27th November 2022
Share

TUMAKURU:SHAKTHIPEETA FOUNDATION

 ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಶ್ರೀಮತಿ ದರ್ಶನ ಜರ್ದೋಶ್ ರವರು ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರೊಂದಿಗೆ ದಿನಾಂಕ:23.09.2022 ರಂದು, ಬೆಂಗಳೂರಿನ ಹೋಟೆಲ್ ರ್ಯಾಡಿಸನ್ ಬ್ಲೂ ಎಟ್ರಿಯಾದಲ್ಲಿ ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

ಸಂಸದರುಗಳಾದ ಶ್ರೀ ಜಿ.ಎಸ್.ಬಸವರಾಜ್, ಶ್ರೀ ಶಿವಕುಮಾರ್ ಉದಾಸಿ, ಶ್ರೀ ರಾಜಾ ಅಮರೇಶ್ ನಾಯಕ್, ಶ್ರೀ ಬಚ್ಚೇಗೌಡ, ಶ್ರೀ ಪ್ರತಾಪ್ ಸಿಂಹ, ಶ್ರೀ ಉಮೇಶ್ ಜಿ.ಜಾದವ್ , ಶ್ರೀ ಕರಡಿ ಸಂಗಣ್ಣ, ಶ್ರೀಮತಿ ಸುಮಲಥ, ಶ್ರೀ ಮುನಿಸ್ವಾಮಿ, ಶ್ರೀ ದೇವೇಂದ್ರಪ್ಪ ಮತ್ತು ರಾಜ್ಯಸಭಾ ಸದಸ್ಯರಾದ ಶ್ರೀ ಲೆಹರ್ ಸಿಂಗ್ ರವರು ಹಾಜರಿದ್ದರು.

ರಾಜ್ಯದ 28 ಸಂಸದರಲ್ಲಿ 10 ಜನ ಸಂಸದರು ಹಾಗೂ 13 ಜನ ರಾಜ್ಯಸಭಾ ಸದಸ್ಯರಲ್ಲಿ ಒಬ್ಬರು ಭಾಗವಹಿಸಿದ್ದರು. ಅವರವರ ಕ್ಷೇತ್ರದ ಬಗ್ಗೆ ಅರ್ಥಪೂರ್ಣವಾಗಿ ವಿಷಯ ಮಂಡಿಸಿದರು.

ರಾಜ್ಯ ಸರ್ಕಾರದ ಮೂಲಭೂತ ಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣನವರು ಭಾಗವಹಿಸಬೇಕಿತ್ತು, ಅವರು ಸಹ ಭಾಗವಹಿಸಿರಲಿಲ್ಲ, ಕಾರಣ ತಿಳಿಯಲಿಲ್ಲ. ಈ ಬಗ್ಗೆ ವಿವರವಾದ ಮಾಹಿತಿ ಪಡೆಯುವ ಆಸಕ್ತಿ ನನಗಿದೆ.

ರಾಜ್ಯ ಸರ್ಕಾರದ ಮೂಲಭೂತ ಸೌಕರ್ಯ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಗೌರವ್ ಗುಪ್ತರವರ ಗೈರುಹಾಜರಿ ಕೇಂದ್ರ ಸಚಿವರ ಗಮನ ಸೆಳೆದಿತ್ತು. ಪ್ರೋಟೋಕಾಲ್ ಬಗ್ಗೆ ಅವರು ಆಕ್ಷೇಪ ಎತ್ತಿದ್ದು ಬಹಳ ಗಂಭೀರವಾಗಿತ್ತು.

ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರು ಭಾಗ ವಹಿಸಬೇಕಿತ್ತು, ಹಾಗೇಯೇ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಿಗೂ ಸಭೆಗೆ ಅಧೀಕೃತ ಆಹ್ವಾನ ನೀಡುವುದು ಒಳ್ಳೆಯ ಬೆಳವಣಿಗೆ ಎನಿಸಿತು.

ಕೇಂದ್ರ ಸಚಿವರು ಬಂದಾಗ ಅವರ ಜೊತೆ ಉತ್ತಮ ಭಾಂದಾವ್ಯ ಪ್ರದರ್ಶನ ಮಾಡುವುದು ಒಳ್ಳೆಯ ಬೆಳವಣಿಗೆ. ಇದು ರಾಜ್ಯದ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಣಾಮ ಬೀಳಲಿದೆ.

ಸಭೆ ಸಂಯೋಜಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ನನಗಂತೂ ಈ ಸಭೆ ಬಹಳ ಜ್ಞಾನ ನೀಡಿತು.