TUMAKURU:SHAKTHIPEETA FOUNDATION
ಯಾವುದೇ ಇಲಾಖೆ, ತೆಗೆದುಕೊಳ್ಳಿ ಸರ್ಕಾರಿ ಸಿಸ್ಟಂ ಸಂಪೂರ್ಣವಾಗಿ ಹದಗೆಟ್ಟಿದೆಯಂತೆ. ಇದು ಇಂದು ನಿನ್ನೆಯದಲ್ಲವಂತೆ. ಸುಮಾರು ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನೂ ಸರಿಯಾಗಿಲ್ಲವಂತೆ. ಸರಿಮಾಡಲು ಬ್ರಹ್ಮ ಬಂದರೂ ಸಾಧ್ಯಾವಿಲ್ಲವಂತೆ.
ಯಾವುದೇ ಕೆಳಹಂತದ ಅಧಿಕಾರಿ, ನೌಕರರು ಕೆಲಸ ಮಾಡುತ್ತಿಲ್ಲವಂತೆ. ಗಟ್ಟಿಯಾಗಿ ಮಾತನಾಡಿದರೆ, ಜಾತಿ ನಿಂದನೆ, ಲೈಂಗಿಕ ದೌರ್ಜನ್ಯ, ಪಕ್ಷನಿಂದನೆ, ಸಚಿವರ ನಿಂದನೆ, ಮುಖ್ಯಮಂತ್ರಿಯವರ ನಿಂದನೆ ಎಂಬ ದೂರುಗಳು ಬರುತ್ತವೆಯಂತೆ.
ಒಬ್ಬೊಬ್ಬ ಜವಾನಿಂದ ಆರಂಭಿಸಿ, ಆಯಾ ಇಲಾಖೆಯ ಉನ್ನತ ಅಧಿಕಾರಿಗಳವರೆಗೂ ಒಬ್ಬೊಬ್ಬ ರಾಜಕಾರಣಿಯ ಸಂಪರ್ಕ ಇರುತ್ತದೆಯಂತೆ.ಅಣ್ನಾ, ಅಪ್ಪಾಜಿ ಎಂದರೆ ಮುಗಿಯತಂತೆ.ಆದರೂ ಸರ್ಕಾರಗಳು ನಡೆಯುತ್ತಿವೆ. ಹಣ ವ್ಯಯವಾಗುತ್ತಿದೆ.
ಯಾವುದೇ ಕಾಮಗಾರಿಯ ಸ್ಥಳ ತನಿಖೆಗೆ ಯಾರೇ ಹೋದರೂ ರೌಡಿಸಂ ನಡೆಯುತ್ತದೆಯಂತೆ. ಕೆಲಸ ಸರಿಯಾಗಿಲ್ಲ ಎಂದರೆ, ನಿಮ್ಮ ಹೆಂಡತಿ ಮಕ್ಕಳ ಗತಿ ನೆಟ್ಟಗಿರಲ್ಲ ಎಂಬ ವಾಣಿಗಳು ಬರುತ್ತವೆಯಂತೆ. ಬೇಕಾದಷ್ಟು ಪಡೆದು ಬಿಲ್ ಬರೆಯಲೇ ಬೇಕಂತೆ.
ಇದು ಕರ್ನಾಟಕ ರಾಜ್ಯ ಅಥವಾ ಭಾರತ ದೇಶವಲ್ಲವಂತೆ, ಇಡೀ ಪ್ರಪಂಚದ ಸ್ಥಿತಿ ಹೀಗೆ ಇದೆಯಂತೆ. ಗಟ್ಟಿಯಾಗಿ ಮಾತನಾಡಿದರೂ ಕೆಲಸ ಆಗಲ್ಲ, ಅತಿ ಪ್ರೀತಿ ವಿಶ್ವಾಸ ತೋರಿದರೂ ಕೆಲಸ ಆಗಲ್ಲವಂತೆ. ನಾಗರ ಹಾವು ಬುಸುಗುಟ್ಟಿದಂತೆ ಬುಸುಗುಟ್ಟುತ್ತಾ ಕೆಲಸ ತೆಗೆಯಬೇಕಂತೆ.
ಯಾವುದೇ ಕಾನೂನು ಇಲ್ಲಿ ಕೆಲಸಕ್ಕೆ ಬರುವುದಿಲ್ಲವಂತೆ. ಲೋಕಾಯುಕ್ತದಲ್ಲಿ ಕೋಟ್ಯಾಂತರ ರೂ ದುರುಪಯೋಗ ಇದ್ದರು, ಸಚಿವ ಸಂಪುಟದಲ್ಲಿ ಕೇಸು ದಾಖಲಿಸಲು ಅನುಮತಿಯೇ ಸಿಗುವುದಿಲ್ಲವಂತೆ.
ಆಯಾ ಜಾತಿಯ ನೌಕರರ/ಅಧಿಕಾರಿಗಳ ಜಾತಿ ಸಚಿವರು, ಅಯ್ಯೋ ಬಿಡಿ ಸಾರ್ ಎನ್ನುತ್ತಾರಂತೆ, ಕಾನೂನು ಸಲಹೆಯಲ್ಲಿ ಶೇ 100 ರಷ್ಟು ಲಂಚವಂತೆ. ಪ್ರಪಂಚ ಸರಿಪಡಿಸಲು ಸಾಧ್ಯಾವಿಲ್ಲವಂತೆ, ನಮ್ಮ ಮನೆಯ ಎಲ್ಲರನ್ನೂ ಸರಿಪಡಿಸಲು ಸಾದ್ಯಾವಿಲ್ಲವಂತೆ, ನಮ್ಮ ಕಚೇರಿಯ ಎಲ್ಲರನ್ನೂ ಸರಿಪಡಿಸಲು ಸಾದ್ಯಾವಿಲ್ಲವಂತೆ.
ಮೊದಲು ನನ್ನನ್ನು ನಾನು ಸರಿಪಡಿಸಿಕೊಂಡರೆ ಸಾಕಂತೆ. ಎಷ್ಟೆ ಅವಮಾನವಾದರೂ ಎಲ್ಲಿಯೂ ಹೇಳಬಾರದಂತೆ. ಎಲ್ಲವೂ ಚೆನ್ನಾಗಿದೆ ಎಂಬ ನಾಟಕ ಆಡಬೇಕಂತೆ. ನಾವೂ ಈ ಪ್ರಪಂಚದಲ್ಲಿ ಬದುಕುವ ದಾರಿ ಕಲಿಯಬೇಕಂತೆ.
ದ್ವೇಷ, ಅಸೂಯೆ, ಒಟ್ಟೆ ಕಿಚ್ಚು, ಬ್ಲಾಕ್ ಮೇಲ್ ಎಲ್ಲರ ಜೀವನದಲ್ಲೂ ಮೂಲಭೂತ ಹಕ್ಕಿನಂತೆ ಕೆಲಸ ಮಾಡುತ್ತಿವೆಯಂತೆ. ಅಬ್ಬರದ ಪ್ರಚಾರ, ಆಡಂಭರ, ಮಂಕೂಬೂದಿ ಎರಚುವ ತಂತ್ರಗಾರಿಕೆ ಇರಬೇಕಂತೆ. ನಾಟಕವಾಡುವ ಪ್ರವೃತ್ತಿ ಇದ್ದರೆ ಸಾಕಂತೆ. ಇದೇ ದೇಶದ ಪ್ರಗತಿಯಂತೆ.
ಪರ ವಿರೋಧ ಎಲ್ಲದಕ್ಕೂ ನಾವೇನು ಉತ್ತರ ನೀಡುವ ಅವಶ್ಯಕತೆ ಇಲ್ವಂತೆ, ಮೀಡಿಯಾ, ಸೋಶಿಯಲ್ ಮೀಡಿಯಾದಲ್ಲಿಯೇ ನ್ಯಾಯ ದೊರೆಯುತ್ತದೆಯಂತೆ, ಪ್ಯಾಕೇಜ್ ಸಿಸ್ಟಂ ಮ್ಯಾನೇಜ್ ಮಾಡಬೇಕಂತೆ.
ಇದನ್ನೆಲ್ಲಾ ಅನುಭವಿಸಿದ ಹಿರಿಯ ಉನ್ನತ ಮಟ್ಟದ ಅಧಿಕಾರಿಯೊಬ್ಬರು ನೀಡಿದ ಉಪನ್ಯಾಸವಿದು. ಉದಾಹರಣೆ ಸಹಿತ ಹಂಚಿಕೊಂಡ ಅನುಭವ, ಯಾವುದೇ ಸಿನಿಮಾ ಕತೆಗೂ ಕಡಿಮೆ ಇರಲಿಲ್ಲ.