22nd November 2024
Share

TUMKURU:SHAKTHIPEETA FOUNDATION

ನಾನು ತಂಗಿದ್ದ ಕೊಠಡಿಯ ಮೇಲೆ ದಾಳಿ ಮಾಡಿರುವ ಸುಮಾರು 10 ರಿಂದ 15 ಜನರ ಮತ್ತು ಮೂವರು ಪೋಲಿಸರ ಮನೆಯಲ್ಲಿ ಊಟಮಾಡುವ ಮೂಲಕ, ನನ್ನ ಕೊಠಡಿ ಮೇಲೆ ಏಕೆ ದಾಳಿ ಮಾಡಲಾಯಿತು. ಯಾರ ಕೈವಾಡದಿಂದ ಹೀಗೆ ನಡೆಯಿತು.

ಪಾಪ ಅಮಾಯಕರಾದ ತಮ್ಮನ್ನು ಜೈಲಿಗೆ ಕಳುಹಿಸಲು ಈ ಹನ್ನಾರ ಮಾಡಿದವರು ಯಾರು. ಎಂಬ ಮಾಹಿತಿಯನ್ನು ಸಂಗ್ರಹಮಾಡಿ, ಅವರೆಲ್ಲರ ಮನವೋಲಿಸಲು ನಿರ್ಧರಿಸಲಾಗಿದೆ.

ಈಗಾಗಲೇ ದಾಳಿ ನಡೆದವರ ಜೊತೆ, ದಾಳಿ ನಡೆದ ಕೊಠಡಿಯಲ್ಲಿಯೇ, ಸರ್ಕಲ್ ಇನ್ ಸ್ಪೆಕ್ಟರ್ ಮತ್ತು ಸಬ್ ಇನ್ ಸ್ಪೆಕ್ಟರ್ ಮುಂದೆಯೇ ಸಮಾಲೋಚನೆ ನಡೆಸಲಾಗಿದೆ. ಅವರೆಲ್ಲರೂ ನನ್ನ ನಡವಳಿಕೆ ನೋಡಿ ಕಣ್ಣೀರು ಹಾಕಿದ ಪ್ರಸಂಗವೂ ಸಾಕ್ಷಿಯಾಗಿದೆ. 

ಅವರ ಜೀವನದಲ್ಲಿ ಇಂಥ ಕೃತ್ಯವನ್ನು ಇನ್ನೂ ಮುಂದೆ ನಡೆಸದಂತೆ, ಅವರೆಲ್ಲರ ಮನಸ್ಸು ಪರಿವರ್ತನೆ ಮಾಡಲು 108 ಶಕ್ತಿಪೀಠಗಳ ಆಶೀರ್ವಾದ ನನಗಿದೆ. ಅವರ ಕುಟುಂಬದ ಸದಸ್ಯರ ಜೊತೆಯೂ ಸಮಾಲೋಚನೆ ನಡೆಸಲು ಇಷ್ಟ ಪಟ್ಟಿರುವುದರಿಂದ ಅವರ ಮನೆಯಲ್ಲಿ ಊಟ ಮಾಡಲು ನಿರ್ಧರಿದ್ದೇನೆ.

ನನ್ನ ಕರೆಗೆ ಓಗೊಟ್ಟು ಸಮಯಕ್ಕೆ ಸರಿಯಾಗಿ ಬಂದು ನನಗೆ ರಕ್ಷಣೆ ನೀಡಿದ ತುಮಕೂರಿನ ಎಸ್.ಪಿ ರವರು ಮತ್ತು ಡಿವೈಎಸ್.ಪಿ ರವರಿಗೂ, ಎಲ್ಲಾ ಹಂತದವರಿಗೂ ನನ್ನ ಧನ್ಯವಾದಗಳು. ಅವರನ್ನು ನಮ್ಮ ಮನೆಗೆ ಕರೆದು ಗೌರವಿಸಲು ನಿರ್ಧರಿಸಲಾಗಿದೆ.

ವಿಷಯ ತಿಳಿದ ತಕ್ಷಣ ನಾನೊಬ್ಬ ಹಿರಿಯ ಸಂಸದ ಎನ್ನುವುದನ್ನು ಗಮನಿಸಿದೆ, ನಾನು ಬೇಡ ಎಂದರು ಪೋಲೀಸ್ ಸ್ಟೇಷನ್ ಗೆ ಬಂದು ನನ್ನ ಆರೋಗ್ಯ ವಿಚಾರಿಸಿದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ನನ್ನ ಧನ್ಯವಾದಗಳು.

ನನ್ನ ಕರೆಗೆ ಓಗೊಟ್ಟು ನನ್ನ ಪುಕ್ಸಟ್ಟೆ ವಕೀಲರಾದ ಶ್ರೀ ಎಂ.ಎಂ. ಮಲ್ಲಿಕಾರ್ಜುನಯ್ಯನವರು, ಆ ವೇಳೆಯಲ್ಲಿ ಪೋಲೀಸ್ ಸ್ಟೇಷನ್ ಗೆ ಹಾಜರಾಗಿ, ನನಗೆ ಆತ್ಮ ಬಲ ತುಂಬಿದ್ದಾರೆ. ಅವರಿಗೂ ನನ್ನ ಧನ್ಯವಾದಗಳು.

 ಪತ್ರಿಕೆ ಓದಿ ಸಾಕಷ್ಟು ಜನ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ, ಅವರೆಲ್ಲರಿಗೂ ನನ್ನ ಧನ್ಯವಾದಗಳು.ಘಟನೆ ನಡೆದ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಬಹಳ ಗಡುಸಾಗಿ ವರ್ತಿಸಿದ್ದೇನೆ. ಅವರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಕೋರುತ್ತೇನೆ. ನನ್ನಂತವರ ಮೇಲೆ ಇಂಥ ಘಟನೆಗಳು ನಡೆದರೆ, ಇನ್ನೂ ಸಾಮಾನ್ಯ ಜನರ ಮೇಲೆ ಈ ರೀತಿ ಆದರೆ, ಹೇಗೆ ಎಂಬ ಸಿಟ್ಟಿನಿಂದ ಮಾತನಾಡಿದ್ದೇನೆಯೇ ಹೊರತು ಬೇರೆ ಯಾವುದೇ ವಿಚಾರ ಇಲ್ಲಿ ಇಲ್ಲ.