21st November 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ಪ್ರಥಮ ಕಟ್ಟಡ ಆರಂಭ ಮಾಡಿದಾಗ, ಸಾಲಮಾಡಬಾರದು, ಯಾರು ಈ ಕ್ಯಾಂಪಸ್ ಬಳಿ ಬಂದು ಅವರಿಗೆ ತಿಳಿದಷ್ಟು ದಾನ ನೀಡುವ ಭರವಸೆ ನೀಡಿದ ನಂತರ, ಅವರಿಗೆ ನನ್ನ ಕೈಲಾದ ಸಹಾಯ ಮಾಡುವ ಅಗ್ರಿಮೆಂಟ್ ದೇವತೆ ಹಾಗೂ ಮುಯ್ಯಾಳು ಪದ್ದತಿಗೆ ಚಾಲನೆ ಕೊಟ್ಟಿದ್ದು ಇತಿಹಾಸ.

ಶಂಕುಸ್ಥಾಪನೆಯ ದಿವಸವೇ, ಮುಚ್ಚು ಮರೆಯಿಲ್ಲದೆ, ವೇದಿಕೆಯ ಮೇಲೆ ಭರವಸೆ ನೀಡಿದವರ ಹಲವಾರು ಜನರ ಹೆಸರನ್ನು ಘೋಷಣೆ ಮಾಡಿದೆ. ಅಂದೇ ನಮ್ಮ ಶ್ರೀ ಸತ್ಯಾನಂದ್ ರವರು ಹೇಳಿದ ಮಾತು, ಸಾರ್ ಬಹಳ ಉಷಾರಾಗಿ ಈ ನಿರ್ಧಾರ ಕೈಗೊಳ್ಳಿ, ಹೇಳಿದ ಹಾಗೆ ಯಾರು ಸಹಾಯ ಮಾಡಲ್ಲ. ಅವರ ಉದ್ದೇಶವೇ ಬೇರೆ ಇದೆ ಎಂದು ಹೇಳಿದ್ದು ಅಕ್ಷರಷ: ಸತ್ಯ ಎನಿಸಿದೆ.

‘ಕೆಲಸ ಆಗುವವರೆಗೂ ನಮ್ಮ ಕ್ಯಾಂಪಸ್ನಲ್ಲಿಯೇ ಎಳನೀರು ಕುಡಿದು, ನಮ್ಮ ಕ್ಯಾಂಪಸ್ನಲ್ಲಿಯೇ ಗರಿ ಹಾಕಿಕೊಂಡು ಮಲಗಿದ ಜನ, ಈಗ ಸ್ವಿಚ್ ಆಪ್ ಮಾಡಲಾಗಿದೆ, ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಮೊಬೈಲ್ ಸಂದೇಶ ಕೇಳಬೇಕಿದೆ’.

ಇನ್ನೂ ಕೆಲವರು ಕಟ್ಟು ಕಥೆ ಹೇಳುತ್ತಿದ್ದಾರೆ. ನಾನಂತೂ ಯಾರ ಬಳಿ ಕೆಲಸ ಆಗುತ್ತದೆಯೋ ಅವರ ಬಳಿ ಹೋಗಿ ಸಾರ್,  ನಮ್ಮ ಶಕ್ತಿಪೀಠ ಫೌಂಡೇಷನ್ ಧಾನಿಗಳು ಇವರು, ದಯವಿಟ್ಟು ಇವರಿಗೆ ಸಹಾಯ ಮಾಡಿ ಎಂದೇ ಹೇಳಿ ಅವರ ಕೆಲಸಗಳಿಗೆ ನನ್ನ ಕೆಲಸ ಬಿಟ್ಟು ನಾಯಿ ಸುತ್ತಿದ ಹಾಗೆ ಸುತ್ತಿದ್ದೇನೆ,

ಮೋಸಗಾರರು ಈ ಜನ ಎಂದು ತಿಳಿದುಕೊಳ್ಳಲು ಒಂದು ವರ್ಷ ಬೇಕಾಯಿತು. ಯಾರ್ಯಾರು ಮೋಸ ಮಾಡಿದ್ದಾರೆ ಎಂಬ ಬಗ್ಗೆ ಅವರ ಮನೆಗೆ ಹೋಗಿ, ಅವರ ಕುಟುಂಬದೊಂದಿಗೆ ಮತ್ತೊಮ್ಮೆ ಸಮಾಲೋಚನೆ ಮಾಡಿ, ಡಿಜಿಟಲ್ ದಾಖಲೆ ಮಾಡಲು ಉದ್ದೇಶಿಸಲಾಗಿದೆ.

ಜೊತೆಗೆ ಎಸ್.ಪಿ ಯವರಿಗೆ ಅರ್ಜಿ ನೀಡಿ ಇನ್ನೂ ಮುಂದೆ ಇವರು ಯಾರಿಗೂ, ಈ ರೀತಿ ಮಾಡದ ಹಾಗೆ ತಿಳುವಳಿಕೆ ಕೊಡಿಸುವ ಮೂಲಕ ಅಲೋಚನೆಯೂ ಇದೆ.

ಕೆಲವರಂತೂ ಹೇಳಿದ ಹಾಗೆ, ಹೇಳಿದ ದಿನಕ್ಕೂ ಮೊದಲೇ ಆರ್ಥಿಕ ಸಹಾಯ ಮಾಡಿದ್ದಾರೆ. ಅವರೆಲ್ಲರ ಕುಟುಂಬ ಸಮೇತ ದಾನಿಗಳ ಮಾಹಿತಿ ಪ್ರಕಟಿಸಲಾಗುವುದು. ಶಕ್ತಿಪೀಠ ಕ್ಯಾಂಪಸ್ ನಲ್ಲಿ ದಾನಿಗಳ ಪಟ್ಟಿಯನ್ನು ಪ್ರಕಟಿಸುವ ಆಲೋಚನೆ ಇದೆ.

‘ನನಗೆ ಇದೊಂದು ಹೊಸ ಅನುಭವ.ಹೇಳಿದವರು ಮೋಸ ಮಾಡುತ್ತಾರೆ, ಇನ್ಯಾರೋ ಬಂದು ಸಹಾಯ ಮಾಡುತ್ತಿದ್ದಾರೆ. ಇದು 108 ಶಕ್ತಿದೇವತೆಗಳ ಆಟವಿರ ಬಹುದು.