22nd December 2024
Share

TUMAKURU:SHAKTHIPEETA FOUNDATION

ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್,  ಭಾರತ @ 100 ಸ್ವಾತಂತ್ರ್ಯ ಸೇನೆ(BSS) ಶಾಸಕರ ಕಚೇರಿ ಮತ್ತು  ಪ್ರತಿಯೊಂದು ಬೂತ್ ವ್ಯಾಪ್ತಿಯ ಡಾಟಾ ಮಿತ್ರರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾತು ಎಂಬ ವಿನೂತನ ಯೋಜನೆಯನ್ನು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಮೂಲಕ ಆರಂಭಿಸಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಶಾಸಕರಿಗೂ ಆರಂಭಿಸಲು ಮನವಿ ಮಾಡಲಾಗುವುದು.

ಶಾಸಕರ ಅವಧಿ 5 ವರ್ಷ ಅಂದರೆ, 260 ವಾರಗಳು, ತುಮಕೂರು ನಗರದಲ್ಲಿ ಸುಮಾರು 254 ಬೂತ್ ಗಳಿವೆ, ಅಂದರೆ ಒಂದು ವಾರಕ್ಕೆ ಒಂದು ಬೂತ್ ಭೇಟಿ ಕಾರ್ಯಕ್ರಮವಾಗಲಿದೆ. ನಗರದಲ್ಲಿ ಇಲ್ಲದ ವಾರದ ಬದಲಾಗಿ ಇನ್ನೊಂದು ದಿನ   ಕಾರ್ಯಕ್ರಮ ಆಯೋಜಿಸಲಾಗುವುದು.

ಅತ್ಯಂತ ಸರಳ ಕಾರ್ಯಕ್ರಮ, ಡಾಟಾ ಮಿತ್ರರ ಮನೆಯಲ್ಲಿ ಅಥವಾ ಒಂದು ಸಂಘಟನೆ ಕಚೇರಿಯಲ್ಲಿ ಅಥವಾ ಒಂದು ಉದ್ಯಾನವನದಲ್ಲಿ ಅಥವಾ ಒಂದು ಶಾಲೆಯಲ್ಲಿ ಅಥವಾ ಆಯಾ ಬೂತ್ ವ್ಯಾಪ್ತಿಯ ಜನ ಇಚ್ಚಿಸುವ ಸ್ಥಳದಲ್ಲಿ ಜನಸಂಪರ್ಕ ಸಭೆ, ಇಲ್ಲಿಯೇ ನಗರದ ಅಭಿವೃದ್ಧಿಯ ಒಂದು ಯೋಜನೆಯ ಬಗ್ಗೆ ಅಭಿವೃದ್ಧಿ ಮಾತು ಯೂ ಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಲು ಚಿಂತನೆ ನಡೆಸಲಾಗಿದೆ.

ಈ ಬಗ್ಗೆ ನಗರದ 254 ಬೂತ್ ಗಳಿಂದ, ಪಕ್ಷಾತೀತವಾಗಿ  ಸುಮಾರು 1000 ಕ್ಕೂ ಹೆಚ್ಚು ಅಭಿವೃದ್ಧಿ ಡಾಟಾ ಮಿತ್ರರನ್ನು ಈಗಾಗಲೇ ಗುರುತಿಸುವ ಕಾರ್ಯಕ್ರಮ ಆರಂಭವಾಗಿದೆ. ಒಂದು ಕಾರ್ಯಕ್ರಮ ರೂಪಿಸಲು ಆಯೋಜಕರ ಬ್ಯಾಂಕ್ ಖಾತೆಗೆ ನೇರವಾಗಿ ರೂ 1000 ಜಮಾ ಮಾಡಲು ಚಿಂತನೆಯಿದೆ.

ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲು ಡಿಜಿಟಲ್ ಜ್ಞಾನವಿರುವ ಒಂದು ತಂಡವನ್ನು ವೇತನ ಸಹಿತ ನೇಮಕ ಮಾಡಿಕೊಳ್ಳಲಾಗುವುದು ಆಸಕ್ತರು ಸಂಪರ್ಕಿಸಬಹುದಾಗಿದೆ.

ಈ ಕಾರ್ಯಕ್ರಮಕ್ಕೆ ವಿನೂತನ ಐಡಿಯಾ ಕೊಡುವವರಿಗೆ ಬಹಿರಂಗ ಮನವಿ, ಅಭಿವೃದ್ಧಿ ಮಾತು ಕಾರ್ಯಕ್ರಮಕ್ಕೆ ಪ್ರೇರಣೆ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ‘MANN KI BAAT’ ಎಂದರೆ ತಪ್ಪಾಗಲಾರದು.

ಶಾಸಕರು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ ಎಂಬ ಮಾತು ರಾಜ್ಯದ 224 ಕ್ಷೇತ್ರಗಳಲ್ಲೂ ಇರಬಹುದೇನೋ, ನಿರ್ಧಿಷ್ಟ ಒಂದು ವಾರದಲ್ಲಿ ಒಂದು ಬೂತ್ ನಲ್ಲಿ ಹಾಜರಿರುವ ಮೂಲಕ ಜನರ ಅನಿಸಿಕೆಗಳಿಗೆ ಸ್ಪಂಧಿಸಲು ಮತ್ತು ಆಯಾ ಬೂತ್ ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಪಾದಯಾತ್ರೆ ಮಾಡಿದರೆ ಅದರ ಖದರ್ ಬೇರೆಯಾಗಲಿದೆ.