TUMAKURU:SHAKTHI PEETA FOUNDATION
ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್
ಮತ್ತು
ಭಾರತ @ 100 ಸ್ವಾತಂತ್ರ್ಯ ಸೇನೆ (BSS)
ಶಕ್ತಿ ಭವನ, ಒಂದನೇ ಮುಖ್ಯ ರಸ್ತೆ, ಜಯನಗರ ಪೂರ್ವ, ತುಮಕೂರು ಮೊ:9886774477
ತುಮಕೂರು ಲೋಕಸಭಾ ಕ್ಷೇತ್ರ ಮತ್ತು ವಿಧಾನ ಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರಿಗೆ
ವಿಶ್ವದ 108 ಶಕ್ತಿಪೀಠಗಳ ಸಮ್ಮುಖದಲ್ಲಿ ನಮ್ಮ ಭರವಸೆ ಮೂಲಕ ಪ್ರತಿಜ್ಞೆ
- ನನ್ನ ಸಾರ್ವಜನಿಕ ಜೀವನದ 35 ವರ್ಷಗಳಲ್ಲಿ, ಇದೂವರೆಗೂ ನಾನು ಮಾಡಿರುವ ಎಲ್ಲಾ ತಪ್ಪುಗಳ ಬಗ್ಗೆ ಮತದಾರರ ಮುಂದೆ ‘ಬಹಿರಂಗ ಕ್ಷಮೆ’ ಕೋರುವುದು. ಇನ್ನೂ ಮುಂದೆ ಯಾವುದೇ ತಪ್ಪು ಮಾಡದ ರೀತಿ ನಡೆದುಕೊಳ್ಳುವುದು.‘ನನ್ನ ಮತಗಟ್ಟೆ ಡಿಜಿಟಲ್ ಕ್ಯಾಂಪೇನ್’ ಮೂಲಕ, ಪ್ರತಿಯೊಂದು ಮತಗಟ್ಟೆಯಲ್ಲಿನ ಜ್ಞಾನಿಗಳು ಮತ್ತು ಸ್ನೇಹಿತರೊಂದಿಗೆ ಸಮಾಲೋಚನೆ ನಡೆಸಿ ‘ಅಭಿವೃದ್ಧಿ ವಿಲೇಜ್/ಬಡಾವಣೆ ಡೆವಲಪ್ ಮೆಂಟ್ ಜಿಐಎಸ್ ಲೇಯರ್ ಪ್ಲಾನ್’ ಮಾಡುವುದು.
1947 ರಿಂದ ಇದೂವರೆಗೂ ಆಗಿರುವ ಯೋಜನೆಗಳು ಮತ್ತು 2047 ರವರೆಗೆ ಆಗಬೇಕಾಗಿರುವ ವ್ಯಕ್ತಿ ಕುಟುಂಬ ಮತ್ತು ಗ್ರಾಮ/ಬಡಾವಣೆಗಳ ಯೋಜನೆಗಳ ನಿಖರವಾದ ಮಾಹಿತಿಯೊಂದಿಗೆ ‘ಕಾರ್ಯತಂತ್ರ’ ರೂಪಿಸುವುದು. ಯೋಜನೆ ಪೂರ್ಣಗೊಳಿಸಲು ಯೋಜನಾವಾರು ‘ಪ್ರಷರ್ ಗ್ರೂಪ್’ ರಚಿಸುವುದು.
2. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರ ಕೆಲಸಗಳ ಬಗ್ಗೆ ‘RANKING’ ನೀಡಲು ಜ್ಞಾನಿಗಳ ‘ವಿಷನ್ ಗ್ರೂಪ್’ ರಚಿಸುವುದು.
ಪ್ರತಿಯೊಂದು ಮತಗಟ್ಟೆಯಲ್ಲಿ ನಂಬಿಸಿ ದ್ರೋಹ ಮಾಡುವವರನ್ನು ಪತ್ತೆ ಹಚ್ಚಲು ಆರಂಭದಿಂದಲೇ ರಹಸ್ಯ ವ್ಯಕ್ತಿಗಳ ಜೊತೆ ಒಡನಾಟ.
3.‘ಇ- ಪೇಪರ್ ಶಕ್ತಿಪೀಠ ನಿಮಗಿದು ಗೊತ್ತೆ ?’ ಮೂಲಕ ಪ್ರತಿಯೊಂದು ವಿಚಾರದ ಮಾಹಿತಿ ಹಂಚಿಕೊಳ್ಳುವುದು.
4.‘ಭಾರತ @ 100 ಯೂ ಟ್ಯೂಬ್ ಚಾನಲ್’ ಮೂಲಕ ಪ್ರತಿಯೊಂದು ವಿಚಾರದ ಮಾಹಿತಿ ಹಂಚಿಕೊಳ್ಳುವುದು.
5. ಪ್ರತಿಯೊಂದು ‘ಗ್ರಾಮ/ ಬಡಾವಣೆ ಡಿಜಿಟಲ್ ಮಿತ್ರ’ ರನ್ನು ನೇಮಕ ಮಾಡಿಕೊಂಡು, ನನಗೆ ಬೇಕಾಗಿರುವ ಮಾಹಿತಿಗಳನ್ನು ನೀಡುವವರಿಗೆ, ಅವರ ಕೆಲಸಕ್ಕೆ ತಕ್ಕ ಸಂಭಾವನೆಯನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವುದು.
6. ಯಾವುದೇ ವ್ಯಕ್ತಿ ಅಥವಾ ಕಟುಂಬದ ಕನಸುಗಳನ್ನು ಪಟ್ಟಿ ಮಾಡಿ, ಅವರಿಗೆ ನಿರಂತರವಾಗಿ ‘ಸಹಕಾರ ಮತ್ತು ನೆರವು’ ನೀಡಲು ಶ್ರಮಿಸುವುದು.
7. ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಕ್ಷೇತ್ರವನ್ನು ‘ಫೈಲಟ್ ಪ್ರಾಜೆಕ್ಟ್’ ಆಗಿ ತೆಗೆದು ಕೊಂಡು, ನಂತರ ಇದೇ ಮಾದÀರಿಯಲ್ಲಿ ರಾಜ್ಯದ 224 ವಿಧಾನ ಕ್ಷೇತ್ರಗಳಿಗೂ ವಿಸ್ತರಣೆ ಮಾಡುವುದು.
8.ದಿನಾಂಕ: 15.10.2023 ರಿಂದ 24.10.2023 ರೊಳಗೆ ನಡೆಯುವ ಮುಂದಿನ ಶರನ್ನವರಾತ್ರಿಯಲ್ಲಿ, ತುಮಕೂರು ನಗರದ ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿನ, ಪಾರ್ವತಿ ನಿಲಯದಲ್ಲಿ ‘ಕಚೇರಿ ಆರಂಭಿಸಿ’, ಪ್ರತಿಯೊಂದು ದಿವಸವೂ ಮತದಾರರ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಲು ನೌಕರರನ್ನು ನೇಮಿಸುವುದು.
9.ತುಮಕೂರು ನಗರದಲ್ಲಿ ಇರುವ ದಿವಸ ‘ಕನಿಷ್ಟ ಒಂದು ಗಂಟೆ’ ಕಚೇರಿ ಯಲ್ಲಿ ಶ್ರೀ ಜಿ.ಬಿ. ಜ್ಯೋತಿಗಣೇಶ್ ರವರು ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರು ಹಾಜರಿದ್ದು ನಗರದ ಮತ್ತು ಲೋಕಸಭಾ ಕ್ಷೇತ್ರದ ಮತದಾರರ ಜೊತೆ ಸಮಾಲೋಚನೆ ನಡೆಸುವುದು ಕಡ್ಡಾಯ.
ಕುಂದರನಹಳ್ಳಿ ರಮೇಶ್ ಸೋಹನ್ ಕೆ.ಆರ್
ಶಕ್ತಿಪೀಠ ಫೌಂಡೇಷನ್ ಸೇವಕರು