22nd December 2024
Share

TUMAKURU: SHAKTHIPEETA FOUNDATION

  ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ತುಮಕೂರು @ 100, ಕರ್ನಾಟಕ @ 100 ಮತ್ತು ಇಂಡಿಯಾ @ 100 ಯೋಜನೆಗಳ ಜನಜಾಗೃತಿಗಾಗಿ ಭಾರತ @ 100 ಸ್ವಾತಂತ್ರ್ಯ ಸೇನೆ(BSS) ಎಂಬ ಸಂಘಟನೆಯನ್ನು ಹುಟ್ಟು ಹಾಕಿದೆ.

  ಈ ಸಂಘಟನೆಗೆ ಮೌನವಾಗಿ ಚಾಲನೆ ನೀಡಲಾಗಿದ್ದು, ಶಕ್ತಿ ಭವನ, ಒಂದನೇ ಮುಖ್ಯ ರಸ್ತೆ, ಜಯನಗರ ಪೂರ್ವ, ತುಮಕೂರು, ಈ ವಿಳಾಸದಲ್ಲಿ ನಾಲೇಡ್ಜ್ ಬ್ಯಾಂಕ್ @ 100 ಸ್ಥಾಪಿಸಲು ಭರದ ಸಿದ್ಧತೆ ನಡೆಸಿದೆ.

  1. ಹ್ಯೂಮನ್ ಲೈಬ್ರರಿ
  2. ಡಿಜಿಟಲ್ ಲೈಬ್ರರಿ
  3. ಫಿಸಿಕಲ್ ಲೈಬ್ರರಿ
  4. ಶಕ್ತಿಪೀಠ ಯೂ ಟ್ಯೂಬ್ ಚಾನಲ್
  5. ಶಕ್ತಿಪೀಠ ಇ-ಪೇಪರ್

  ಈ ಮೇಲ್ಕಂಡ ಐದು ವಿಭಾಗಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಸುಮಾರು 1520 ಚದುರ ಅಡಿ ನಿವೇಶನದಲ್ಲಿ ಗುತ್ತಿಗೆ ಆಧಾರದ ಕಟ್ಟಡದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಕಟ್ಟಡ ತುಮಕೂರು ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯ, ಜಯನಗರದ ಪೂರ್ವದ, ಮೊದಲನೇ ಮುಖ್ಯ ರಸ್ತೆಯಲ್ಲಿ ಬರಲಿದೆ.

  ಶೆಟ್ಟಿಹಳ್ಳಿ ಮುಖ್ಯ ರಸ್ತೆ 80 ಅಡಿ ಅಗಲವಿದ್ದು, ಕಟ್ಟಡದ ಮುಂಭಾಗ 60 ಅಡಿ ರಸ್ತೆ, ಹಿಂಭಾಗ 30 ಅಡಿ ರಸ್ತೆ ಮತ್ತು ಸುಮಾರು 10000 ಚದುರ ಅಡಿ ವಿಸ್ಥೀರ್ಣದ ಎಡಕಲ್ಲು ಗುಡ್ಡದ ಉಧ್ಯಾನವನ ಇದೆ. ಈ ಉಧ್ಯಾನವನದಲ್ಲಿ ಕುಳಿತು ಗುಂಪು ಚರ್ಚೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಭಿವೃದ್ಧಿ ಮಾಡುತ್ತಿದೆ.

  ತುಮಕೂರಿನ ಇಂಜಿನಿಯರ್ಸ್ ಅಸೋಶೀಯೇಷನ್ ಈ ಉದ್ಯಾನವನ್ನು ನಿರ್ವಹಣೆ ಮಾಡಲು ದತ್ತು ತೆಗೆದುಕೊಳ್ಳಲು ಮುಂದಾಗಿದೆ. ಇವರೊಂದಿಗೂ ಮಾತುಕತೆ ಆರಂಭವಾಗಿದೆ. ಬಿ.ಎಸ್.ಎಸ್ ಮುಂದಿನ 25 ವರ್ಷಗಳ ಕಾಲ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಮಾರ್ಗದರ್ಶಿ ಸೂತ್ರವನ್ನು ಸಿದ್ಧಪಡಿಸಲಾಗುತ್ತಿದೆ.

 ಈ ಕಟ್ಟಡದ ಒಳಗಡೆ ಬಂದು ಒಂದು ಸುತ್ತು ಹಾಕಿದರೇ, ಎಲ್ಲಾ ಮಾಹಿತಿಯೂ ಕ್ಷಣ ಮಾತ್ರದಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ, ಮಾಹಿತಿ ಜೋಡಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

 ವಿಶ್ವದ ಸುಮಾರು 108 ಶಕ್ತಿಪೀಠಗಳ ಮ್ಯೂಸಿಯಂ, ರಾಜ್ಯದ ಎಲ್ಲಾ ನದಿಗಳ ನೀರಿನ ಮಾಹಿತಿಯುಳ್ಳ ಜಲಗ್ರಂಥ ಮತ್ತು ಇಂಡಿಯಾ @ 100 ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಗಳ, ಪ್ರತಿಯೊಂದು ಯೋಜನೆಯ ಬಗ್ಗೆ ವಿಶ್ಲೇಷಣೆ ಮಾಡುವ, ಈ ಪುಣ್ಯ ಸ್ಥಳಕ್ಕೆ  ಪೂರಕವಾಗಿ ಆರ್ಚ್ ಮತ್ತು ನಾಮಫಲಕಗಳನ್ನು ಹಾಕಿಸಲು ಉತ್ತಮವಾದ ಐಡಿಯಾ ಕೊಡಲು ಈ ಮೂಲಕ ಮನವಿ ಮಾಡಲಾಗಿದೆ.

ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯೊಂದಿಗೆ ಸಮಾಲೋಚನೆ ಮಾಡುವ ಮುನ್ನ ನಿಖರವಾದ ನಕ್ಷೆಯೊಂದಿಗೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆ ಇದೆ.