22nd December 2024
Share

TUMAKURU:SHAKTHIPEETA FOUNDATION

ದಿನಾಂಕ:27.09.2022 ರಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಸ್ಟೇಟ್ಸ್ ಮನ್ ಹಾಗೂ ಬೆಂಗಳೂರು ನಗರವನ್ನು ವಿಶ್ವ ವಿಖ್ಯಾತಿ ಮಾಡಿದ ಐಟಿ-ಬಿಟಿ ಜನಕ  ಶ್ರೀ ಎಸ್.ಎಂ.ಕೃಷ್ಣರವರನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಭೇಟಿಯಾದ ಕ್ಷಣ ಇಬ್ಬರ ನಾಯಕರ ಕಣ್ಣಿನಲ್ಲಿ ಕಣ್ನೀರು ಹರಿದ ಸಮಯ ನಿಜಕ್ಕೂ ಅದ್ಭುತವಾಗಿತ್ತು.

ಬಸವರಾಜ್ ರವರು ಎಸ್.ಎಂ.ಕೆ ಕಂಡ ತಕ್ಷಣ ಪಾದ ಮುಟ್ಟಿ ನಮಸ್ಕರಿದರು, ಎಸ್.ಎಂ.ಕೆ ರವರ ಮಾತು ನಿಜಕ್ಕೂ ನನ್ನನ್ನು ಮೂಕವಿಸ್ಮೀತವಾಗುವಂತೆ ಮಾಡಿತು.

ನಂತರ ಹೊರಗಡೆ ಬರುವಾಗ ಅಲ್ಲಿದ್ದ ಎಸ್.ಎಂ.ಕೆ ರವರ ಶಿಷ್ಯರು ಹೇಳಿದ ಮಾತು, ನಿಮ್ಮ ಬಗ್ಗೆ ಮಾತನಾಡುತ್ತಾ ಎಸ್.ಎಂ.ಕೃಷ್ಣರವರು ಏನು ಕೆಲಸ ಇಲ್ಲದಿದ್ದರೂ, ಕನಿಷ್ಠ ಎರಡು ನಿಮಿಷವಾದರೂ ಬಂದು ನನ್ನೊಡನೆ ಮಾತನಾಡುತ್ತಿದ್ದ ಏಕೈಕ ವ್ಯಕ್ತಿ ತುಮಕೂರಿನ ಬಸವರಾಜ್ ರವರು. 

ಅವರು ಮತ್ತು ನಾನು ಇಬ್ಬರು ಬಿಟ್ಟರೆ ನಮ್ಮ ಕಾಲದ ನಿಷ್ಕಳಂಕ ಒಡನಾಡಿಗಳು ಬಹುತೇಕ ಎಲ್ಲ ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದು ವಿಷಯ ಹಂಚಿಕೊಂಡಿದ್ದರು ಸರ್ ಎಂದು ಹೇಳಿದರು. ನೋಡಿ ಸಾರ್ ನೀವು ಕಾಕತಾಳೀಯವಾಗಿ ಬಂದೇ ಬಿಟ್ಟರೀ ಅದಕ್ಕೆ ಸಾಹೇಬರು ಸಂತೋಷದ ಕಣ್ಣಿರು ಹಾಕಿದರು ಎಂದರು.

ಬಸವರಾಜ್ ರವರು ಮತ್ತು ನಾನು ಮಾತನಾಡಿಕೊಂಡಿದ್ದೇವು. ಬೆಂಗಳೂರನ್ನು ಐಟಿ-ಬಿಟಿ ಮೂಲಕ ವಿಶ್ವದಲ್ಲಿ ಗುರುತಿಸಿದ ಕೀರ್ತಿ ಶ್ರೀ ಎಸ್.ಎಂ.ಕೃಷ್ಣರವರಿಗೆ ಸಲ್ಲಬೇಕು. ಅವರಿಗೆ ನಾಗರೀಕ ಸನ್ಮಾನ ಮಾಡೋಣ ಎಂದು ಚರ್ಚೆ ಮಾಡಿದ್ದೇವು. ಅದಕ್ಕೆ ಪೂರಕವಾಗಿ ಶಕ್ತಿಪೀಠ ಫೌಂಡೇಷನ್ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದೆ.

ಈ ಬಗ್ಗೆ ಶ್ರೀ ಎಸ್.ಎಂ.ಕೃಷ್ಣರವರೊಂದಿಗೆ ಅವರ ಮನೆಗೆ ಹೋಗಿ ಸಮಾಲೋಚನೆ ನಡೆಸಬೇಕು ಎನ್ನುವ ವೇಳೆಗೆ ಇಂದು ಆಸ್ಪತ್ರೆಯಲ್ಲಿ ಅವರನ್ನು ನೋಡಿದಾಗ ನಡೆದ ಒಂದು ಘಟನೆ ಜೀವನದ ನೆನಪು.

ಶ್ರೀ ಸತ್ಯಾನಂದ್, ಶ್ರೀ ಶಾಸ್ತ್ರಿ, ಶ್ರೀ ಓಂಕಾರ್ ಗೌಡ, ಶ್ರೀ ಯೋಗೀಶ್ ಅವರ ಸಹಕಾರ ಚೆನ್ನಾಗಿತ್ತು.

ಶೀಘ್ರವಾಗಿ ನಾಗರೀಕ ಸನ್ಮಾನ ರೂಪುರೇಷೆ ನಿರ್ಧರಿಸಲು, ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗುವುದು. ಆಸಕ್ತರು ಸಂಪರ್ಕಿಸಬಹದು.