27th July 2024
Share

TUMAKURU:SHAKTHIPEETA FOUNDATION

75 ನೇ ಸ್ವಾತಂತ್ರ್ಯದ ದಿವಸ ದೆಹಲಿಯ ಕೆಂಪುಕೋಟೆಯಿಂದ ದೇಶವಾಸಿಗಳಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಜೈ ಅನುಸಂಧಾನ್ ಘೋಷಣೆ ಮೂಲಕ 2022 ರಿಂದ 2047 ರವರೆಗೆ ದೇಶದ ಸಮಗ್ರ ಅಭಿವೃದ್ದಿಗಾಗಿ, ರಾಜ್ಯ ರಾಜ್ಯಗಳ ಮಧ್ಯೆ ಅಭಿವೃದ್ಧಿ ಸ್ಪರ್ದೆ ನಡೆಯಲಿ ಎಂದು ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಶಕ್ತಿಪೀಠ ಫೌಂಡೇಷನ್ ಸರ್ಕಾರಗಳಿಗೆ ಒಂದು ವರದಿ ನೀಡಲು ಮುಂದಾಗಿದೆ.

ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ  ಸಿದ್ಧಪಡಿಸಲು  ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜೊತೆ ಎಂ.ಓ.ಯು ಮಾಡಿಕೊಂಡಿದ್ದು, ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ವರದಿ ಸಿದ್ದಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಈ ಎರಡು ವರದಿಗಳ ಸಂಪಾದನೆ, ಕಡ್ಲೆಪುರಿ ತಿಂದ ಹಾಗೆ ಅಲ್ಲ ಸಾವಿರಾರು ಜನರ ಅಭಿಪ್ರಾಯಗಳೊಂದಿಗೆ ಸ್ವಾತಂತ್ರ್ಯ ಬಂದ ದಿವಸದಿಂದ, ಕರ್ನಾಟಕ ರಾಜ್ಯದ ಎಲ್ಲಾ ಮುಖ್ಯ ಮಂತ್ರಿಯವರು ಮತ್ತು ಭಾರತ ದೇಶದ ಎಲ್ಲಾ ಪ್ರಧಾನ ಮಂತ್ರಿಯವರು ಘೋಷಣೆ ಮಾಡಿರುವ ಎಲ್ಲಾ ಇಲಾಖೆಗಳ, ಪ್ರತಿಯೊಂದು ಯೋಜನೆವಾರು ಮೌಲ್ಯ ಮಾಪನ ಮಾಡುವುದು ಸೂಕ್ತವಾಗಿದೆ.

ಈ ಹಿನ್ನಲೆಯಲ್ಲಿ ಶಕ್ತಿಪೀಠ ಫೌಂಡೇಷನ್ ‘ನಮ್ಮ ಪ್ರಧಾನಿ- ನಮ್ಮ ಮುಖ್ಯ ಮಂತ್ರಿ’ ಯೋಜನೆಗಳ ಮ್ಯೂಸಿಯಂ ಸ್ಥಾಪನೆ ಮಾಡಲು, ಶ್ರೀ ನರೇಂದ್ರಮೋದಿಯವರ ಜನ್ಮ ದಿವಸದಿಂದ ಅಧ್ಯಯನ ಮತ್ತು ಸಂಶೋಧನೆ ಮಾಡಲು ಚಾಲನೆ ನೀಡಲಾಗಿದೆ.

ಈ ಸಂಭಂದ ವಿವಿಧ ಇಲಾಖೆಗಳು, ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ವರ್ಗದ ಪರಿಣಿತರಿಂದ ಮಾಹಿತಿ ಸಂಗ್ರಹಿಸಲು, ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ  ಶಕ್ತಿಪೀಠ ಫೌಂಡೇಷನ್ ಗೆಸ್ಟ್ ಹೌಸ್ ಸ್ಥಾಪಿಸಲುÀ ಇದೇ ದಿವಸ ಮುಂಗಡ ಹಣವನ್ನು ನೀಡಲಾಗಿದೆ.

ನನ್ನ ಅಧ್ಯಯನ ಪ್ರಕಾರ ರಾಜ್ಯದ 31 ಜಿಲ್ಲೆಗಳ ಜನರು, ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯ ನಿವಾಸಿಗಳಾಗಿರ ಬಹುದು. ರಾಜ್ಯದ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮಾಹಿತಿ ಸಂಗ್ರಹಿಸಲು ಅನೂಕೂಲವಾಗ ಬಹುದು ಎಂಬ ಭರವಸೆಯೂ ಇದೆ.

ಸುಮಾರು 3571 ಪ್ಲಾಟ್‍ಗಳು ಇಲ್ಲಿ ಇವೆ. ಏಕಾಂತವಾಗಿ  ಅಭಿವೃದ್ಧಿ ತಪಸ್ಸು ಮಾಡಲು ಪ್ಲಾಟ್ ಗಳು ಬಹಳ ಚೆನ್ನಾಗಿವೆ. ಗುಂಪು ಚರ್ಚೆ, ಸಮಾಲೋಚನೆ ಸಭೆ ನಡೆಸಲು ಎಲ್ಲಾ ಮೂಲಭೂತ ಸೌಕರ್ಯಗಳು ಇವೆ.

ಒಂದು ಅಂದಾಜಿನ ಪ್ರಕಾರ ನಮ್ಮ ತುಮಕೂರು ಜಿಲ್ಲೆಯವರೇ ಸುಮಾರು 150 ಜನರು ಇರಬಹುದು, ಸುಮಾರು 56 ಜನ ರಾಜ್ಯದ ಹಾಲಿ ಮತ್ತು ಮಾಜಿ ಶಾಸಕರುಗಳು, ಇಲ್ಲಿ ಗೆಸ್ಟ್ ಹೌಸ್ ಮಾಡಿ ಬಹುದು ಎಂಬ ಸುದ್ದಿ ಇದೆ. ಬಹುತೇಕ ಎಲ್ಲಾ ಇಲಾಖೆಯ, ಹಲವಾರು ಯೋಜನೆಗಳ ಜ್ಞಾನವಿರುವವರು ಇಲ್ಲಿ ದೊರೆಯ ಬಹುದು.

ದಿನಾಂಕ:26.09.2022 ರಂದು ಶರನ್ನವರಾತ್ರಿ ಆರಂಭದ ದಿವಸದಿಂದ ನವದುರ್ಗೆಯರ ಒಂಭತ್ತು ದಿವಸ, ವಿಶ್ವದ 108 ಶಕ್ತಿಪೀಠಗಳ ಪೂಜೆ, ಧ್ಯಾನ ಮಾಡುವುದರೊಂದಿಗೆ ಬೆಂಗಳೂರಿನಿಂದ ಅಧ್ಯಯನ ಮತ್ತು ಮಾಹಿತಿ ಸಂಪಾದನೆಗೆ ಚಾಲನೆ ನೀಡಲಾಗುವುದು.

ಅಭಿವೃದ್ಧಿ ಆಸಕ್ತರು ಸಂಪರ್ಕಿಸ ಬಹುದು.