27th July 2024
Share

 TUMAKURU:SHAKTHIPEETA FOUNDATION

                            ದಿನಾಂಕ:09.09.2022 ರಂದು ಬರೆದ ಪತ್ರ.                                   

ಗೆ.

ಶ್ರೀಮತಿ ಶಾಲಿನಿ ರಜನೀಶ್ ರವರು

ಅಪರ ಮುಖ್ಯ ಕಾರ್ಯದರ್ಶಿ.

ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಹಾಗೂ ಸದಸ್ಯ ಕಾರ್ಯದರ್ಶಿ. ರಾಜ್ಯ ಮಟ್ಟದ ದಿಶಾ ಸಮಿತಿ ಕರ್ನಾಟಕ.

ಬಹು ಮಹಡಿಗಳ ಕಟ್ಟಡ. ಬೆಂಗಳೂರು .

ಮಾನ್ಯರೇ

ವಿಷಯ: ದಿಶಾ ಮಾರ್ಗಸೂಚಿಯ ಕೆಲವು ಅಂಶಗಳ ಬಗ್ಗೆ ದೆಹಲಿಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ನಿಯೋಗ ಹೋಗಲು ಅನುಮತಿ ನೀಡುವ ಬಗ್ಗೆ.

 ಕೇಂದ್ರ ಸರ್ಕಾರದ ದಿಶಾ ಮಾರ್ಗಸೂಚಿಯನ್ವಯ ಹಾಗೂ ದಿನಾಂಕ:05.08.2022 ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ, ಮಾನ್ಯ ಮುಖ್ಯ ಮಂತ್ರಿಯವರು ಆದೇಶ ನೀಡಿದ ಪ್ರಕಾರ ರಾಜ್ಯ ಮಟ್ಟದಲ್ಲಿ ದಿಶಾ ಮಾರ್ಗಸೂಚಿ ಸಿದ್ಧ ಪಡಿಸುತ್ತಿರುವುದು ಸರಿಯಷ್ಟೆ.

 ಈ ಕೆಳಕಂಡ ಅಂಶಗಳು ಹಾಗೂ ತಾವು ಸೂಚಿಸುವ ವಿಷಯಗಳ ಬಗ್ಗೆ ದೆಹಲಿಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದು ಸೂಕ್ತವಾಗಿದೆ.

 ದೆಹಲಿಯಲ್ಲಿನ ಕರ್ನಾಟಕ ಭವನದಲ್ಲಿ ದಿಶಾ ಲೈಸನಿಂಗ್ ಆಫೀಸರ್ ನೇಮಕ ಮಾಡಿ, ಅವರನ್ನು ನಮ್ಮ ಜೊತೆ ಕಳುಹಿಸಲು ರೆಸಿಡೆಂಟ್ ಕಮೀಷನರ್ ರವರಿಗೆ ಪತ್ರ ಬರೆಯಲು ಮನವಿ ಮಾಡಲಾಗಿದೆ. ರಾಜ್ಯದಿಂದಲೂ ಒಬ್ಬ ಅಧಿಕಾರಿಯನ್ನು ಸಾಧ್ಯಾವಿದ್ದಲ್ಲಿ ಕಳುಹಿಸಬಹುದು.

  ದೆಹಲಿಯಲ್ಲಿ ಇರುವ ನಮ್ಮ ರಾಜ್ಯದÀ ಸಂಸದರನ್ನು ನಮ್ಮ ನಿಯೋಗದ ಜೊತೆ ಕರೆದುಕೊಂಡು ಹೋಗಲು ಯೋಚಿಸಲಾಗಿದೆ. ದಿನಾಂಕ:15.09.2022 ರಿಂದ 20.09.2022 ರವರೆಗೆ ದೆಹಲಿಯಲ್ಲಿ ತಂಗಿದ್ದು ಅಧ್ಯಯನ ವರದಿಯೊಂದಿಗೆ ಬರಲು ಚಿಂತನೆ ಇದೆ. ಆದ್ದರಿಂದ ನಿಯೋಗ ಹೋಗಲು ಅನುಮತಿ ನೀಡಲು ಈ ಮೂಲಕ ಕೋರಿದೆ.

  1. ಕೇಂದ್ರ ಸರ್ಕಾರದ ದಿಶಾ ಮಾರ್ಗಸೂಚಿಯಲ್ಲಿ ನನಗೆ ಅನುಮಾನವಿರುವ ವಿಷಯವಾರು ಸಮಾಲೋಚನೆ.
  2. ದೇಶದ ಯಾವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಉತ್ತಮ ರೀತಿಯಲ್ಲಿ ಮಾರ್ಗಸೂಚಿ ಮಾಡಿವೆ ಎಂಬ ಬಗ್ಗೆ ಮಾಹಿತಿ.
  3. ರಾಜ್ಯ ಮಟ್ಟದ ದಿಶಾ ಸಮಿತಿಯ ಸಭೆ ನಡವಳಿಕೆಗಳನ್ನು ಕೇಂದ್ರ ಸರ್ಕಾರದ ಯಾವ ವೈಬ್ ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂಬ ಬಗ್ಗೆ ಚರ್ಚೆ.
  4. ದಿಶಾ ಮಾನಿಟರಿಂಗ್ ಸೆಲ್ ಬಗ್ಗೆ ಮಾಹಿತಿ.
  5. ನಾಮನಿರ್ದೇಶಿತ ಸದಸ್ಯರ ಕರ್ತವ್ಯಗಳು ಮತ್ತು ಅವರು ಕೈಗೊಳ್ಳುವ ತಪಸಣಾ ವರದಿಗಳು ಮತ್ತು ಖರ್ಚುವೆಚ್ಚಗಳ ಬಗ್ಗೆ ಮಾಹಿತಿ.
  6. ದಿಶಾ ಸಭೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುದಾನದ ಯುಟಿಲೈಸೇನ್ ಸರ್ಟಿಫಿಕೇಟ್(ಯುಸಿ) ಬಗ್ಗೆ ಕಡ್ಡಾಯವಾಗಿ ಚರ್ಚೆ ಮಾಡುವ ಬಗ್ಗೆ.
  7. ಯೋಜನಾವಾರು ನೋಡೆಲ್ ಆಫೀಸರ್ ನೇಮಕದ ಬಗ್ಗೆ.
  8. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳು, ಇಲಾಖಾವಾರು ನಿಗಮ, ಕಾರ್ಪೋರೇಷನ್, ಕಂಪನಿ, ಬೋರ್ಡ್‍ಗಳ ಯೋಜನೆಗಳು ಹಾಗೂ ವಿವಿಧ ಇಲಾಖೆಗಳ ಅಡಿಯಲ್ಲಿ ಎನ್.ಜಿ.ಓ ಮುಖಾಂತರ ರಾಜ್ಯಗಳಿಗೆ ನೀಡುವ ಅನುದಾನಗಳ ಏಕೀಕೃತ ಪಟ್ಟಿಯನ್ನು ರಾಜ್ಯ ಮಟ್ಟದ ದಿಶಾ ಸಮಿತಿಗೆ ರವಾನಿಸುವ ಬಗ್ಗೆ.
  9. ಲೋಕಸಭಾ ಕ್ಷೇತ್ರವಾರು ಆಯಾ ಕ್ಷೇತ್ರದ ಸಂಸದರ ಅಧ್ಯಕ್ಷತೆಯಲ್ಲಿ ದಿಶಾ ಉಪಸಮಿತಿ ಸಭೆ ನಡೆಸುವ ಬಗ್ಗೆ.

ವಂದನೆಗಳೊಂದಿಗೆ                             ತಮ್ಮ ವಿಶ್ವಾಸಿ

                                                    (ಕುಂದರನಹಳ್ಳಿ ರಮೇಶ್)

ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿಯ ನಾಮನಿರ್ದೇಶನ ಸದಸ್ಯರು ಜೊತೆ ಬರಬಹುದು. ಆಸಕ್ತರು ಸಂಪರ್ಕಿಸಿ.