22nd December 2024
Share

TUMAKURU:SHAKTHIPEETA FOUDATION

  ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಮಾಡುತ್ತಿರುವುದು ಸ್ವಾಗಾತಾರ್ಹ, ಈಗ ರಾಜಕೀಯ ಪಕ್ಷಗಳ ಜಾತಕ/ನಿಜ ಬಣ್ಣ ಬಯಲಾಗಲಿದೆ ಎಂದು ಉನ್ನತ ಮಟ್ಟದ ಅಧಿಕಾರಿಯೊಬ್ಬರು ಹಾಸ್ಯ ಮಾಡಿದ್ದಾರೆ.

  ರಾಜಕಾಲುವೆ ಮೇಲಿನ ಕಟ್ಟಡಗಳು ಕೆಲವರ ಪಾಲಿಗೆ ಕಾಮದೇನು ಆಗಿದೆಯಂತೆ. ನಿಮ್ಮ ಕಟ್ಟಡ ರಾಜಕಾಲುವೆ ಮೇಲಿದೆ ಎಂಬ ಒಂದು ಸಣ್ಣ ಹೇಳಿಕೆ ಕಪ್ಪಕಾಣಿಕೆ ವಸೂಲಿಗೆ ರಾಜಮಾರ್ಗವಂತೆ. ಬೆಂಗಳೂರಿನ ರಾಜಕಾಲುವೆ ಪರಿಣಿತ ತಜ್ಞರ ಪ್ರಕಾರ ಯಾವುದೇ ಕಾರಣಕ್ಕೂ ಬೆಂಗಳೂರಿನ ಗುಳುಂ ಮಾಡಿದ ಕೆರೆ ಕಟ್ಟೆಗಳು ಹಾಗೂ ಗುಳುಂ ಮಾಡಿರುವ ರಾಜಕಾಲುವೆಗಳನ್ನು ತೆರವು ಮಾಡುವುದು ಅಸಾಧ್ಯ.

ಒಂದು ವೇಳೆ ಬೊಮ್ಮಾಯಿರವರ ಸರ್ಕಾರ ರಾಜಕಾಲುವೆಗಳ ಒತ್ತುವರಿ ತೆರವು ಮಾಡಿದ್ದೇ ಆದಲ್ಲಿ, ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಜಯಭೇರಿ ಭಾರಿಸಲಿದೆಯಂತೆ. ಒತ್ತುವರಿ ಮಾಡಿರುವವರ ನೂರು ಪಟ್ಟು ಜನ ಮಳೆ ನೀರಿನ ತೊಂದರೆ ಅನುಭವಿಸಿದ್ದಾರಂತೆ.