22nd November 2024
Share

TUMAKURU:SHAKTHIPEETA FOUNDATION

ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ವಿಶ್ರಾಂತಿಯಲ್ಲಿರುವ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಕೇಳಿದ ಮಾತು, ಏನ್ ಬಸವರಾಜ್ ನಿಮ್ಮ ಮೊಮ್ಮಗ ಆಸ್ಟ್ರೇಲಿಯಾ ಐಕಾನ್ ಅಂತೆ?

ಬಸವರಾಜ್ ಅಕ್ಷರಷಃ ಸುಸ್ತಾದರೂ, ಹೊರಗಡೆ ಬಂದ ನಂತರ, ಏನ್ ರಮೇಶ್ ನನ್ನ ಮೊಮ್ಮಗನ ವಿಚಾರ ಎಸ್.ಎಂ.ಕೃಷ್ಣರವರಿಗೆ ಹೇಗೆ ತಿಳಿದಿದೆ ಎಂಬ ವಿಚಾರಕ್ಕೆ ಅವರು ಬಹಳಷ್ಟು ಸಮಯ ತಲೆ ಕೆಡಿಸಿಕೊಂಡರು ಎಂದರೆ ತಪ್ಪಾಗಲಾರದು.

ಹೌದು ಬಸವರಾಜ್ ರವರ ಮೊದಲನೆ ಪುತ್ರ ಡಾ.ಅಶೋಕ್ ರವರು ಮತ್ತು ಶ್ರೀಮತಿ ಡಾ.ಶಿರಿಷಾ ರವರ ಪುತ್ರ, ಚಿ.ವಿಶಾಕ್ ಒಬ್ಬ ರಾಜಕಾರಣಿ ಮನೆಯಲ್ಲಿ ಹುಟ್ಟಿದ್ದರೂ, ಬುದ್ದಿವಂತಿಕೆಯಲ್ಲಿ ಯಾರಿಗೂ ಕಮ್ಮಿ ಇಲ್ಲ. ಕೇವಲ 16 ವರ್ಷದಲ್ಲಿಯೇ ಆಸ್ಟ್ರೇಲಿಯಾ ಸರ್ಕಾರದಿಂದ ಮೆಚ್ಚುಗೆ ಪಡೆದಿರುವ ಕನ್ನಡದ ಕಣ್ಮಣಿ. ನಮ್ಮ ದೇಶದ ಹೆಮ್ಮೆಯ ಪುತ್ರ. ವಿಶಾಕ್‍ರವರ ಯಶಸ್ಸಿನ ಬಗ್ಗೆ ಇನ್ನೊಂದು ದಿವಸ ಪ್ರತ್ಯೇಕ ಸಂದರ್ಶನ ವರದಿ ಮಾಡುತ್ತೇನೆ.

ತಕ್ಷಣ ಬಸವರಾಜ್ ರವರು ತಮ್ಮ ಮೊಮ್ಮಗನ ವಿಚಾರ ವಿನಿಮಯ ಮಾಡಿಕೊಂಡರು. ನಂತರ ಅವರಾಡಿದ ಮಾತು, ಸಾರ್ ಶ್ರೀಮತಿ ಮಾಳವೀಕಾ ಹೆಗ್ಗಡೆರವರು ಬಹಳ ಉತ್ತಮವಾಗಿ ಕಾಫಿ ಡೇ ನಡೆಸುತ್ತಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಕಟವಾಗಿರುವ ವಿಚಾರವನ್ನು ನಮ್ಮ ರಮೇಶ್ ನನಗೆ ಆಗಾಗ್ಗೆ ಹೇಳುತ್ತಾರೆ ಎಂದಾಗ ಎಸ್.ಎಂ.ಕೆ ರವರಿಗೂ ಅವರ ಪುತ್ರಿ ಬಗ್ಗೆ ಹೆಮ್ಮೆ ಎನಿಸಿತು.ಅವರ ಕಣ್ಣುಗಳು ಅರಳಿದವು.

ಶ್ರೀಮತಿ ಮಾಳವಿಕಾ ಹೆಗ್ಗಡೆಯವರು ಸಹ ಅಲ್ಲೇ ಇದ್ದರು. ಅವರನ್ನು ಕರೆಸಿ ವಿಷಯ ಹಂಚಿಕೊಂಡರು.ಇವರ ಯಶಸ್ಸಿನ ಬಗ್ಗೆಯೂ ಇನ್ನೊಂದು ದಿವಸ ಪ್ರತ್ಯೇಕ ಸಂದರ್ಶನ ವರದಿ ಮಾಡುತ್ತೇನೆ.

ನೋಡಿ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು ಇಂದು ಯಾವ ಆಟ ಆಡುತ್ತಾರೆ, ಸಮಾಜದಲ್ಲಿ ಅವರ ಬಗ್ಗೆ ಇರುವ ಸಂಶಯಗಳೇನು? ಪುಢಾರಿಗಳು, ದೇಶದ್ರೋಹ ಕೆಲಸ ಮಾಡುವವರು, ತಮ್ಮ ತಂದೆ ತಾಯಿಯವರನ್ನು ಹಿಡಿದು ಹೊಡೆಯುವವರು, ಕುಡಿದು ಕುಪ್ಪಳಿಸಿ, ದೇಶ ವಿದೇಶಗಳಿಗೂ ಹೋಗಿ, ದೇಶದ ಮಾನ ಮರ್ಯಾದೆ ಹರಾಜು ಹಾಕವುವರೇ ಜಾಸ್ತಿ. ಇದು ಎಲ್ಲರಿಗೂ ತಿಳಿದ ವಿಚಾರ.

ಇಂಥ ಒಂದು ಸಂದರ್ಭದಲ್ಲಿ, ಇಬ್ಬರು ಗುರು-ಶಿಷ್ಯರಾದರೂ, ರಾಜ್ಯದ ಹಿರಿಯ ರಾಜಕಾರಣಿಗಳಿಗೆ ಸಮಾಜದಲ್ಲಿ ಮಕ್ಕಳ ಮತ್ತು ಮೊಮ್ಮಕ್ಕಳ ವಿಚಾರದಲ್ಲಿ, ಈ ರೀತಿ ಗೌರವ ಸಿಗುವುದು ಬಹಳ ಅಪರೂಪ. ಅವರ ಜನ್ಮ ಸಾರ್ಥಕವಾದ ಭಾವನೆ ಅಲ್ಲವೇ? ಈ ಗಳಿಗೆಯಲ್ಲಿ ನಾನು ಅಲ್ಲಿ ಇದ್ದುದೇ ನನಗೂ ಹೆಮ್ಮೆ.

‘ಇದೊಂದು ರಾಜಕಾರಣಿಗಳ ಮಕ್ಕಳಿಗೆಮೊಮ್ಮಕ್ಕಳಿಗೆ ಮಾದರಿಯಾಗಬೇಕಿದೆ. ಬಗ್ಗೆ ಮಾನವೀಯತೆ ಪಾಠ ಮಾಡುವ ಅಗತ್ಯವೂ ಇದೆ.

ಇವರಿಬ್ಬರು ದಿನಾಂಕ:29.09.2022 gಂದು ಮಣಿಪಾಲ್ ಆಸ್ಪತ್ರೆÀ ಭೇಟಿಯಲ್ಲಿ ಪರಸ್ಪರ ಚರ್ಚೆ ಮಾಡಿದ,  ಅವರಿಬ್ಬರ ಜೀವನದ ಸಿಂಹಾವಲೋಕನದ ಒಂದು ಪುಸ್ತಕªನ್ನೇ ಬರೆಯಬಹುದು. ಇದೊಂದು ‘ಸಿಂಹಾವಲೋಕನ’ ಎಂದು ಪದ ಬಳಸಿದವರೇ ಶ್ರೀ ಎಸ್.ಎಂ.ಕೃಷ್ಣರವರು.

ನಿಜಕ್ಕೂ ಶ್ರೀ ಎಸ್.ಎಂ.ಕೃಷ್ಣರವರ ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರ ಆಗಾಧ ನೆನಪಿನ ಶಕ್ತಿಗೆ ಒಂದು ಸಲಾಂ! ಅವರಿಬ್ಬರು ಆಡಿದ ಮಾತುಗಳನ್ನು ನಾನು, ಶ್ರೀ ಶಾಸ್ತ್ರೀಯವರು ಮತ್ತು ಶ್ರೀ ಯೋಗೀಶ್ ರವರುÀ, ಕೇಳಿ, ಕೇಳಿ ಎಂಜಾಯ್ ಮಾಡಿದೆವು ಎಂದರೆ ಅತಿಶಯೋಕ್ತಿಯಲ್ಲ.

ಇದು ಎರಡನೇ ದಿನದ ಭೇಟಿಯ ವಿಚಾರ.