12th April 2024
Share

TUMKURU:SHAKTHIPEETA FOUNDATION

  ವಿಶ್ವದ 7 ದೇಶಗಳಲ್ಲಿ ಇವೆ ಎನ್ನಲಾದ 108 ಶಕ್ತಿಪೀಠಗಳ ಸಂಶೋಧನೆ, ಶಕ್ತಿಪೀಠ ಕ್ಯಾಂಪಸ್ ನಲ್ಲಿ ನೀರು(ಗಂಗಾಮಾತೆ) ಮತ್ತು ಶಕ್ತಿದೇವತೆಗಳ ಸಂಶೋಧನೆ ಮಾಡಲು, ಭಾರತ ನಕ್ಷೆ ಮಾಡಿ, ಕೇಂದ್ರ ಸರ್ಕಾರದ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ, ಹಿಂದೂಮಹಾಸಾಗರ, ಬಂಗಾಳಕೊಲ್ಲಿ ಮತ್ತು ಅರಬ್ಭಿ ಸಮುದ್ರ ನಿರ್ಮಾಣ ಮಾಡಿ, ಒಂದು ಕೋಟಿ ಲೀಟರ್‍ಗಿಂತ ಹೆಚ್ಚಿಗೆ ಮಳೆ ನೀರು ಸಂಗ್ರಹಮಾಡಿ,  ಅಕ್ಕ-ಪಕ್ಕದಲ್ಲಿ ಇರುವ 6 ದೇಶಗಳಾದ ಟಿಬೆಟ್, ಪಾಕಿಸ್ಥಾನ, ಆಪ್ಘಾನಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಲ್ಲಿನ ಶಕ್ತಿಪೀಠಗಳ ಜಿಐಎಸ್ ಆಧಾರಿತ ಸ್ಥಳ ಗುರುತು ಮಾಡುವ ಮೂಲಕ ಚಾಲನೆ ನೀಡಲಾಗಿದೆ.

  1. ಮೊದಲು ನನ್ನ ಹುಟ್ಟೂರು ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೋಕಿನ ಕುಂದರನಹಳ್ಳಿ ಶ್ರೀ ಗಂಗಮಲ್ಲಮ್ಮ ದೇವಾಲಯದ ಆವರಣದಲ್ಲಿ ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆಗಳನ್ನು ಮಾಡಲು ಚರ್ಚೆ ಆರಂಭವಾಯಿತು.
  2. ಎರಡನೇಯದಾಗಿ ನನ್ನ ಮನೆದೇವರು ತುಮಕೂರು ಜಿಲ್ಲೆಯ, ಚಿಕ್ಕನಾಯಕನಹಳ್ಳಿ ತಾಲ್ಲೋಕಿನ ಶ್ರೀ ತೀರ್ಥರಾಮೇಶ್ವರ ವಜ್ರದಲ್ಲಿ ಮಾಡಲು ಆಲೋಚನೆ ಮೂಡಿ ಬಂತು.
  3. ಮೂರನೇಯದಾಗಿ ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೋಕಿನ ಉದ್ದೇಶಿತ ವಿಜ್ಞಾನ ಗುಡ್ಡದಲ್ಲಿ ಮಾಡಲು ಜಮೀನು ದಾನ ಪಡೆದು ಪೂಜೆಯನ್ನು ಮಾಡಲಾಯಿತು. 
  4. ನಾಲ್ಕನೆಯದಾಗಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹಾಲಿ ಇರುವ ಮೂಕಾನನ ರೆಸಾರ್ಟ್ ಸ್ಥಳದಲ್ಲಿ ಮಾಡಲು ಜಮೀನು ಅಗ್ರಿಮೆಂಟ್ ಮಾಡಿಕೊಳ್ಳಲಾಯಿತು.
  5. ಐದನೆಯದಾಗಿ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠ ರಚಿಸಿ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದಲ್ಲಿ ಸಂಶೋಧನೆ ಮಾಡಲು ನಿರ್ಧಾರ ಮಾಡಲಾಯಿತು.
  6. ಆರನೇಯದಾಗಿ ಕುಂದರನಹಳ್ಳಿಯ ಡಾ.ಶಿವಕುಮಾರಸ್ವಾಮೀಜಿ ತಪೋವನದಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಲು ಚಿಂತನೆ ಆರಂಭವಾಯಿತು.

 ಈ ಮೇಲ್ಕಂಡ ಆರು ಕಡೆ, ಎಲ್ಲಿ ಮಾಡಿದರೂ ಬೇರೆ, ಬೇರೆ ಸಂಸ್ಥೆಗಳಿಗೆ ಮಾಡಿ, ಬಿಟ್ಟುಕೊಡುವ ಆಲೋಚನೆ ನನ್ನದಾಗಿತ್ತು.

  ಶಕ್ತಿದೇವತೆ ಉದ್ದೇಶ ಪೂರ್ವಕವಾಗಿ ಎಲ್ಲಾ ಕಡೆ ಅಡಚಣೆ ಮಾಡಿಸಿದ್ದಾರೆ ಎಂಬ ಭಾವನೆ ನನ್ನಲ್ಲಿ ಮೂಡಿದೆ. ಅಂತಿಮವಾಗಿ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆಜಿ ಹಳ್ಳಿ ಹೋಬಳಿ, ಬಗ್ಗನಡುಕಾವಲ್ ನಲ್ಲಿ ಸುಮಾರು 12 ಎಕರೆ 15 ಗುಂಟೆ ಜಮೀನು ಕೊಂಡು ಕೊಂಡು ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡಲು ದೇವತೆ ಆಶೀರ್ವಾದ ನೀಡಿದ್ದಾರೆ ಎನಿಸುತ್ತಿದೆ.

ಅಭಿವೃದ್ಧಿ ಪೀಠ, ಜಲಪೀಠ ಮತ್ತು ಶಕ್ತಿಪೀಠ ನನ್ನ ಕನಸಿನ ಯೋಜನೆಗಳು, ಈ ಯೋಜನೆಗಳ ಅನುಷ್ಠಾನ ಹಾಗೂ ಸಂಶೋಧನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೂ ಸಮಾಲೋಚನೆ ನಡೆಸಲಾಗುತ್ತಿದೆ.

ನನ್ನ ಪ್ರಕಾರ, ಕುಂದರನಹಳ್ಳಿ, ತುಮಕೂರು ನಗರ, ವಸಂತಾನರಸಾಪುರ ಕೈಗಾರಿಕಾ ವಲಯ, ಬೆಂಗಳೂರು, ದೆಹಲಿ ಮತ್ತು ಹಿರಿಯೂರು ಕ್ಯಾಂಪಸ್ ಹೀಗೆ 6 ಕಡೆ ಕಚೇರಿ ಹಾಗೂ ವೆಹಿಕಲ್ ಮೂಲಕ ಮೊಬೈಲ್ ಕಚೇರಿಗಳ ಅವಶ್ಯಕತೆ ಇದೆ. ಎಲ್ಲಾ ಕಡೆ ಮೂಲಭೂತ ಸೌಕರ್ಯದ ಆರಂಭಿಕ ಪ್ರಯತ್ನಗಳು ಆಮೆ ವೇಗದಲ್ಲಿ ಸಾಗುತ್ತಿವೆ. ಸಂಶೋಧನೆ ಮಾತ್ರ ಶರವೇಗದಲ್ಲಿ ನಡೆಯುತ್ತಿದೆ.

ಶಕ್ತಿಪೀಠ ಫೌಂಡೇಷನ್ ಸಿಇಓ ರವರಾದ ಕೆ.ಆರ್.ಸೋಹನ್ ರವರು ವಿಶ್ವದ 108 ಶಕ್ತಿಪೀಠಗಳ ಪ್ರವಾಸ ಹಾಗೂ ಅಧ್ಯಯನವನ್ನು ಈಗಾಗಲೇ ಆರಂಭಿಸಿದ್ದಾರೆ. ನಾನೂ ಜೊತೆ, ಜೊತೆಯಲ್ಲಿ ಅಥವಾ ಪ್ರತ್ಯೇಕವಾಗಿ ಪ್ರವಾಸ ಆರಂಭಿಸಿದ್ದೇನೆ.

ಶಕ್ತಿಪೀಠಗಳ ಹಾಗೂ ವಿವಿಧ ನದಿಗಳ ಸ್ಥಳದಿಂದ ತರುವ ಬರವಣಿಗೆಗಳು, ಪುಸ್ತಕಗಳು, ವಿಗ್ರಹಗಳು, ಪೂಜಾಸಾಮಾಗ್ರಿಗಳು, ಮಣ್ಣು, ನೀರು ಇತ್ಯಾದಿ ಸಂಗ್ರಹಗಳನ್ನು ಎಲ್ಲಿ ಸಂಗ್ರಹ ಮಾಡುವುದು ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ.

ಕುಂದರನಹಳ್ಳಿ, ತುಮಕೂರು ನಗರದ ಆಡಳಿತ ಕಚೇರಿ, ಹಿರಿಯೂರು ಕ್ಯಾಂಪಸ್, ಬೆಂಗಳೂರಿನ ಗೆಸ್ಟ್ ಹೌಸ್, ದೆಹಲಿಯಲ್ಲಿನ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ಸಿಇಓ ರವರು ಉಳಿದುಕೊಂಡಿರುವ ಕೊಠಡಿ ಹೀಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ.

ಶಕ್ತಿಪೀಠ ಫೌಂಡೇಷನ್ ಆಡಳಿತ ಕಚೇರಿಯೂ ಆಗಿರುವ, ನನ್ನ ನೆಚ್ಚಿನ ಸಂಶೋಧನಾ ಕೇಂದ್ರವೂ ಆಗಿರುವ ತುಮಕೂರು ನಗರದಲ್ಲಿಯೇ ಶಕ್ತಿಪೀಠ ಮ್ಯೂಸಿಯಂ ಆರಂಭಿಸಲು ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

ತುಮಕೂರಿನಲ್ಲಿರುವ ನಮ್ಮ ಕಚೇರಿ, ನೆಲ ಅಂತಸ್ತು ಮಾತ್ರ ಇದ್ದು, ಸಂಶೋಧನಾ ಕಚೇರಿಯಲ್ಲಿಯೇ ನಮ್ಮ ವಾಸವಿದೆ. ಸಂಶೋಧಕರಿಗೆ ವಾಸ ಮತ್ತು ಸಂಶೋಧನಾ ಕೇಂದ್ರ ಒಂದೇ ಕಡೆ ಇದ್ದರೆ ಬಹಳ ಅನೂಕೂಲ ಎಂಬ ಅರಿವು ನನಗೆ ಈಗಾಗಲೇ 18 ವóರ್ಷಗಳಿಂದ ಆಗಿದೆ.

ಪ್ರಸ್ತುತ ಈ ಕಟ್ಟಡ ಸಾಲುತ್ತಿಲ್ಲ, ಇರುವ ಮನೆಯ ಮೇಲೆ ಕಟ್ಟಡ ನಿರ್ಮಾಣ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹಾಗೂ ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣವರು ಬಹಳ ದಿವಸಗಳಿಂದ ಒಪ್ಪುತ್ತಿಲ್ಲ.

ಈ ಕಟ್ಟಡವನ್ನು ಕೆಡವಿ, ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ನನ್ನ ಪತ್ನಿ ಹಾಗೂ ಪುತ್ರ ಇಬ್ಬರೂ ಒಪ್ಪುತ್ತಿರಲಿಲ್ಲ. ನನ್ನ ಮಗಳು ಪರವೂ ಇಲ್ಲ, ವಿರೋಧವೂ ಇಲ್ಲ. ಈಗ ಎಲ್ಲರೂ ಒಂದು ನಿರ್ಧಾರಕ್ಕೆ ಬಂದಿದ್ದೇವೆ.

ತುಮಕೂರಿನಲ್ಲಿರುವ ಕಟ್ಟಡವನ್ನು ಕೆಡವಿ ಹಾಕಿ, ಹೊಸದಾಗಿ ನೆಲ ಅಂತಸ್ತುವಿನಲ್ಲಿ ಪಾರ್ಕಿಂಗ್ ಮತ್ತು ಅಭಿವೃದ್ಧಿ ಸಂಶೋಧನೆ, ಮೊದಲ ಮತ್ತು ಎರಡನೇಯ ಅಂತಸ್ತಿನಲ್ಲಿ ವಾಸದ ಮನೆ, ಮೂರನೆಯ ಅಂತಸ್ತುವಿನಲ್ಲಿ ಶಕ್ತಿಪೀಠಗಳ ಮತ್ತು ಗಂಗಾಮಾತೆಯ ಸಂಶೋಧನೆ/ಮ್ಯೂಸಿಯಂ ಸ್ಥಾಪಿಸಲು ಸಿದ್ಧತೆ ಆರಂಭವಾಗಿದೆ.

ಈ ಕಟ್ಟಡಕ್ಕೆ ಶಕ್ತಿಭವನ ಎಂಬ ಹೆಸರನ್ನು ಇಡಲು ಚರ್ಚೆ ಆರಂಭವಾಗಿದೆ. ಈ ಕಟ್ಟಡದಲ್ಲಿ ಸಾವಿರಾರು ಜನರು ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದೀರಿ, ಕೊರೊನಾ ಬಂದ ಮೇಲೆ ಇಲ್ಲಿ ಯಾವ ಸಭೆಗಳು ನಡೆದಿಲ್ಲ. ನಿಮ್ಮಗಳ ಅಭಿಪ್ರಾಯವೂ ನನಗೆ ಮುಖ್ಯ.

ಹಾಲಿ ಇರುವ ಕಟ್ಟಡವನ್ನು ಕೆಡವಲು ದಿನಾಂಕ:17.10.2022 ರಂದು ಪೂಜೆ ಮಾಡಲು ಸಿದ್ಧತೆ ನಡೆದಿದ್ದರೂ, ತುಮಕೂರು ಮಹಾನಗರ ಪಾಲಿಕೆಯಿಂದ ಕೆಡವಲು ಅನುಮತಿ ಪಡೆದಿದ್ದರೂ, ಗುತ್ತಿಗೆದಾರರಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಮನಸ್ಸಿನಲ್ಲಿ ಇನ್ನೂ ಎಲ್ಲೋ ಒಂದು ಕಡೆ ಇರುವ ಕಟ್ಟಡವನ್ನು ಹೇಗೆ ಕೆಡವಿ ಹಾಕುವುದು ಎಂಬ ಕೊರಗು ನನಗೆ ಇದೆ.

‘ಈ ಕಟ್ಟqದ ಮೇಲೆ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ 3 ಭಾರಿ ಪೂಜೆ ಮಾಡಿ, ಪ್ರಯತ್ನ ಮಾಡಿದರೂ ಕಟ್ಟಡ ನಿರ್ಮಾಣ ಮಾಡಲು ಸಾದ್ಯಾವಾಗಿಲ್ಲ. ಈಗ ಕೆಡವಲು ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ನನಗೆ ಇನ್ನೂ ಇದೆ ?’

ನನಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸುಮಾರು 500 ಜನ ಸಂಶೋಧಕರೂ, ಒಂದೊಂದು ವಿಷಯದ ಹೊಣೆಗಾರಿಕೆ ಪಡೆಯುವ ಹಿಂಗಿತ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲರೂ ಎಲ್ಲ ರೀತಿಯಲ್ಲಿ ಸಹಕಾರ ನೀಡುವ ಭರವಸೆ ನೀಡುತ್ತಾ ಬಂದಿದ್ದಾರೆ.

ಅವರೆಲ್ಲರ ಮತ್ತು ನಮ್ಮ ಇ-ಪೇಪರ್ ಓದುಗರ ಅಭಿಪ್ರಾಯ, ಸಲಹೆ, ಮಾರ್ಗದರ್ಶನ ನೀಡಲು ಮನವಿ ಮಾಡಲಾಗಿದೆ.