟ್ಟಡದ ಪುನರ್ ಆರಂಭಕ್ಕೆ ಹಣÀದ ಸಂಗ್ರಹಕ್ಕೆ ವಿಶೇಷ ಚಾಲನೆ ನೀಡಲಾಗಿದೆ.ನವದುರ್ಗೆಯರ ಪೂಜೆ ವೇಳೆಗೆ ಕಟ್ಟಡದ ಕಾಮಗಾರಿ ಪುನರ್ ಆರಂಭವಾಗಲಿದೆ. ಕಟ್ಟಡದ ನಿರ್ಮಾಣಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರ ಬಗ್ಗೆಯೂ ಅವರ ಒಪ್ಪಿಗೆ ಮೇರೆಗೆ ಮಾಹಿತಿ ನೀಡಲಾಗುವುದು.

ಈ ಅಭಿವೃದ್ಧಿ ದೇವಾಲಯ/ ಜೈ ಅನುಸಂಧಾನ್ 2022-2047 ರ ಕಟ್ಟಡಕ್ಕೆ ನಿಮ್ಮ ಕೈಲಿ ಸಾಧ್ಯಾವಾದಷ್ಟು ಡಿಜಿಟಲ್ ದಾನ ನೀಡಲು ಮನವಿ.