24th April 2024
Share

TUMAKURU:SHAKTHIPEETA FOUNDATION

  ಯಾವುದೇ ಒಂದು ಕಟ್ಟಡ ನಿರ್ಮಾಣ ಮಾಡಬೇಕಾದರೆ, ಆಯಾ ನೋಡುವುದು, ವಾಸ್ತು ನೋಡುವುದು ಮತ್ತು ಕಾನೂನು ಪ್ರಕಾರ ಸೆಟ್ ಬ್ಯಾಕ್ ನಿಯಮ ಹಾಗೂ ಕಂಟ್ರಿ ಪ್ಲಾನ್ ಪ್ರಕಾರ ಕಟ್ಟಡ ನಿರ್ಮಾಣ ಮಾಡುವುದು ಅಗತ್ಯ.

ತುಮಕೂರಿನ ಜಯನಗರ ಪೂರ್ವದ, ಮೊದಲನೇ ಮುಖ್ಯ ರಸ್ತೆಯಲ್ಲಿದ್ದ, ಪಾರ್ವತಿ ನಿಲಯದ ಕಟ್ಟಡವನ್ನು ಕೆಡವಿ ಹಾಕಿ, ಹೊಸದಾಗಿ ‘ಶಕ್ತಿ ಭವನ’ ಕಟ್ಟಡವನ್ನು ನಿರ್ಮಾಣ ಮಾಡಲು ಚಿಂತನೆ ಇರುವುದರಿಂದ, ದಿನಾಂಕ:17.10.2022 ರಂದು ಬೆಳಿಗ್ಗೆ 9 ರಿಂದ 10.30 ರ ಒಳಗೆ ಪೂಜೆ ಮಾಡಿ, ನಮ್ಮ ಲೈಬ್ರರಿಯಲ್ಲಿದ್ದ ಸುಮಾರು 500 ಕ್ಕೂ ಹೆಚ್ಚು ಕಡತಗಳನ್ನು ಶಕ್ತಿಪೀಠ ಪೌಂಡೇಷನ್ ನ ಕುಂದರನಹಳ್ಳಿ ಕಚೇರಿಗೆ ಮತ್ತು ಬೆಂಗಳೂರಿನ ಕಚೇರಿಗೆ ಶಿಪ್ಟ್ ಮಾಡಲಾಯಿತು.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಬೆಂಗಳೂರಿಗೆ ಶಿಪ್ಟ್ ಆದ ಮೇಲೆ  ತುಮಕೂರಿನ ಕಚೇರಿಯನ್ನು ಏನು ಮಾಡುತ್ತೀರಾ, ಎಂದಾಗ, ತುಮಕೂರಿನ ಕಟ್ಟಡ ಕೆಡವಿ, ಹೊಸ ಕಟ್ಟಡ ನಿರ್ಮಾಣ ಮಾಡಲು ಯೋಚಿಸಲಾಗಿದೆ. ಇಂದಿನಿಂದ ಕಟ್ಟಡ ಕೆಡವಿ ಹಾಕುವ ಪ್ರಕ್ರೀಯೆ ಆರಂಭವಾಗಿದೆ ಎಂದಾಗ, ಅವರು ಮೊದಲು ಕೇಳಿದ್ದು ಡಿಮಾಲಿಷನ್ ಆರ್ಡರ್ ತೆಗೆದುಕೊಂಡಿದ್ದೀರಾ, ನೋಡಿ ಶಾಸಕರ ನಿಯಮ ಪ್ರಜ್ಞೆಯನ್ನು.

ಹೌದು ನಾನು ಮೊದಲೇ ಡಿಮಾಲಿಷನ್ ಆರ್ಡರ್ ಪಡೆದುಕೊಂಡಿದ್ದಕ್ಕೆ ಮಾನ ಮರ್ಯಾದೆ, ಉಳಿಯಿತು, ಉಡಾಫೆ ಹೊಡೆದುಕೊಂಡು’ ಕಟ್ಟಡ ಕೆಡವಿ ಹಾಕಲು ಆರಂಭಿಸಿದ್ದರೆ, ಶಾಸಕರ ಪ್ರಶ್ನೆಗೆ ನನ್ನ ಬಳಿ ಉತ್ತರ ಇರುತ್ತಿರಲಿಲ್ಲ.

 1. ವಿದ್ಯುತ್ ಸರಬರಾಜು ಸಂಪರ್ಕ ತಪ್ಪಿಸಿ, ಟೆಂಪ್ರರಿ ಸರ್ವಿಸ್ ಸಹ ಪಡೆಯಲಾಗಿದೆ.
 2. ಬ್ರಾಂಡ್ ಬ್ಯಾಂಡ್ ಸಂಪರ್ಕ ಕಡಿತ ಗೊಳಿಸುವ ಪ್ರಕ್ರೀಯೆ ಆರಂಭವಾಗಿದೆ.
 3. ಮೆಘಾ ಗ್ಯಾಸ್ ಸಂಪರ್ಕ ಕಡಿತ ಗೊಳಿಸುವ ಪ್ರಕ್ರೀಯೇ ಆರಂಭವಾಗಿದೆ.
 4. ನಾನೇ ಮನೆ ಮುಂದೆ ಮತ್ತು ಹಿಂದೆ ಬೆಳಿಸಿದ್ದ ಕಾಡು, ಈಗ ಕಟ್ಟಡ ಕಟ್ಟಲು ತೊಂದರೆ ಕೊಡುವ ರೆಂಬೆಗಳನ್ನು ಕಡಿದು ಹಾಕಲು ಅರಣ್ಯ ಇಲಾಖೆಗೆ ಡಿಜಿಟಲ್ ಮನವಿ ಮಾಡಲಾಗಿದೆ.
 5. ಬೋರ್ ವೆಲ್ ನೀರು ಇದೆ. ಪಾಲಿಕೆ ನೀರಿನ ಸಂಪರ್ಕ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇನೆ.
 6. ಯುಜಿಡಿ ಸಂಪರ್ಕ ಕಡಿತ ಗೊಳಿಸ ಬೇಕಾಗಬಹುದು.
 7. ಕಟ್ಟಡ ಸಾಮಾಗ್ರಿ ಹಾಕಲು ಪಾಲಿಕೆಯ ಅನುಮತಿ ಹೇಗೆ ಎಂಬ ಬಗ್ಗೆ ಚಿಂತನೆ ಇದೆ.

ಎಲ್ಲಕ್ಕಿಂತ ಮಿಗಿಲಾಗಿ ಆಯಾ, ವಾಸ್ತು ಮತ್ತು ನಿಯಮದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಆರ್.ಟಿ.ಐ ಕಾರ್ಯಕರ್ತರು, ಅಕ್ಕ-ಪಕ್ಕದ ಮನೆಯವರು ಹಾಗೂ ನಾಗರೀಕ ಹಿತರಕ್ಷಣಾ ಸಮಿತಿಯವರ ಸಲಹೆ ಹಾಗೂ ಒಂದು ಕಟ್ಟಡವನ್ನು ನಿರ್ಮಾಣ ಮಾಡಲು ಇರುವ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಡ್ಡಾಯ, ಶೇಕಡ 100 ರಷ್ಟು ನಿಯಮ ಪಾಲಿಸ ಬಹುದೇ ಎಂಬ ಯೋಚನೆ ಇದೆ. ಈ ಬಗ್ಗೆ ನಾಗರೀಕರಿಗೆ ಜಾಗೃತಿ ಮಾಡಿಸುವುದು ನನ್ನ ಕರ್ತವ್ಯ.

ಶ್ರೀ ನಿಜಗುಣಯ್ಯನವರು, ಶ್ರೀ ನಾಗರಾಜರಾವ್‍ರವರು ಆಯಾ, ವಾಸ್ತು ನೋಡುತ್ತಿದ್ದಾರೆ, ಶ್ರೀ ಗೀರಿಶ್ ರವರು ಆರ್ಕಿಟೆಕ್ಚರ್ ಪ್ಲಾನ್ ನೀಡುವುದಾಗಿ ಹೇಳಿದ್ದಾರೆ. ಶ್ರೀ ಸತ್ಯಾನಂದ್‍ರವರು ಹಾಗೂ ಶ್ರೀ ರಾಮಮೂರ್ತಿಯವರು ಸಹ ಒಂದು ವಾಸ್ತು ಪ್ರಕಾರ ಪ್ಲಾನ್ ಮಾಡಿಕೊಟ್ಟಿದ್ದಾರೆ.

ಶ್ರೀ ರುದ್ರೇಶ್ ರವರು ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಪರವಾನಗಿ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಶ್ರೀ ಹರೀಶ್‍ರವರು ನಿಯಮ ಪ್ರಕಾರ ತೆಗೆದುಕೊಳ್ಳುವ ಕಾಗದ ಪತ್ರಗಳ ಕೆಲಸ ಆರಂಭಿಸಿದ್ದಾರೆ.

 1. ಶಕ್ತಿಪೀಠ: ವಿಶ್ವದ 108 ಶಕ್ತಿಪೀಠಗಳÀ ಸಂಶೋಧನಾ ಕೇಂದ್ರ /ಮ್ಯೂಸಿಯಂ.
 2. ಜಲಪೀಠ: ಕರ್ನಾಟಕ ಪ್ರತಿ ನೀರಿನ ಡಾಟಾ ಸೆಂಟರ್ /ಮ್ಯೂಸಿಯಂ.
 3. ಅಭಿವೃದ್ಧಿ ಪೀಠ: 2022 ರಿಂದ 2047 ರವರೆಗೆ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್ ಮೌಲ್ಯಮಾಪನ /ಮ್ಯೂಸಿಯಂ.
 4. ಸಂಶೋಧಕರು ಈ ಕಟ್ಟಡದಲ್ಲಿಯೇ ತಂಗಲು ವ್ಯವಸ್ಥೆ.
 5. ಪಾರ್ಕಿಂಗ್,
 6. ಕಟ್ಟಡದ ಟಾಪ್ ಮೇಲೆ ಧ್ಯಾನ ಮಾಡಲು ಪುಟ್ಟ ಪಿರಮಿಡ್.
 7. ಪೋಸ್ಟ್ ಆಫೀಸ್ ಮಾದರಿಯಲ್ಲಿ ನಮ್ಮ ವಾಸವೂ ಅದೇ ಕಟ್ಟಡದಲ್ಲಿ ಇರಬೇಕು.

 ಕೇವಲ 1520 ಚದುರ ಅಡಿ ನಿವೇಶನದಲ್ಲಿ, 40 ಅಡಿ ಉದ್ದ, 36 ಅಡಿ ಅಗಲದ ನಿವೇಶನ ಮಾತ್ರವನ್ನು ಬಳಸಬಹುದಾಗಿದೆ. ನೈರುತ್ಯದಲ್ಲಿ ಬೆಳೆದಿರುವ 80 ಚದುರ ಅಡಿ ನಿವೇಶನವನ್ನು ವಾಸ್ತು ಪ್ರಕಾರ ಏನು ಮಾಡಬೇಕು ಎಂಬ ಚಿಂತನೆ ಇದೆ.

ದಕ್ಷಿಣದಲ್ಲಿ 30 ಅಡಿ ಅಗಲದ ರಸ್ತೆ, ನಂತರ ಉಧ್ಯಾನವನ, ಉತ್ತರದಲ್ಲಿ 60 ಅಡಿ ಅಗಲದ ರಸ್ತೆ, ಪಶ್ಚಿಮದಲ್ಲಿ, ಎರಡು ಕಟ್ಟಡದ ನಂತರ 80 ಅಡಿ ರಸ್ತೆ ಅಗಲ ಹಾಗೂ ಒಳ್ಳೆಯ ಅರಳಿ ಮರ ಇದೆ.

ನಿವೇಶನದ ಪಶ್ಚಿಮ ದಿಕ್ಕಿಗೆ ನೀರು ಹರಿಯಲಿದೆ, ಇದು ವಾಸ್ತುವಿಗೆ ವಿರುದ್ಧವಾಗಿದೆಯಂತೆ, ನಿವೇಶನದ ಹೊರಭಾಗದಲ್ಲಿ ವಾಸ್ತು ಇಲ್ಲ ಎನ್ನುತ್ತಾರೆ, ವಾಸ್ತು ತಜ್ಞರು.

ಉಚಿತವಾಗಿ ಅಥವಾ ಸಂಭಾವನೆ ಪಡೆದು ಆಯಾ, ವಾಸ್ತು, ಆರ್ಕಿಟೆಕ್ಚರ್ ಮತ್ತುÀ ಸರ್ಕಾರಿ ನಿಯಮಗಳ ಸಲಹಗಾರರು ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸ ಬಹುದು.