27th July 2024
Share

TUMAKURU:SHAKTHIPEETA FOUNDATION

ಮಾನವ ಗ್ರಂಥಾಲಯಕ್ಕೆ ಪೂರಕವಾಗಿ, ಕಳೆದ 10 ದಿವಸಗಳಲ್ಲಿ 23 ಜನ ವಿಷಯ ತಜ್ಞರ ಜೊತೆ ಮೋಸ, ದ್ವೇಷ, ಅಸೂಯೆ, ವಂಚನೆ, ನಂಬಿಕೆ ದ್ರೋಹ, ಇಬ್ಬಗೆ ನೀತಿ ಹೀಗೆ ವಿವಿಧ ವಿಷಯಗಳ ಬಗ್ಗೆ ಒನ್-ಟು-ಒನ್ ಚರ್ಚೆ ನಡೆಸಿದೆ.

  1. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಮಾಡುವ ದ್ರೋಹಗಳೇ ಬೇರೆ,
  2. ಉದ್ದೇಶ ಪೂರ್ವಕವಾಗಿ ಮಾಡುವ ದ್ರೋಹಗಳೇ ಬೇರೆ.
  3. ಅಗತ್ಯಗಳ ಪೂರೈಕೆಗೆ ಮಾಡುವ ದ್ರೋಹಗಳೇ ಬೇರೆ.
  4. ಆಸೆಗಳಿಗೆ ಬಿದ್ದು ಮಾಡುವ ದ್ರೋಹಗಳೇ ಬೇರೆ.
  5. ದೃತರಾಷ್ಟ್ರನಂತೆ ಮಕ್ಕಳ-ಕುಟುಂಬದ ಏಳ್ಗಿಗಾಗಿ ಮಾಡುವ ದ್ರೋಹಗಳೇ ಬೇರೆ.

 ಜೀವನದಲ್ಲಿ ಯಾವುದೂ, ಯಾರಿಗೂ ಶಾಶ್ವತವಲ್ಲ ಅಂದ ಮೇಲೆ ಇವೆಲ್ಲಾ ಯಾಕೆ? ಅಂತಸ್ತು, ಆಡಂಬರ, ಬೂಟಾಟಿಕೆ ಒತ್ತಡ, ಮಾನವೀಯತೆಯ ಕೊರತೆ, ಪ್ರೀತಿ, ಮಮತೆ, ವಾತ್ಸಲ್ಯಗಳ ಹುಡುಕಾಟ ಕಾರಣವಂತೆ.

ತಿದ್ದುವವರು ಯಾರು?

ಉತ್ತರ ನಮ್ಮನ್ನು, ನಮ್ಮಷ್ಟಕ್ಕೆ ನಾವೇ ತಿದ್ದಿಕೊಳ್ಳಬೇಕು, ಬೇರೆ ಯಾರಿಂದಲೂ ಸಾಧ್ಯಾವಿಲ್ಲ, ಹಿಂದಿನ ಕಾಲದಲ್ಲಿ ಅಜ್ಜಿ ಕಥೆ ಹೇಳುತ್ತಿದ್ದಳು, ಈಗ ಸೋಶಿಯಲ್ ಮೀಡಿಯಾ ಕಥೆ ಕೇಳಬೇಕು, ಅಜ್ಜಿ ಅವಳಿಗೆ ಮನಸ್ಸಿಗೆ ಬಂದ ಕಥೆ ಹೇಳುತ್ತಿದ್ದಳು, ಸೋಶಿಯಲ್ ಮೀಡಿಯಾದಲ್ಲಿ ನಮಗೆ ಇಷ್ಟ ಬಂದ ವಿಷಯದ ಹುಡುಕಿ ಕಥೆ ಕೇಳಬಹುದು.

  10 ದಿವಸಗಳ ಸಮಾಲೋಚನೆಯ ಪಲಿತಾಂಶ, ‘LIFE IS SHORT ಇರುವ ಅಲ್ಪ ಸಮಯವನ್ನು ಆನಂದಿಸಿ’, ಯಾವುದಕ್ಕೂ ಕೊರಗ ಬೇಡಿ, ನಿಮ್ಮ ಆಸೆ ಆಕಾಂಕ್ಷೆಗಳಿಗೆ, ಅನಿಸಿಕೆಗಳಿಗೆ  ನಿರಂತರ ಪ್ರಯತ್ನ ಮಾಡಿ, ಪಲಿತಾಂಶವನ್ನು ದೇವರಿಗೆ ಬಿಡಿ. ಯಾರಿಗೂ ಯಾವುದಕ್ಕೂ ಹೋಲಿಕೆ ಮಾಡಿಕೊಳ್ಳಬೇಡಿ,  ನೋಡಿ ಸ್ವಾಮಿ ನಾವು ಇರೋದೆ ಹೀಗೆ ಎಂಬ ಸಮಾಧಾನಕ್ಕೆ ಬನ್ನಿ, ಇಲ್ಲದಿದ್ದರೆ ನಿಮ್ಮ ಕರ್ಮ ಚಿಂತೆ ಮಾಡಿ ಸಾಯಿರಿ.