TUMAKURU:SHAKTHIPEETA FOUNDATION
ಶ್ರೀ ಸಿದ್ಧರಾಮಯ್ಯನವರು, ಶ್ರೀ ಡಿ.ಕೆ.ಶಿವಕುಮಾರ್ ರವರು ಮತ್ತು ನೂತನ ಸರ್ಕಾರದ ಪ್ರತಿಯೊಬ್ಬರಿಗೂ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು.

ಕರ್ನಾಟಕದ ಬಹುತೇಕ ಜನತೆ ಈ ಭಾರಿ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಗ್ಯಾರಂಟಿಯೇ ಈ ಕಾತುರತೆಗೆ ಮೂಲ.
ಬಹುತೇಕ ಎಲ್ಲರೂ ಸಾಲದ ಮುಖ್ಯಮಂತ್ರಿಗಳೇ? ಇದೂವರೆಗೂ ರಾಜ್ಯವನ್ನು ಆಳಿದ ಅವಧಿವಾರು ಯಾವ ಮುಖ್ಯ ಮಂತ್ರಿಯವರು ಎಷ್ಟೆಷ್ಟು ಸಾಲ ಮಾಡಿದ್ದಾರೆ. ಈ ಸಾಲ ತೀರಿಸಲು ಕೈಗೊಳ್ಳುವ ಕ್ರಮಗಳೇನು ಮತ್ತು ಹೊಸ ಸಾಲಕ್ಕೆ ಯಾವ ರೀತಿ ಕಡಿವಾಣ ಹಾಕಲಾಗುವುದು ಎಂಬ ಬಗ್ಗೆ ಮುಖ್ಯ ಮಂತ್ರಿಯಾಗುವ ಹಾಗೂ ಸ್ವತಃ ಆರ್ಥಿಕ ತಜ್ಞರಾಗಿರುವ ಶ್ರೀ ಸಿದ್ಧರಾಮಯ್ಯನವರು ಪ್ರಥಮ ಸಚಿವ ಸಂಪುಟದಲ್ಲಿಯೇ ಪಾರದರ್ಶಕವಾಗಿ ಸ್ಪಷ್ಟ ಪಡಿಸಬೇಕು.

ಟೀಕೆ ಟಿಪ್ಪಣೆ ಮಾಡುವ ಬದಲು, ಇದೂವರೆಗೂ ರಾಜ್ಯವನ್ನು ಆಳಿರುವ ಮಾಜಿ ಮುಖ್ಯಂತ್ರಿಗಳು ಅವರವರ ಹಾಗೂ ಪಕ್ಷವಾರು ಸಾಲದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮತದಾರರಿಗೆ ತಿಳಿಸುವುದು ಸೂಕ್ತ.
ಕರ್ನಾಟಕ @ 100 ಅಂಗವಾಗಿ, ಮುಂದಿನ 25 ವರ್ಷಗಳಿಗೆ ಅಡಿಪಾಯ ಹಾಕುವ ಸುಭದ್ರ ಸರ್ಕಾರ ಇದಾಗಬೇಕಿದೆ. ‘ಟಗರು ಬಲ’ ಕರ್ನಾಟಕಕ್ಕೆ ವರದಾನಬಾಗಬೇಕಿದೆ. ಅವರ ಆಡಳಿತ ಶೈಲಿಯ ಅವಲೋಕನ ರಾಜ್ಯದ ಮತದಾರರ ಕರ್ತವ್ಯವೂ ಹೌದು!