TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರದ ದಿಶಾ ಮಾರ್ಗದರ್ಶಿ ಸೂತ್ರದ ಪ್ರಕಾರ 1 ರಲ್ಲಿನ ಅಂಶದಲ್ಲಿ ರಾಜ್ಯ ದಿಶಾ ಸಮಿತಿ ತಮ್ಮ ರಾಜ್ಯಕ್ಕೆ ಅನುಗುಣವಾಗಿ ದಿಶಾ ಮಾರ್ಗದರ್ಶಿ ಸೂತ್ರ ಮಾಡಿಕೊಳ್ಳಲು ಸೂಚಿಸಿದ್ದಾರೆ.
ರಾಜ್ಯ ಮಟ್ಟದ ಪ್ರಥಮ ದಿಶಾ ಸಮಿತಿ ಸಭೆಯನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ದಿನಾಂಕ:05.08.2022 ರಂದು ನಡೆಸಿದಾಗ ಅವರು ಸಹ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಆದೇಶ ಮಾಡಿದ್ದಾರೆ.
ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿಯೂ ನಾನು ಬರೆದ ಪತ್ರದ ಮೇಲೆ ದಿಶಾ ಮಾರ್ಗದರ್ಶಿ ಸೂತ್ರ ರಚಿಸಲು ಆದೇಶ ಮಾಡಿದ್ದಾರೆ.
ಇಂದು ದಿನಾಂಕ:01.09.2022 ರಂದು ತಮ್ಮ ಕಚೇರಿಗೆ ಭೇಟಿ ನೀಡಿ, ದಿಶಾ ಮಾರ್ಗದರ್ಶಿ ಸೂತ್ರ ರಚಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ತಪಾಸಣೆ ಮಾಡಲು ಇಚ್ಚಿಸಿದ್ದೇನೆ. ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲು ಮತ್ತು ಈ ಬಗ್ಗೆ ಚರ್ಚೆ ನಡೆಸಲು ಸೂಚಿಸಲು, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿವರಿಗೆ ಬಹಿರಂಗವಾಗಿ ಮನವಿ ಮಾಡಿದ್ದೇನೆ.
ನನ್ನ ಆತಂಕ?
- 2016 ರಲ್ಲಿಯೇ ಕೇಂದ್ರ ಸರ್ಕಾರ ಸೂಚಿಸಿದ್ದರೂ, ಅಲ್ಲಿಂದ ಕಾಂಗ್ರೆಸ್, ಜನತಾದಳ, ಬಿಜೆಪಿ ಮೂರು ಪಕ್ಷಗಳು ಆಡಳಿತ ನಡೆಸಿದ್ದರೂ, ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಸೂಚಿಸಿದ ಕ್ರಮಕ್ಕೆ, ಈ ರೀತಿ ರಾಜ್ಯ ಸರ್ಕಾರಗಳು ವಿಳಂಭ ಮಾಡಿದರೆ ಹೇಗೆ?
- ಕೇಂದ್ರ ಸರ್ಕಾರ ಮಲತಾಯಿಧೋರಣೆ ಮಾಡುತ್ತಿದೆ ಎಂದು ಬೊಬ್ಬೆ ಹೊಡೆಯುವವರು, ಈ ಬಗ್ಗೆ ಉತ್ತರ ನೀಡಬೇಕಲ್ಲ.
- ಟೀಮ್ ಇಂಡಿಯಾ ಎಂದು ಪ್ರಧಾನಿಯವರು ಪದೇ ಪದೇ ಹೇಳುತ್ತಿರುತ್ತಾರೆ. ಎಲ್ಲಿದೆ ಟೀಮ್ ಇಂಡಿಯಾ ಪ್ರಗತಿ.
- ಕೇಂದ್ರ ಸರ್ಕಾರ ಪ್ರತಿ ವರ್ಷ ರಾಜ್ಯಕ್ಕೆ ನೀಡುತ್ತಿರುವ ಅನುದಾನದ ಮಾಹಿತಿ, ಒಂದೇ ಕಡೆ ಇದೂವರೆಗೂ ಇಲ್ಲ ಅಂದರೆ, ಸ್ವಾತಂತ್ಯ್ರ ಬಂದು 75 ವರ್ಷ ಕಳೆದರೂ ಹೀಗಾದರೆ ಹೇಗೆ.
- ಎಲ್ಲವನ್ನೂ ಬದಿಗೊತ್ತೋಣ, 75 ವರ್ಷ ನೇ ವರ್ಷದ ಸ್ವಾತಂತ್ಯ್ರದ ಅಮೃತ ಮಹೋತ್ಸವದ ದಿವಸ ದೇಶದ ಪ್ರಧಾನಿಯವರು 2047 ಕ್ಕೆ 100 ನೇ ವರ್ಷದ ಅವಧಿಗೆ, ರಾಜ್ಯಗಳ ಅಭಿವೃದ್ಧಿ ಬಗ್ಗೆ ಜೈ ಅನುಸಂಧಾನ್ ಮಾಡಿ ಎಂದಿದ್ದಾರೆ. ಈಗಲಾದರೂ ರಾಜ್ಯ ಸರ್ಕಾರಗಳು ಚುರುಕಾಗ ಬೇಕಲ್ಲವೇ?
- ಯಾವ ರಾಜ್ಯ ಏನು ಮಾಡುತ್ತದೋ, ನಮ್ಮ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ಪ್ರಧಾನಿಯವರ ಘೋಷಣೆಗೆ ಚಾಲನೆ ನೀಡಿದ್ದಾರೆ.
- ಇಲ್ಲಿ ವಿರೋಧ ಪಕ್ಷಗಳ ಪಾತ್ರ ಏನು?
- ರಾಜಕೀಯ ಪಕ್ಷಗಳ ಪಾತ್ರ ಏನು?
- ಜನರ, ಚುನಾಯಿತ ಜನಪ್ರತಿನಿಧಿಗಳ ಅಧಿಕಾರಿಗಳ, ಸಂಘಸಂಸ್ಥೆಗಳ, ಸಂಶೋಧಕರ, ಹೋರಾಟಗಾರರ, ಪ್ರಗತಿಪರ ಚಿಂತಕರ ಪಾತ್ರ ಏನು?
ಎಲ್ಲಾ ವರ್ಗದವರೂ ಆತ್ಮಾವಲೋಕನ ಮಾಡಿಕೊಳ್ಳ ಬೇಕಲ್ಲವೇ?