UPA-NIMZ: NDA-INDUSTRIAL NODE:SHAKTHIPEETA DATA PARK.
TUMAKURU:SHAKTHIPEETA FOUNDATION
(ದಿನಾಂಕ:06.04.2023 ರಂದು ಶ್ರೀ ಹನುಮಜಯಂತಿ ದಿವಸದಿಂದ ಆರಂಭಿಸಿದ್ದೇನೆ. ಇದಕ್ಕೂ ಒಂದು ಒಂದು ವಿಶೇಷತೆ ಇದೆ.)
ಮಾಜಿ ಪ್ರಧಾನಿ ಶ್ರೀ ಮನೋಮೋಹನ್ ಸಿಂಗ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರ, ನ್ಯಾಷನಲ್ ಇನವೆಸ್ಟ್‍ಮೆಂಟ್ ಮ್ಯಾನುಪ್ಯಾಕ್ಚುರಿಂಗ್ ಝೋನ್ ಗಳನ್ನು(NIMZ) ದೇಶದಲ್ಲಿ ಮೊದಲ ಹಂತದಲ್ಲಿ 10 ಕಡೆ ಆರಂಭಿಸಲು ಘೋಷಣೆ ಮಾಡಿತು.
ನಾನು ದೆಹಲಿಗೆ ಹೋಗಿದ್ದಾಗ ಬಿಡುವು ಇದ್ದರೆ, ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸೆಮಿನಾರ್ ಗಳಲ್ಲಿ ಕುಳಿತುಕೊಳ್ಳುವ ಪರಿಪಾಠವಿದೆ. ಆಕಾಸ್ಮಾತ್ ಆಗಿ ನಾನು ಹೋಗಿದ್ದ ದಿವಸ ನಿಮ್ಜ್ ಕುರಿತು ಕಾರ್ಯಾಗಾರ ನಡೆಯುತ್ತಿತ್ತು.
ಅಲ್ಲಿ ನಡೆದ ಚರ್ಚೆಯಲ್ಲಿ ಒಂದು ಜಿಲ್ಲೆಯಲ್ಲಿ ಸುಮಾರು 50 ರಿಂದ 100 ಕೀಮಿ ಸುತ್ತಳತೆಯಲ್ಲಿ ಸುಮಾರು 5000 ಹೆಕ್ಟೇರ್ ಭೂಮಿಯಲ್ಲಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಪಡಿಸುವ ಕುರಿತು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸುವುದಾಗಿತ್ತು.
ನನ್ನ ತಲೆಗೆ ಬಂದಿದ್ದು ಏನೇ ಕಷ್ಟವಾದರೂ ಸರಿ ತುಮಕೂರು ಜಿಲ್ಲೆಗೆ ಈ ಯೋಜನೆ ತರಲೇಬೇಕು. ಆಗ ರಾಜ್ಯದಲ್ಲಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇತ್ತು. ತುಮಕೂರಿನಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರು ಸೋತಿದ್ದರು.
ಶ್ರೀ ಎಸ್.ಸುರೇಶ್ ಕುಮಾರ್ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು. ಯಾವುದಾದರು ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಿಂದ ಒಂದು ಸಂಸ್ಥೆ ಹೊರತಂದಿದ್ದ ಮತದಾರರ ಪ್ರಣಾಳಿಕೆಯ ಎಲ್ಲಾ ಅಂಶಗಳಿಗೆ, ಸಂಭಂದಿಸಿದ ಇಲಾಖೆಗಳಿಗೆ ಶಿಫಾರಸ್ಸು ಪತ್ರ ಬರೆದ ಉದಾಹರಣೆ ಇದ್ದರೆ. ಅದು ಶ್ರೀ ಎಸ್.ಸುರೇಶ್ ಕುಮಾರ್ ರವರು ಮತ್ತು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀ ಡಾ.ಎ.ಆರ್.ಮಂಜುನಾಥ್ ರವರಿಗೆ ಸೇರಲಿದೆ.
ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪತ್ರ ಎಂದರೆ, ಒಬ್ಬ ಶಾಸಕನ ಪತ್ರ ಎಂಬ ಭಾವನೆ ಅವರ ಕಚೇರಿಯ ಪ್ರತಿಯೊಬ್ಬರಿಗೂ ಇತ್ತು ಎಂದರೆ ಅತಿಶಯೋಕ್ತಿಯಲ್ಲ.
ತುಮಕೂರು ಜಿಲ್ಲೆಯಲ್ಲಿ ಸುಮಾರು 12500 ಎಕರೆ ಜಮೀನು ಕೈಗಾರಿಕಾ ವಲಯವಾಗಿ ಘೋಷಣೆ ಮಾಡಲು, ನೋಟಿಫಿಕೇಷನ್ ಮಾಡಲು ಸಂಭಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಎಂದು ನಾನು ಒಂದು ಪತ್ರ ಬರೆದೆ,
ನನಗೆ ಅವರ ಕಚೇರಿಯಿಂದ ಫೋನ್ ಕಾಲ್ ಬಂತು, ಸಾರ್ ಪಿಎಸ್ ಕೇಳುತ್ತಾ ಇದ್ದರೆ, ಕಚೇರಿಗೆ ಬರಬೇಕಂತೆ.ನಾನು ಬೆಂಗಳೂರಿನಲ್ಲಿಯೇ ಇದ್ದೇನೆ ಬರುತ್ತೇನೆ ಎಂದು ಫೋನ್ ಇಟ್ಟೆ, ಮತ್ತೆ ಪೋನ್ ಬಂತು ಡಾ.ಶ್ರೀ ಮಂಜುನಾಥ್ ರವರೇ ಮಾತನಾಡಿ, ರಮೇಶ್ ರವರೇ ಇಲ್ಲಿಯೇ ಊಟಕ್ಕೆ ಬನ್ನಿ ಎಂದರು.
ಊಟ ಮಾಡುತ್ತಾ ಕುಳಿತಾಗ ಅವರು ಹೇಳಿದ ಮಾತು, ಇಲ್ಲಿ ಬಿಜೆಪಿ ಸರ್ಕಾರ ಇದೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಈ ಯೋಜನೆ ಮಂಜೂರು ಮಾಡುತ್ತಾರಾ? ಅಲ್ಲದೇ 12500 ಎಕರೆ ಅಂದರೆ ಸುಲಭನಾ ರೈತರು, ವಿರೋಧ ಪಕ್ಷಗಳು ಸುಮ್ಮನಿರುತ್ತಾರಾ? ಎಂದರುÀ.
ಸಾರ್ ಮುಂದಿನದು ಏನೇ ಇರಲಿ, ನೀವೂ ಕೆಐಡಿಬಿಗೆ ಪತ್ರ ಬರೆಯಿರಿ, ಉಳಿದ ಕೆಲಸ ನನ್ನದು, ಆದರೇ ಆಗಲಿ, ಹೋದರೇ ಹೋಗಲಿ ಎಂದಾಗ ಮಂಜುನಾಥ್ ರವರು, ಅಲ್ಲಿಯೇ ಕರೆದು ಪತ್ರ ಬರೆದು ಡ್ರಾಪ್ಟ್ ತೋರಿಸಿ ಎಂದು ಸೂಚಿಸಿದರು.
ನಾನು ಪತ್ರ ನೋಡಿ ಸರಿಯಾಗಿದೆ ಸಹಿ ಹಾಕಿ ಕಳಿಸಿ ಸಾರ್ ಎಂದು ಹೇಳಿ ಬಂದೆ. ಮೂರು ದಿವಸದ ನಂತರ ಒಂದು ಫೋನ್ ಕಾಲ್ ಬಂತು. ಸಾರ್ ನಾನು ಕೆಐಡಿಬಿ ಎಸ್.ಎಲ್.ಎ.ಓ ರಾಮಕೃಷ್ಣ ಅಂತ, ನೀವೂ ಕುಂದರನಹಳ್ಳಿ ರಮೇಶ್ ರವರಮ ನಿಮ್ಮ ಪತ್ರ ಮತ್ತು ಶ್ರೀ ಸುರೇಶ್ ಕುಮಾರ್ ಪತ್ರದ ಬಗ್ಗೆ ಮಾತನಾಡಬೇಕು ಎಂದರು ಹೌದು ಸಾರ್ ಯಾವಾಗ ಎಲ್ಲಿ ಭೇಟಿಯಾಗೋಣ ಎಂದಾಗ ನಾನು ನಾಳೆ ತುಮಕೂರಿಗೆ ಬರುತ್ತೇನೆ ಎಂದರು.
ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಹೊಯ್ಸಳ ಹೋಟೆಲ್ ಗೆ ಬನ್ನಿ ಎಂದು ಹೇಳಿದೆ.
ಮುಂದುವರೆಯುವುದು—–