TUMAKURU:SHAKTHIPEETA FOUNDATION
ಕಳೆದ 15 ದಿವಸಗಳಿಂದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸುಮಾರು 250 ಕ್ಕೂ ಹೆಚ್ಚು ಬೂತ್ ಗಳ ವ್ಯಾಪ್ತಿಯಲ್ಲಿ, ಕೆಳಕಂಡ ವರ್ಗದ ಸುಮಾರು 53 ಕ್ಕೂ ಹೆಚ್ಚು ಸಮಾಜಸೇವಕರಿಂದ, ಸುಮಾರು 2387 ಜನ ಡಾಟಾ ಮಿತ್ರರನ್ನು ಗುರುತಿಸಲಾಗಿದೆ.
- ವಿವಿಧ ದೇವಾಲಯಗಳ ಅರ್ಚಕರು.
- ವಿವಿಧ ಧಾರ್ಮಿಕ ಮುಖಂಡರು
- ವಿವಿಧ ಅಡ್ಡಗಳು.
- ಸಲೂನ್ ಷಾಪ್‍ಗಳು.
- ಟೆಕ್ಕಿಗಳು.
- ಮಹಿಳಾ ಪ್ರತಿನಿಧಿಗಳು.
- ಹಿರಿಯ ನಾಗರೀಕರು.
- ವಿವಿಧ ಸಂಘಸಂಸ್ಥೆಗಳು.
- ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು.
ತುಮಕೂರು @ 100 ಗೆ ಪೂರಕವಾಗಿ, ಇದೊಂದು ನನ್ನ ಜೀವನದಲ್ಲಿ ಐತಿಹಾಸಿಕ ನಿರ್ಧಾರ ಎಂದರೆ ಅತಿಶಯೋಕ್ತಿಯಲ್ಲ, ನಾನು ಇವರ ಮೂಲಕ ಸಂಗ್ರಹಿಸಬೇಕಾದ ಡಾಟಾ ಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು.
ನಿಖರವಾದ ಮಾಹಿತಿ ಸಂಗ್ರಹಿಸಿ ನೀಡುವ, ಪ್ರತಿಯೊಬ್ಬ ಡಾಟಾ ಮಿತ್ರರಿಗೂ ಶಕ್ತಿಪೀಠ ಫೌಂಡೇಷನ್ ವತಿಯಿಂದ ನೇರವಾಗಿ, ಅವರ ಖಾತೆಗಳಿಗೆ ಸೂಕ್ತ ಗೌರವ ಧನ ಮತ್ತು ಪ್ರಶಸ್ತಿ ಪತ್ರ ನೀಡಿ ನಾಗರೀಕ ಸನ್ಮಾನ ಮಾಡಲಾಗುವುದು.
ಇಂದಿನಿಂದಲೇ ಡಾಟಾ ಮಿತ್ರರ ಮನೆ ಬಾಗಿಲಿಗೆ, ನಾನೇ ಖದ್ಧಾಗಿ ಭೇಟಿ ನೀಡಲು ನಿರ್ಧರಿಸಿದ್ದೇನೆ. ಡಾಟಾ ಮಿತ್ರರು ಆಯಾ ಬೂತ್ ನಲ್ಲಿ ಇದ್ದಾರೆಯೇ ಎಂಬ ನಿಖರವಾದ ಮಾಹಿತಿ ಸಂಗ್ರಹಿಸಲು ಡಿಜಿಟಲ್ ಸಾಧನಗಳನ್ನು ಬಳಸಿಕೊಳ್ಳಲಾಗುವುದು.
ಕುಂದರನಹಳ್ಳಿ ರಮೇಶ್ ಕದ್ದು ಹೋಗಿದ್ದಾರೆ ಎಂದು ಕೊಳ್ಳ ಬೇಡಿ, ನಾನು ತಂಗಿದ್ದ ಕೊಠಡಿ ಮೇಲೆ ದಾಳಿ ನಡೆದಿದ್ದರಿಂದ, ನಾನು ತುಮಕೂರು ನಗರದಲ್ಲಿ ಕಟ್ಟುತ್ತಿರುವ ಮನೆಯ ಮೇಲೆ ದಾಳಿ ನಡೆದಿದ್ದರಿಂದ, ನಾನು ಓಡಾಡುವ ಕಾರು ಹಿಂಬಾಲಿಸಿದ್ದರಿಂದ, ಚುನಾವಣಾ ಸಮಯವಾÀದ್ದರಿಂದ ಅನಗತ್ಯ ಗೊಂದಲಗಳಿಗೆ ಉತ್ತರ ನೀಡದಿರಲು ತೀರ್ಮಾನಿಸಿ, ಅನಿವಾರ್ಯವಾಗಿ ನಿಮ್ಮ ಸಂಪರ್ಕದಿಂದ ದೂರವಿದ್ದೇನೆ.
ಡಾಟಾ ಮಿತ್ರರೇ ನೀವೂ ನೀಡುವ ಮಾಹಿತಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮಾದರಿಯಾಗಲಿದೆ. ದೇಶದ ಪ್ರಧಾನಿ ಶ್ರೀ ನರೇಂದ್ರಮೋದಿಯವರು ಮತ್ತು ರಾಜ್ಯದ ನೂತನ ಮುಖ್ಯ ಮಂತ್ರಿಯವರಿಗೂ ಈ ವರದಿಯನ್ನು ಶೀಘ್ರವಾಗಿ ಸಲ್ಲಿಸಲಾಗುವುದು.
ಒಂದು ವಾರದಲ್ಲಿ ನನಗೆ ಇಷ್ಟು ಜನರ ಸಂಪರ್ಕ ಮಾಡಲು ಚುನಾವಣಾ ಸಮಯವದ್ದಾರಿಂದ ಮಾತ್ರ ಸಾಧ್ಯಾವಾಗಿದೆ. ಬೇರೆ ಸಮಯದಲ್ಲಿ ಇಷ್ಟು ಜನರ ಸಂಪರ್ಕ ಮಾಡಲು ಬಹಳ ಸಮಯ ಬೇಕಾಗಿತ್ತು. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
ತುಮಕೂರು @ 100 ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲು ಸುಮಾರು ಒಂದು ಕೋಟಿ ಹಣ ಖರ್ಚಾಗಲಿದೆ. ದಾನಿಗಳು ಡಿಜಿಟಲ್ ದೇಣಿಗೆ ನೀಡಲು ಈ ಮೂಲಕ ಮನವಿ ಮಾಡಲಾಗಿದೆ.