6th December 2024
Share

ಮಾಜಿ ಮಂತ್ರಿ ಸೊಗಡು ಶ್ರೀ ಶಿವಣ್ಣಗೆ ಲೀಗಲ್ ನೋಟೀಸ್

TUMAKURU:SHAKTHIPEETA FOUNDATION

ತುಮಕೂರು ನಗರ ವಿಧಾನಸಭಾ  ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶ್ರೀ ಸೊಗಡು ಶಿವಣ್ಣನವರು ನನ್ನ ಮೇಲೆ, ಈ ಕೆಳಕಂಡ ಆರೋಪ ಮಾಡಿರುವ ಹಿನ್ನಲೆಯಲ್ಲಿ ದಿನಾಂಕ:12.05.2023 ರೊಳಗೆ ಸ್ಪಷ್ಟ ದಾಖಲೆ ಬಿಡುಗಡೆಗೊಳಿಸಲು ಅಥವಾ ತಪ್ಪಿನ ಅರಿವಾಗಿದ್ದರೆ ಬಹಿರಂಗ ಕ್ಷಮೆ ಕೋರಲು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದೇನೆ.

ಒಂದು ವೇಳೆ ಸಮರ್ಪಕ ಉತ್ತರ ನೀಡದಿದ್ದಲ್ಲಿ ಮಾನ ನಷ್ಟಮೊಕದ್ದಮೆ ಹೂಡಲು ಲೀಗಲ್ ನೋಟೀಸ್ ನೀಡಲು ನನ್ನ ವಕೀಲರಾದ ಶ್ರೀ ಎಂ.ಎಂ. ಮಲ್ಲಿಕಾರ್ಜುನಯ್ಯನವರಿಗೆ ಮನವಿ ಮಾಡಿದ್ದೇನೆ.

ಅವರ ಜೊತೆಯಲ್ಲಿ ಸೇರಿಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಲು ಆಸಕ್ತಿ ಇರುವವರು ಸಂಪರ್ಕಿಸಲು ಮನವಿ.

ಸೊಗಡು ಶಿವಣ್ಣನವರು ಮಾಡಿರುವ ಸುಳ್ಳು ಆರೋಪಗಳು.

  1. ಕುಂದರನಹಳ್ಳಿ ರಮೇಶ್ ಸ್ಮಾರ್ಟ್ ಸಿಟಿಯ 5 ಕೋಟಿ ಹಣವನ್ನು ಲೂಟಿ ಮಾಡಿ ಮತದಾರರಿಗೆ ಹಂಚುತ್ತಿದ್ದಾನೆ ಎಂದು ಏಕೆ ಸುಳ್ಳು ಹೇಳಿದ್ದೀರಿ?
  2. ಕುಂದರನಹಳ್ಳಿ ರಮೇಶ್ ತುಮಕೂರಿನಲ್ಲಿ ಮನೆಯಿದ್ದರೂ ಸಿ.ಎನ್.ವಿ ಛೇಂಬರ್ಸ್ ನಲ್ಲಿ ಬಾಡಿಗೆ ಕೊಠಡಿ ಮಾಡಿದ್ದಾನೆ ಎಂದು ಏಕೆ ಸುಳ್ಳು ಹೇಳಿದ್ದೀರಿ?
  3. ಕುಂದರನಹಳ್ಳಿ ರಮೇಶ್ ಮೇಲೆ ಹಲ್ಲೆ ಮಾಡಿರುವವರು ಅಮಾಯಕರು  ಎಂದು ಏಕೆ ಸುಳ್ಳು ಹೇಳಿದ್ದೀರಿ?
  4. ನನ್ನ ಮೇಲೆ ಹಲ್ಲೆ ನಡೆದ ನಂತರ. ಪೋಲೀಸ್ ಸ್ಟೇಷನ್ ಗೆ ದೂರು ನೀಡಲು ಹೋದಾಗ, ಹಲ್ಲೆ ಮಾಡಿದವರ ಜೊತೆಯಲ್ಲಿ ಮಾತನಾಡಲು ತಮ್ಮ ಮಗ ಏಕೆ ಬಂದಿದ್ದರು.
  5. ನನ್ನ ಮೇಲೆ ಹಲ್ಲೆ ನಡೆದ ನಂತರ. ಪೋಲೀಸ್ ಸ್ಟೇಷನ್‍ಗೆ ದೂರು ನೀಡಲು ಹೋದಾಗ, ಹಲ್ಲೆ ಮಾಡಿದವರ ಜೊತೆಯಲ್ಲಿ ಮಾತನಾಡಲು ನಿಮ್ಮ ಆಪ್ತರು ಏಕೆ ಬಂದಿದ್ದರು.

                                              –ಕುಂದರನಹಳ್ಳಿ ರಮೆಶ್

ಕುಂದರನಹಳ್ಳಿ. ಅದಲಗೆರೆ ಅಂಚೆ, ಗುಬ್ಬಿ ತಾಲ್ಲೋಕು, ತುಮಕೂರು ಜಿಲ್ಲೆ.