22nd December 2024
Share

TUMAKURU:SHAKTHIPEETA FOUNDATION

ಸೋತವರೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರೆ, ಗೆದ್ದವರೆಲ್ಲಾ ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿದ್ದಾರೆ. ಯಾವುದೇ ಪಕ್ಷದ ಸೋಲು ಅಥವಾ ಗೆಲುವು ಕೇವಲ ಒಬ್ಬಿಬ್ಬರ ಶ್ರಮವಲ್ಲ. ಸಾವಿರಾರು ಜನರ ಪ್ರಳಯಾಂತಕ ಬುದ್ದಿ ಕೆಲಸ ಮಾಡಿರುತ್ತದೆ.

ರಾಜಕಾರಣದಲ್ಲಿ ಅಂತಿಮ ಪಲಿತಾಂಶ ಗೆಲುವು ಮಾತ್ರ. ಗೆದ್ದಾಗ ನಾನೇ ಗೆದ್ದೆ ಎನ್ನುತ್ತಾರೆ, ನನ್ನಿಂದಲೇ ಗೆದ್ದಿದ್ದು ಎನ್ನುತ್ತಾರೆ. ಸೋತಾಗ ಮಾತ್ರ ಕೆಲವರನ್ನು ದೂರುತ್ತಾರೆ. ಈಗಂತು ಸೋಶೀಯಲ್ ಮೀಡಿಯಾ ಗಮನಿಸಿದರೆ, ಪಾಪ ಕೆಲವರಿಗೆ ಉಗಿದು ಉಪ್ಪು ಹಾಕುತ್ತಿದ್ದಾರೆ.

ಸೋಲು ಗೆಲುವು ರಾಜಕಾರಣಿಗಳದ್ದಾದರೆ, ಕಾರ್ಯಕರ್ತರು ಚುನಾವಣೆ ನಡೆಯುವವರೆಗೂ ಚಾಲ್ತಿಯಲ್ಲಿರುತ್ತಾರೆ. ನಂತರ ಇಂಗು ತಿಂದ ಮಂಗಗಳಾಗುತ್ತಾರೆ. ಕಾರ್ಯಕರ್ತರು ಅಷ್ಟೆ ಚುನಾವಣಾ ಸಮಯದಲ್ಲಿ ನಾನಿಲ್ಲದಿದ್ದರೆ ಗೆಲ್ಲುವುದಿಲ್ಲಾ, ಎಲ್ಲಾ ನನ್ನಿಂದಲೇ ಎಂದು ಕೆಲವರು ಬೀಗುತ್ತಾರೆ.

 ಕೇವಲ 15 ದಿವಸ ಎಲ್ಲದರ ಬಗ್ಗೆ ಚರ್ಚೆ ಮಾಡುತ್ತಾರೆ. ಮರದ ತುದಿಯಲ್ಲಿ ಕುಳಿತಿರುತ್ತಾರೆ. ನಂತರ 5 ವರ್ಷ ಕುರಿಗಳಾಗುತ್ತಾರೆ. ಎಲ್ಲವೂ ವ್ಯಾಪಾರ, ಪ್ರತಿಯೊಬ್ಬರಿಗೂ ದರ ನಿÀಗದಿ ಮಾಮೂಲಾಗಿದೆ.

ಸೋಲುಸಿವುದೇ ನಮ್ಮ ಗುರಿ ಎನ್ನುವವರು, ಗೆದ್ದ ತಕ್ಷಣ ಹಾರ ತುರಾಯಿ ಹಾಕುತ್ತಾರೆ. ಗೆಲ್ಲಿಸಲು ಶ್ರಮಿಸಿದ್ದವರು ತೆಪ್ಪಗೆ ಮನೆಯಲ್ಲಿ ಇರುತ್ತಾರೆ. ರಾಜಕಾರಣ ಮಾಡುವವರು ಕೇವಲ ಶೇ 4-5 ರಷ್ಟು ಜನ ಮಾತ್ರ. ಉಳಿದ ಶೇ 95 ಜನ ಮೌನಿ ಮತದಾರರಾಗಿರುತ್ತಾರೆ.

ಚುನಾವಣಾ ಸಮಯದಲ್ಲಿ 15 ದಿವಸ  ಅಬ್ಬರ ಮಾಡುವವರು ಕೇವಲ ಶೇ 4-5 ರಷ್ಟು ಜನ ಮಾತ್ರ. ಇವರ ಅಬ್ಬರದ ಮೇಲೆ ರಾಜಕಾರಣಿಗಳ ವ್ಯಾಪಾರ ನಿಗದಿಯಾಗಲಿದೆ. ಕೋಟಿಗಳಿಗೆ ಬೆಲೆ ಇಲ್ಲ. ಸೋತವನು ಸಾಯುತ್ತಾನೆ. ಗೆದ್ದವನು ಕೇವಲ ಕೆಲವರ ದಾಸಾನಾಗುತ್ತಾನೆ.

ಸಾಹೇಬರು ಮನೆಯಲ್ಲಿ ಇಲ್ಲ. ಮೀಟಿಂಗ್ ನಲ್ಲಿದ್ದಾರೆ. ಸ್ವಿಚ್ ಆಪ್ ಮಾಡಲಾಗಿದೆ. ಬ್ಯುಸಿಯಾಗಿದೆ, ಸೈಲೆಂಟ್ ಮೋಡ್ ಅಷ್ಟೆ ರಾಜಕಾರಣ ಎಂದು ಟೀಕೆ, ಟಿಪ್ಪಣೆ ಬೇರೆ. ಕೆಲವು ರಾಜಕಾರಣಿಗಳಂತು ಮದುವೆ ಮನೆಯಲ್ಲಿ ಉಪಚಾರ ಮಾಡಿದಂತೆ ವರ್ಷಪೂರ್ತ ಉಪಚಾರ ಮಾಡುವವರು ಇದ್ದಾರೆ. ಚುನಾವಣೆಯಲ್ಲಿ ಅವರು ಸಹ ದರನಿಗದಿ ಮಾಡಲೇ ಬೇಕು.

ಎಲ್ಲವನ್ನೂ ಸಮಚಿತ್ತದಿಂದ ನಿಬಾಯಿಸುವುನೇ ರಾಜಕಾರಣಿ. ರಾಜಕಾರಣವೂ ಒಂದು ವ್ಯಾಪಾರ ಅಲ್ಲವೇ. 5 ವರ್ಷದ ಸಂಪಾದನೆಯನ್ನು, ಕೇವಲ 15 ದಿವಸ ಹಂಚುವುದೇ ರಾಜಕಾರಣದ ಹೂಡಿಕೆ.