7th December 2023
Share

TUMAKURU:SHAKTHI  PEETA FOUNDATION

ಬಿಪಿಎಲ್/ಎಪಿಎಲ್  ಕಾರ್ಡ್‍ನ ಮಾನದಂಡವನ್ನು ಪರಿಷ್ಕøತ ಗೊಳಿಸಿ, ಕಡ್ಡಾಯವಾಗಿ ಜಾರಿಗೊಳಿಸದರೆ ಮಾತ್ರ ಸರ್ಕಾgಗಳುÀ ಬಿಟ್ಟಿ ಯೋಜನೆಗಳಿಂದ ದಿವಳಿಯಾಗುವುದನ್ನು ತಪ್ಪಿಸಿ, ಅರ್ಹರಿಗೆ ಸರ್ಕಾರದ ಬಿಟ್ಟಿ ಯೋಜನೆಗಳನ್ನು ನೀಡಬಹುದಾಗಿದೆ. ಅರ್ಹರಿಗೆ ಬಿಟ್ಟಿ ಯೋಜನೆ ಅಗತ್ಯವಾಗಿದೆ ಅದರಲ್ಲಿ ಎರಡು ಮಾತಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕಠಿಣ ನಿರ್ಧಾರ ಕೈಗೊಳ್ಳ ಬೇಕಿದೆ. ಈ ಕೆಳಕಂಡ ಯೋಜನೆಗಳಿಗೆ ಯಾವುದೇ ಮುಲಾಜಿಲ್ಲದೆ ಆಧಾರ್ ಲಿಂಕ್ ಮಾಡುವುದು ಸೂಕ್ತವಾಗಿದೆ. ನ್ಯಾಯಾಲಯಗಳು ಸಹಕರಿಸ ಬೇಕಿದೆ.  ಆಗ ಮಾತ್ರ ಭವಿಷ್ಯದಲ್ಲಿ ಸರ್ಕಾರಗಳು ಸಧೃಡವಾಗಲಿವೆ.

ಸರ್ಕಾರಗಳು ದಿವಾಳಿಯಾಗುವುದನ್ನು ತಪ್ಪಿಸಿ, ಅರ್ಹರಿಗೆ ಅರ್ಹ ಯೋಜನೆ ಲಭಿಸಲಿದೆ ಮತ್ತು ಸಾವಿರಾರು ಕೋಟಿ ಹಣ ಸರ್ಕಾರಗಳಿಗೆ ಉಳಿಯಲಿದೆ.

  1. ಸ್ವಮಿತ್ವ (ಮನೆ ಮತ್ತು ನಿವೇಶನಗಳಿಗೆ ಆಧಾರ್ ಲಿಂಕ್ ಮಾಡುವ ಯೋಜನೆಗೆ) – ಆಧಾರ್ ಲಿಂಕ್
  2. ಪ್ರೂಟ್ಸ್  (ಜಮೀನಿನ ಪಹಣೆಗಳಿಗೆ ಆಧಾರ್ ಲಿಂಕ್ ಯೋಜನೆ) ¬- ಆಧಾರ್ ಲಿಂಕ್
  3. ರೇಷನ್ ಕಾರ್ಡ್ – ಆಧಾರ್ ಲಿಂಕ್
  4. ಬ್ಯಾಂಕ್ ಅಕೌಂಟ್ಸ್ – ಆಧಾರ್ ಲಿಂಕ್
  5. ಮೂರು ತಲೆಮಾರಿನ ವಂಶವೃಕ್ಷಕ್ಕೆ ¬- ಆಧಾರ್ ಲಿಂಕ್
  6. ಗೃಹ/ಕೃಷಿ ವಿದ್ಯುತ್ ಮೀಟರ್ – ಆಧಾರ್ ಲಿಂಕ್
  7. ಯಾವುದೇ ಉದ್ಯೋಗವಿರಲಿ ¬- ಆಧಾರ್ ಲಿಂಕ್
  8. ವೋಟರ್ ಲಿಸ್ಟ್ – ಆಧಾರ್ ಲಿಂಕ್
  9. ಆಯುಷ್ಮಾನ್ ಕಾರ್ಡ್ – ಆಧಾರ್ ಲಿಂಕ್
  10. ಎಲ್ಲಾ ರೀತಿಯ ವಾಹನಗಳ ನೊಂದಣಿಗೆ – ಆಧಾರ್ ಲಿಂಕ್
  11. ನರೇಗಾ ಜಾಬ್ ಕಾರ್ಡ್‍ಗೆ – ಆಧಾರ್ ಲಿಂಕ್
  12. ಮೊಬೈಲ್ ಪೋನ್ – ಆಧಾರ್ ಲಿಂಕ್
  13. ಶಾಲಾ ದಾಖಾಲಾತಿಗಳಿಗೆ – ಆಧಾರ್ ಲಿಂಕ್
  14. ಜನನ-ಮರಣ ಪತ್ರಗಳಿಗೆ – ಆಧಾರ್ ಲಿಂಕ್
  15. ಸರ್ಕಾರದ ಎಲ್ಲಾ ಉಚಿತ ಸೇವೆಗಳಿಗೆ – ಆಧಾರ್ ಲಿಂಕ್
  16. ಮನೆ ಬಾಡಿಗೆ ಕರಾರು ಪತ್ರಗಳಿಗೆ – ಆಧಾರ್ ಲಿಂಕ್
  17. ಇಂಟರ್ ನೆಟ್ ಸಂಪರ್ಕ ಪಡೆಯುವವರಿಗೆ – ಆಧಾರ್ ಲಿಂಕ್
  18. ಪ್ಯಾನ್ ಕಾರ್ಡ್ – ಆಧಾರ್ ಲಿಂಕ್
  19. ಯಾವುದೇ ವಸ್ತು ಕೊಂಡರು ರಸೀದಿಗಳಿಗೆ – ಆಧಾರ್ ಲಿಂಕ್
  20. ಎಲ್ಲಾ ವಿಧವಾದ ಪ್ರಯಾಣದ ಟಿಕೆಟ್ ಗಳಿಗೂ – ಆಧಾರ್ ಲಿಂಕ್

ಸರ್ಕಾರಗಳ ಉಚಿತ ಯೋಜನೆಗಳನ್ನು ಪಡೆಯುವವರು ಕಡ್ಡಾಯವಾಗಿ, ಅವರ ಜಮೀನಿನಲ್ಲಿ ಅಥವಾ ಸರ್ಕಾರದ ಜಮೀನಿನಲ್ಲಿ ಇಂತಿಷ್ಟು ಗಿಡ ಹಾಕಲೇ ಬೇಕು ಎಂಬ ನಿಯಮ ರೂಪಿಸುವುದು ಸೂಕ್ತವಾಗಿದೆ.

About The Author