21st November 2024
Share

TUMKURU: SHAKTHIPEETA FOUNDATION

ಚುನಾವಣಾ ಪ್ರಣಾಳಿಕೆಯ ಕಾಂಗ್ರೆಸ್ ಕರೆಂಟ್ ಗ್ಯಾರಂಟಿ ಇನ್ನೂ ಮುಂದೆ ಸರ್ಕಾರದ ಅಧಿಕೃತ ಯೋಜನೆಯಾಗಲೇ ಬೇಕು. ಯಾವುದೇ ಕಾರಣಕ್ಕೂ ಸರ್ಕಾರ ದಿವಾಳಿಯಾಗ ಬಾರದು. ಅಂತಹ ದಿಟ್ಟ ನಿರ್ಧಾರ ಕೈಗೊಳ್ಳುವ ಚಾಣಕ್ಯ ಸಚಿವರನ್ನು ನೇಮಿಸುವುದು, ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯಮನವರಿಗೆ ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಒಂದು ಸವಾಲು.

ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸದೇ ಇರುವುದರಿಂದ, ರೈತರ ಹೆಸರಿನಲ್ಲಿ ಬೇರೆ ಯವರು  ವಿದ್ಯುತ್ ಕಳುವು ಮಾಡುತ್ತಿದ್ದು, ರೈತರ ಪಂಪ್ ಸೆಟ್ ವಿದ್ಯುತ್ ಎಂದು ಲೆಕ್ಕ ತೋರಿಸುವುದನ್ನು  ಯಾವುದೇ ಮುಲಾಜಿಲ್ಲದೆ ಪತ್ತೆ ಹಚ್ಚಿದರೆ, ಈ ಗ್ಯಾರಂಟಿ ಯೋಜನೆ ಶೇ 100 ಯಾವುದೇ ಹೆಚ್ಚುವರಿ ಹೊರೆಯಾಗದೆ ಬಗೆಹರಿಯಲಿದೆ.

ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಿ, ಅವರಿಗೂ ಉಚಿತ ಕರೆಂಟ್ ಎಂದು ಸರ್ಕಾರ ಗ್ಯಾರಂಟಿ ನೀಡಿ, ರೈತರ ಮನವೊಲಿಸುವುದು ಒಂದು ಸಾಹಸವಾದರೂ ಸರ್ವಪಕ್ಷಗಳು ಸರ್ಕಾರಕ್ಕೆ ಬೆಂಬಲ ನೀಡುವುದು ರಾಜ್ಯದ ಹಿತದೃಷ್ಠಿಯಿಂದ ಒಳ್ಳೆಯದು.

ಎಲ್ಲರಿಗೂ ಸೂರು ಯೋಜನೆಯಡಿ, ಮನೆಗಳಿಗೆ ಕಡ್ಡಾಯವಾಗಿ ಸೋಲಾರ್ ಪ್ಯಾನಲ್ ಅಳವಡಿಸಲು ಹೆಚ್ಚುವರಿ ಅನುದಾನ ನೀಡುವ ಮೂಲಕ ಸ್ವಲ್ಪ ಭಾಗ ಸರದೂಗಿಸ ಬಹುದಾಗಿದು. ಈ ಹೆಚ್ಚುವರಿ ಅನುದಾನವನ್ನು ಬಡವರ ಮನೆ ನಿರ್ಮಾಣ ಮಾಡುವ ಮಾನವ ಕೂಲಿ ದಿನಗಳ ಮುಖಾಂತರ ನರೇಗಾ ಯೋಜನೆಯಡಿಯಲ್ಲಿ ಸ್ವಲ್ಪ ಹಣವನ್ನು ಸರಿದೂಗಿಸ ಬಹುದು.  

ಸೋಲಾರ್ ಪ್ಯಾನಲ್ ಸಹಾಯಧನದ ಜೊತೆಗೆ, ಅಗತ್ಯವಿರುವ ಹೆಚ್ಚುವರಿ ಹಣವನ್ನು ಸರ್ಕಾರ ಬ್ಯಾಂಕ್‍ನಲ್ಲಿ ಸಾಲ ಕೊಡಿಸಿ, ಬಡ್ಡಿ ರಹಿತವಾಗಿ ಸರ್ಕಾರವೇ ಬ್ಯಾಂಕ್ ಸಾಲ ತೀರಿಸಲು ಚಿಂತನೆ ನಡೆಸ ಬಹುದಾಗಿದೆ.

ಬಿಟ್ಟಿ ಕರಂಟ್ ಎಂದು ಅನಗತ್ಯವಾಗಿ ಬಳಸದೆ, ಉಚಿತವಾಗಿ ನೀಡುವ 200 ಯೂನಿಟ್ ಗಳ ಮಿತಿಯಲ್ಲಿಯೇ ಬಳಸುವ ಮೂಲಕ ವಿದ್ಯುತ್ ಉಳಿಸಲು ಬಳಕೆದಾರರು ಮುಂದಾಗುವುದರಿಂದ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವೇ ಸರಿ.

ರೈತರ ಪಂಪ್ ಸೆಟ್ ಗಳ ಮೂಲಕ ಕಡ್ಡಾಯವಾಗಿ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಯೋಜನೆ ಅಳವಡಿಸುವುದರಿಂದ ವಿದ್ಯುತ್ ಉಳಿಸಬಹುದು.

ಇಂಧನ ಇಲಾಖೆಯ ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವುದು.

ಉಚಿತ ವಿದ್ಯುತ್ ಅನ್ನು ಕಡಿಮೆ ಯುನಿಟ್ ಬಳಸುವವರಿಗೆ ಸಹಾಯಧನ ನೀಡಲು ಯೋಜನೆ ರೂಪಿಸುವುದು.

ಲಾಡ್ಜ್‍ಗಳಲ್ಲಿ  ಬೀಗ ಹಾಕಿದರೆ ಕರೆಂಟ್ ಕಟ್ ಆಗುವ ರೀತಿ ಎಲ್ಲರ ಮನೆಗಳಿಗೂ ಉಚಿತ ಬೀಗಗಳ ವ್ಯವಸ್ಥೆ ಮಾಡುವುದರಿಂದ ಅನಗತ್ಯ ವಿದ್ಯುತ್ ಉಳಿಸಬಹುದು.

ವಿಧ್ಯುತ್  ಕಳುವುದಾರರಿಗೆ ಹೆಚ್ಚುವರಿ ದಂಡ ವಿಧಿಸುವುದು.

ಹಾಗೆ ಸುಮ್ಮನೆ !

ಮಿಕ್ಸಿಗಳನ್ನು ಬ್ಯಾನ್ ಮಾಡಿ – ಎಲ್ಲರೂ ಒನಕೆ ಮತ್ತು ಗುಂಡು ಕಲ್ಲು ಬಳಸಿದರೆ ಯೋಗ ಮಾಡಿದಂತಾಗಲಿದೆ ಎಂದು ವಿದ್ಯುತ್ ಉಳಿಸಲು ಷರತ್ತು ಹಾಕುವುದು.

ಟಿವಿಗಳನ್ನು ದಿನದ 24 ಗಂಟೆ ಬಳಸಿದರೆ ಕಣ್ಣಿಗೆ ಅಪಾಯಕಾರಿ ಎಂದು, ನಿರ್ಧಿಷ್ಟ ಸಮಯದಲ್ಲಿ ಮಾತ್ರ ಪ್ರಸಾರ ಮಾಡಲು ನಿಯಮ ರೂಪಿಸಿ ವಿದ್ಯುತ್ ಉಳಿಸ ಬಹುದು.

ತಣ್ಣೀರನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು, ಗೃಹ ಬಳಕೆಗೆ ವಿದ್ಯುತ್ ಬಾಯ್ಲರ್ ಬ್ಯಾನ್ ಮಾಡುವ ಮೂಲಕ ವಿದ್ಯುತ್ ಉಳಿಸ ಬಹುದು.

ಫ್ಯಾನ್ ಗಾಳಿ ಮತ್ತು ಎಸಿ ಗಾಳಿ ಆರೋಗ್ಯಕ್ಕೆ ಹಾನಿ ಎಂದು, ಗತಕಾಲದ  ಬೀಸಣೆಗೆ ಉಪಯೋಗಿಸುವುದರಿಂದ ಯೋಗ ಮಾಡಿದಂತಾಗುತ್ತದೆ ಎನ್ನುವ ಮೂಲಕ ವಿದ್ಯುತ್ ಉಳಿಸ ಬಹುದು.