23rd December 2024
Share

TUMAKURU:SHAKTHI PEETA FOUNDATION

  ರಾಜ್ಯದ ಮಾಜಿ ಮುಖ್ಯ ಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ದಿನಾಂಕ:23.09.2022 ರಂದು ಹಲವಾರು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಬಿಎಸ್‍ವೈ ರವರ ಅಧಿಕಾರದ ಅವಧಿಯ ಯೋಜನೆಗಳ ಅನುಷ್ಠಾನದ ಬಗ್ಗೆ ಹಾಗೂ ಸಮಾರಂಭ ನಡೆಸುವ ಬಗ್ಗೆಯೂ ಚರ್ಚೆ ನಡೆಯಿತು.

ತುಮಕೂರು ಜಿಲ್ಲೆಯ ಹಲವಾರು ಭಾಗಗಳಿಗೆ ಮರಣ ಶಾಸನವಾಗಿದ್ದ, ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ರದ್ಧತಿ ಮಾಡಿದ ಬಗ್ಗೆಯೂ ಚರ್ಚೆ ನಡೆಯಿತು. ತುಮಕೂರು ಜಿಲ್ಲೆಯ ಜನ ಇವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುವುದು ಆಧ್ಯಕರ್ತವ್ಯವಾಗಿದೆ.

ಕುಣಿಗಲ್ ಶಾಸಕರೊಬ್ಬರನ್ನು ಹೊರತು ಪಡಿಸಿ, ಜಿಲ್ಲೆಯ ಎಲ್ಲಾ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದರೂ, ಆಗದ ಕೆಲಸವನ್ನು ಬಿಎಸ್‍ವೈ ರವರು ಮಾಡಿದ್ದು ಇತಿಹಾಸ. ಅಧಿಕಾರ ದೊರೆಯುವ ಮುನ್ನವೇ,  ವಿರೋಧ ಪಕ್ಷದ ನಾಯಕಾರಾಗಿ ಹೇಮಾವತಿ ಕಾಲುವೆ ಮೇಲೆ ಬಂದು, ವೀಕ್ಷಣೆ ಮಾಡಿ, ನನಗೆ ಅಧಿಕಾರ ಬಂದರೆ ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ರದ್ಧತಿ ಮಾಡುವುದಾಗಿ ಘೋಷಣೆ ಮಾಡಿದ್ದರು.