21st November 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ದಿಶಾ ಮಾರ್ಗದರ್ಶಿ ಸೂತ್ರದ ಪ್ರಕಾರ  1 ರಲ್ಲಿನ  ಅಂಶದಲ್ಲಿ ರಾಜ್ಯ ದಿಶಾ ಸಮಿತಿ ತಮ್ಮ ರಾಜ್ಯಕ್ಕೆ ಅನುಗುಣವಾಗಿ ದಿಶಾ ಮಾರ್ಗದರ್ಶಿ ಸೂತ್ರ ಮಾಡಿಕೊಳ್ಳಲು ಸೂಚಿಸಿದ್ದಾರೆ.

ರಾಜ್ಯ ಮಟ್ಟದ ಪ್ರಥಮ ದಿಶಾ ಸಮಿತಿ ಸಭೆಯನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ದಿನಾಂಕ:05.08.2022 ರಂದು ನಡೆಸಿದಾಗ ಅವರು ಸಹ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಆದೇಶ ಮಾಡಿದ್ದಾರೆ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿಯೂ ನಾನು ಬರೆದ ಪತ್ರದ ಮೇಲೆ ದಿಶಾ ಮಾರ್ಗದರ್ಶಿ ಸೂತ್ರ ರಚಿಸಲು ಆದೇಶ ಮಾಡಿದ್ದಾರೆ.

ಇಂದು ದಿನಾಂಕ:01.09.2022 ರಂದು ತಮ್ಮ ಕಚೇರಿಗೆ ಭೇಟಿ ನೀಡಿ, ದಿಶಾ ಮಾರ್ಗದರ್ಶಿ ಸೂತ್ರ ರಚಿಸಲು ಕೈಗೊಂಡಿರುವ ಕ್ರಮಗಳ  ಬಗ್ಗೆ ತಪಾಸಣೆ ಮಾಡಲು ಇಚ್ಚಿಸಿದ್ದೇನೆ. ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲು ಮತ್ತು ಈ ಬಗ್ಗೆ ಚರ್ಚೆ ನಡೆಸಲು ಸೂಚಿಸಲು, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿವರಿಗೆ ಬಹಿರಂಗವಾಗಿ ಮನವಿ ಮಾಡಿದ್ದೇನೆ.

ನನ್ನ ಆತಂಕ?

  1. 2016 ರಲ್ಲಿಯೇ ಕೇಂದ್ರ ಸರ್ಕಾರ ಸೂಚಿಸಿದ್ದರೂ, ಅಲ್ಲಿಂದ ಕಾಂಗ್ರೆಸ್, ಜನತಾದಳ, ಬಿಜೆಪಿ ಮೂರು ಪಕ್ಷಗಳು ಆಡಳಿತ ನಡೆಸಿದ್ದರೂ, ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಸೂಚಿಸಿದ ಕ್ರಮಕ್ಕೆ, ಈ ರೀತಿ ರಾಜ್ಯ ಸರ್ಕಾರಗಳು ವಿಳಂಭ ಮಾಡಿದರೆ ಹೇಗೆ?
  2. ಕೇಂದ್ರ ಸರ್ಕಾರ ಮಲತಾಯಿಧೋರಣೆ ಮಾಡುತ್ತಿದೆ ಎಂದು ಬೊಬ್ಬೆ ಹೊಡೆಯುವವರು, ಈ ಬಗ್ಗೆ ಉತ್ತರ ನೀಡಬೇಕಲ್ಲ.
  3. ಟೀಮ್ ಇಂಡಿಯಾ ಎಂದು ಪ್ರಧಾನಿಯವರು ಪದೇ ಪದೇ ಹೇಳುತ್ತಿರುತ್ತಾರೆ. ಎಲ್ಲಿದೆ ಟೀಮ್ ಇಂಡಿಯಾ ಪ್ರಗತಿ.
  4. ಕೇಂದ್ರ ಸರ್ಕಾರ ಪ್ರತಿ ವರ್ಷ ರಾಜ್ಯಕ್ಕೆ ನೀಡುತ್ತಿರುವ ಅನುದಾನದ ಮಾಹಿತಿ, ಒಂದೇ ಕಡೆ ಇದೂವರೆಗೂ ಇಲ್ಲ ಅಂದರೆ, ಸ್ವಾತಂತ್ಯ್ರ ಬಂದು 75 ವರ್ಷ ಕಳೆದರೂ ಹೀಗಾದರೆ ಹೇಗೆ.
  5. ಎಲ್ಲವನ್ನೂ ಬದಿಗೊತ್ತೋಣ, 75 ವರ್ಷ ನೇ ವರ್ಷದ ಸ್ವಾತಂತ್ಯ್ರದ ಅಮೃತ ಮಹೋತ್ಸವದ ದಿವಸ ದೇಶದ ಪ್ರಧಾನಿಯವರು 2047 ಕ್ಕೆ 100 ನೇ ವರ್ಷದ ಅವಧಿಗೆ, ರಾಜ್ಯಗಳ ಅಭಿವೃದ್ಧಿ ಬಗ್ಗೆ ಜೈ ಅನುಸಂಧಾನ್ ಮಾಡಿ ಎಂದಿದ್ದಾರೆ. ಈಗಲಾದರೂ ರಾಜ್ಯ ಸರ್ಕಾರಗಳು ಚುರುಕಾಗ ಬೇಕಲ್ಲವೇ?
  6. ಯಾವ ರಾಜ್ಯ ಏನು ಮಾಡುತ್ತದೋ, ನಮ್ಮ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ಪ್ರಧಾನಿಯವರ ಘೋಷಣೆಗೆ ಚಾಲನೆ ನೀಡಿದ್ದಾರೆ.
  7. ಇಲ್ಲಿ ವಿರೋಧ ಪಕ್ಷಗಳ ಪಾತ್ರ ಏನು?
  8. ರಾಜಕೀಯ ಪಕ್ಷಗಳ ಪಾತ್ರ ಏನು?
  9. ಜನರ, ಚುನಾಯಿತ ಜನಪ್ರತಿನಿಧಿಗಳ ಅಧಿಕಾರಿಗಳ, ಸಂಘಸಂಸ್ಥೆಗಳ, ಸಂಶೋಧಕರ, ಹೋರಾಟಗಾರರ, ಪ್ರಗತಿಪರ ಚಿಂತಕರ ಪಾತ್ರ ಏನು?

ಎಲ್ಲಾ ವರ್ಗದವರೂ ಆತ್ಮಾವಲೋಕನ ಮಾಡಿಕೊಳ್ಳ ಬೇಕಲ್ಲವೇ?