17th January 2026
Share

TUMAKURU:SHAKTHIPEETA FOUNDATION

  ದೇಶದಲ್ಲಿ ಪ್ರಸ್ತುತ ದಕ್ಷಿಣ ರಾಜ್ಯಗಳೇ ಅಭಿವೃದ್ದಿಯಲ್ಲಿ ನಾಗಲೋಟ ಮಾಡಲು ಆರಂಭಿಸಿವೆಯಂತೆ. ಎಷ್ಟೇ ಲಂಚ, ಭ್ರಷ್ಠಾಚಾರ  ಎಂಬ ಅಪವಾದಗಳೂ ಇದ್ದರೂ, ಮೈಗಳ್ಳರು ಎಂಬ ವಾದ ಇದ್ದರು, ಅಭಿವೃದ್ಧಿ ಕುಂಠಿತವಾಗಿಲ್ಲ ಎಂಬ ಕಟು ಸತ್ಯದ ಬಗ್ಗೆ ಮೌಲ್ಯಮಾಪನವಾಗಲೇಬೇಕು.

ರಾಜಕಾರಣಿಗಳು ಚುನಾವಣೆಗೆ ಇಷ್ಟು ಕೋಟಿ, ಅಷ್ಟು ಕೋಟಿ ಖರ್ಚು ಮಾಡಿದ್ದೇವೆ ಎಂಬುದು ಸುಳ್ಳಿನ ಕಂತೆಯಂತೆ.

ಅಧಿಕಾರಿಗಳು ಇಷ್ಟು ಲಕ್ಷ, ಅಷ್ಟು ಕೋಟಿ ಕೊಟ್ಟು ವರ್ಗಾವಣೆ ಮಾಡಿಸಿಕೊಂಡೇ ಎಂಬುದು ಬುರುಡೆಯಂತೆ.

ಗುತ್ತಿಗೆದಾರರು ಇಷ್ಟು ಪರ್ಸೆಂಟೇಜ್ ಕೊಟ್ಟೆ, ಅಷ್ಟು ಕೊಟ್ಟೆ ಎಂದು ಹೇಳುವುದು ಕಪಟವಂತೆ.

ಅಂದರೆ ಇವರ್ಯಾರು ಖರ್ಚು ಮಾಡುತ್ತಿಲ್ಲ ಎಂದಲ್ಲ, ಅವರು ಹೇಳಿಕೊಳ್ಳವಷ್ಟು ಮಾಡದಿದ್ದರೂ ದೊಡ್ಡಸ್ಥಿಕೆಗೆ ಈ ರೀತಿ ಬುರುಡೆ ಬಿಟ್ಟು ಕರ್ನಾಟಕ ಎಂದರೆ ಬ್ರಷ್ಠಾಚಾರ ಎಂಬ ಕೂಗು ಎಬ್ಬಿಸುತ್ತಿದ್ದಾರಂತೆ.

ಈ ಮೂರು ಅಂಶಗಳು ಯಾರಿಗೂ ಲೆಕ್ಕಕ್ಕೆ ಸಿಗದ ವಿಚಾರಗಳು, ದೇವರೇ ಬಲ್ಲ, ಆದರೇ ನಮ್ಮ ರಾಜ್ಯದ ಘನತೆಗೆ ಕುತ್ತು ಬರುತ್ತಿದೆ, ಇದನ್ನು ಎಲ್ಲಾ ರಾಜಕೀಯ ಪಕ್ಷಗಳು ಗಂಭೀರವಾಗಿ ತೆಗೆದು ಕೊಳ್ಳುವುದು ಸೂಕ್ತ ಎನಿಸುತ್ತಿದೆ.

ಇಂದು ಎಲ್ಲಾ ವರ್ಗದಲ್ಲೂ ಒಳ್ಳೆಯವರೇ ಜಾಸ್ತಿ ಇದ್ದಾರಂತೆ, ಅಬ್ಬರ ಮಾತ್ರ ಕಡಿಮೆ ಇರುವ ಭ್ರಷ್ಠಾಚಾರಿಗಳದ್ದಂತೆ. ಒಳ್ಳೆಯವರು ಮೂಲೆ ಗುಂಪಾಗಿದ್ದಾರಂತೆ.