27th July 2024
Share

TUMKURU:SHAKTHIPEETA FOUNDATION

ಸ್ಮಾರ್ಟ್ ಸಿಟಿ ತುಮಕೂರು, ಜಯನಗರ ಪೂರ್ವದಲ್ಲಿ, ವಿಶ್ವದ 108 ಶಕ್ತಿಪೀಠಗಳ ಮ್ಯೂಸಿಯಂ ಕಟ್ಟಡದ ನಿರ್ಮಾಣ ಆರಂಭವಾಗಿದೆ. ಮುಂದಿನ ನವರಾತ್ರಿ ವೇಳೆಗೆ ಶಕ್ತಿಪೀಠ ಮ್ಯೂಸಿಯಂ  ಲೋಕಾರ್ಪಣೆಗೊಳ್ಳಲು ಸಿದ್ಧತೆ ನಡೆಯುತ್ತಿದೆ.

ಶಕ್ತಿಪೀಠ ಫೌಂಡೇಷನ್ ನ ಪ್ರಮುಖ ಉದ್ದೇಶಗಳಾದ

  1. 108 ಶಕ್ತಿಪೀಠಗಳ ಸಂಶೋಧನೆ ಮತ್ತು ಅಭಿವೃದ್ಧಿ.
  2. 12 ಎಕರೆ 15 ಗುಂಟೆ ಜಮೀನನಲ್ಲಿ ಶಕ್ತಿಪೀಠ ಕ್ಯಾಂಪಸ್.
  3. ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ.
  4. ಕರ್ನಾಟಕ ರಾಜ್ಯದ ಪ್ರತಿಯೊಂದು ಹನಿ ನೀರಿನ ಮಾಹಿತಿಯುಳ್ಳ ಜಲಗ್ರಂಥ.
  5. 2022 ರಿಂದ 2047 ರವರೆಗಿನ ನವಕರ್ನಾಟಕ ವಿಷನ್ ಡಾಕ್ಯುಮೆಂಟ್ ಜನಜಾಗೃತಿ.
  6. 1947 ರಿಂದ ಇಲ್ಲಿಯವರೆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಭಾರತ ದೇಶದ ಪ್ರಧಾನ ಮಂತ್ರಿಗಳವಾರು ಅಭಿವೃದ್ಧಿ ಯೋಜನೆಗಳ ಮ್ಯೂಸಿಯಂ.
  7. ಕುಂದರನಹಳ್ಳಿ ಹೆಚ್.ಎ.ಎಲ್ ಮ್ಯೂಸಿಯಂ.
  8. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮೌಲ್ಯಮಾಪನ.
  9. ವಿಷಯವಾರು ಪರಿಣಿತರ ಪ್ರಭುದ್ಧಾಶ್ರಮ ಹಾಗೂ ಅಧ್ಯಯನ ಪೀಠಗಳ ಹಬ್.

  ಒಂಬತ್ತು ವಿಷಯಗಳಿಗೆ ಅನುಗುಣವಾಗಿ, 9 ಕಾಲಂಗಳ ಮೇಲೆ (ನವದುರ್ಗೆಯರು, ನವ ಗ್ರಹಗಳು, ಮೋದಿಯವರ 9 ದೀಪಗಳುಶಕ್ತಿಪೀಠ ಮ್ಯೂಸಿಯಂ ಕಟ್ಟಡ ಶುಭಾರಂಭವಾಗಿದೆ. ದಿಕ್ಕುಗಳ/ಕಾಲಂ ಸ್ಥಳಗಳ ಬಗ್ಗೆ ಈಗ ಅಧ್ಯಯನ ಆರಂಭವಾಗಿದೆ.

ಪಾರ್ಕಿಂಗ್‍ನಲ್ಲಿ ‘ಶಕ್ತಿಪೀಠ ಮೊಬೈಲ್ ಹೈಟೆಕ್ ವಾಹನ ನಿಲ್ಲುವಂತೆ, ಕಟ್ಟಡದ ಎತ್ತರ ನಿರ್ಮಾಣ ಮಾಡಬೇಕಿರುವುದರಿಂದ, ಕರ್ನಾಟಕ ರಾಜ್ಯದ ಮೂಲೆ, ಮೂಲೆಗಳಲ್ಲಿ ಮೇಲ್ಕಂಡ ವಿಷಯಗಳ ಜನಜಾಗೃತಿ ಹಾಗೂ ಸ್ಥಳ ವೀಕ್ಷಣೆ ಮಾಡಲು ಅನುಗುಣವಾಗಿ, ವಾಹನವನ್ನು ಕೊಂಡು ಕೊಂಡು ಸಿದ್ಧಪಡಿಸಲು ನಿರ್ಣಯ ಮಾಡಲಾಗಿದೆ.

  ಯಾವ ವಾಹನ ಸೂಕ್ತ ಎಂಬ ಬಗ್ಗೆ ಶಕ್ತಿಪೀಠ ಇ ಪೇಪರ್ ಓದುಗರ ಅಭಿಪ್ರಾಯ ನೀಡಲು ಬಹಿರಂಗ ಮನವಿ ಮಾಡಲಾಗಿದೆ. ಈ ವಾಹನ ನನ್ನ ಮೊಬೈಲ್ ಕಚೇರಿ/ಲಿವಿಂಗ್ ಮಾದರಿಯಲ್ಲಿರಲಿ ಎಂಬುದು ನನ್ನ ಅನಿಸಿಕೆಯಾಗಿದೆ.

ಶಕ್ತಿಪೀಠ ಅಭಿಮಾನಿ ಡ್ರೈವರ್ ಒಬ್ಬರು ಸಾರ್, ಘಾಟ್ ಸೆಕ್ಷನ್ ಹೊರತು ಪಡಿಸಿ, ವಿಶ್ವದ 108 ಶಕ್ತಿಪೀಠಗಳಿಗೂ ನಾನೇ ಕರೆದುಕೊಂಡು ಹೋಗುತ್ತೇನೆ, ನೀವೂ ಟಯೋಟಾ ಕಂಪನಿ ವಾಹನವನ್ನೇ ತೆಗೆದುಕೊಳ್ಳಿ ಎಂಬ ಸಲಹೆ ನೀಡಿದ್ದಾರೆ.

ನಾನು ಈಗಾಗಲೇ ಟಯೋಟಾ ಕಂಪನಿ ಶ್ರೀ ನರೇಂದ್ರ ಬಾಬುರವರಿಗೆ ಕಳೆದ ಕೆಲವು ದಿನಗಳ ಹಿಂದೆಯೇ ಈ ಬಗ್ಗೆ ಚರ್ಚೆ ಮಾಡಿದ್ದೆ. ಅವರು ಸಹ ಹಲವಾರು ರೀತಿಯ ಸಲಹೆ ನೀಡಿದ್ದರು. ಜೊತೆಗೆ ಹಲವಾರು ವಾಹನಗಳ ಶೋ ರೂಂಗಳಿಗೂ ಭೇಟಿ ನೀಡಿ ಸಮಾಲೋಚನೆ ನಡೆಸಲಾಗಿದೆ. ಈಗ ಅಂತಿಮ ಹಂತ ತಲುಪಿರುವುದರಿಂದ ಶಕ್ತಿಪೀಠ ಫ್ಯಾಮಿಲಿ’ಯವರ ಸಲಹೆ, ಮಾರ್ಗದರ್ಶನ ಅಗತ್ಯವಾಗಿದೆ.