TUMAKURU:SHAKTHIPEETA FOUNDATION
ದಿನಾಂಕ:26.05.2023 ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಪ್ಪ ನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಳಕಂಡ ವಿವಿಧ ಉಪಸಮಿತಿಗಳನ್ನು ರಚಿಸಿ, ಅವರವರ ಪರಿಕಲ್ಪನೆಗಳನ್ನು ಮಂಡಿಸಲು ದಿನಾಂಕ:11.06.2023 ನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಹತ್ವದ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.
- ಕಲಾಗ್ರಾಮ ಮಾಸ್ಟರ್ ಪ್ಲಾನ್ ಉಪ ಸಮಿತಿ- ಶ್ರೀ ಕೆ.ಜೈ ಪ್ರಕಾಶ್ ರವರು.
- ಊರಿಗೊಂದು ಪುಸ್ತಕ ಉಪ ಸಮಿತಿ- ಶ್ರೀ ಕವಿತಾ ಕೃಷ್ಣ ರವರು
- ಊರಿಗೊಂದು ಪುಸ್ತಕ ಟೆಂಪ್ಲೇಟ್ ಉಪ ಸಮಿತಿ- ಶ್ರೀ ಆರ್ಕಾ ರಘುರವರು.
- ಕಲಾಗ್ರಾಮ ಅನುದಾನ ಅಧ್ಯಯನ ಉಪ ಸಮಿತಿ- ಶ್ರೀ ಟಿ.ಆರ್.ರಘೋತ್ತಮ ರಾವ್ ರವರು. ಶ್ರೀ ಮುರಳೀಧರ್ ನಾಯಕ್ ರವರು.
- ತುಮಕೂರು ಜಿಲ್ಲೆಯಲ್ಲಿರುವ ಶಾಸನಗಳÀ ಉಪ ಸಮಿತಿ- ಶ್ರೀ ಯೋಗೀಶ್ ರವರು.
- ಕಲಾಗ್ರಾಮ ಭೂಮಿ ಮಂಜೂರಾತಿ ಉಪ ಸಮಿತಿ- ನಿವೃತ್ತ ಎಸಿ ಅಥವಾ ತಹಶೀಲ್ಧಾರ್ ರವರ ತಂಡವನ್ನು ಗುರುತಿಸುವುದು.
- ಬಡಾವಣೆಗೊಂದು ಉಧ್ಯಾನವ£ ಬಯಲು ಗ್ರಂಥಾಲಯ ಉಪ ಸಮಿತಿ- ಶ್ರೀ ವಿಷ್ಣುರವರು.
- ಕಲಾ ಗ್ರಾಮ ಅರ್ಕಿಟೆಕ್ಟ್ ಉಪ ಸಮಿತಿ- ಶ್ರೀ ಪಾಟೀಲ್ ರವರು
- ತುಮಕೂರು ನಗರದ ಉಧ್ಯಾನ ವನಕ್ಕೊಂದು ಅರಳೀ ಮರ ಉಪ ಸಮಿತಿ- ಶ್ರೀ ಶಿವಪ್ರಸಾದ್ ರವರು
- ತುಮಕೂರು ಜಿಲ್ಲೆಯ ವಿವಿಧ ಥೀಮ್ ಪಾರ್ಕ್ ಉಪ ಸಮಿತಿ- ಶ್ರೀ ವೇದಾನಂದಾ ಮೂರ್ತಿರವರು, ಶ್ರೀ ರಾಮಮೂರ್ತಿರವರು ಮತ್ತು ಶ್ರೀ ಸತ್ಯಾನಂದ್ ರವರು. ಶ್ರೀ ಪ್ರಮೋದ್ ರವರು.
- ಕಲಾಗ್ರಾಮ ವಕೀಲರ ಉಪ ಸಮಿತಿ- ಶ್ರೀ ಮಹೇಂದ್ರ ರವರು
- ಊರಿಗೊಂದು ಪುಸ್ತಕ ಡಾಟಾ ಮಿತ್ರರ ಉಪಸಮಿತಿ- ಶ್ರೀ ಗುರು ರವರು. ಶ್ರೀ ಜಯಂತ್ ರವರು.
- ವಿಧಾನಸಭಾ ಸದಸ್ಯರ ರ್ಯಾಂಕಿಂಗ್ ಟೆಂಪ್ಲೇಟ್ ಉಪ ಸಮಿತಿ- ಮುಂಜಾನೆ ಬಳಗ ತಂಡದವರು.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸೇರಿದಂತೆ ಚಿತ್ರದಲ್ಲಿ ಇರುªರೆಲ್ಲರೂ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು. ವಿವಿಧ ಉಪಸಮಿತಿಗಳಿಗೆ ಕನಿಷ್ಠ 9 ಜನ ಸದಸ್ಯರನ್ನು ನೇಮಿಸಿ ಕೊಳ್ಳುವುದು ಹಾಗೂ ಅಗತ್ಯವಿರುವ ವಿವಿಧ ಉಪಸಮಿತಿ ರಚಿಸಿ, ವರದಿ ಪಡೆಯಲು ನಿರ್ಣಯ ಕೈಗೊಳ್ಳಲಾಯಿತು.
ಉಪಸಮಿತಿಯ ಎಲ್ಲಾ ಸದಸ್ಯರಿಗೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಚಿಂತನೆ ನಡೆಸಲಾಯಿತು.
ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ @ 100 ಸ್ವಾತ್ರಂತ್ರ್ಯ ಸೇನೆ ಸಿದ್ಧಪಡಿಸುತ್ತಿರುವ ತುಮಕೂರು ವಿಷನ್ ಡಾಕ್ಯುಮೆಂಟ್ – 2047 ಗೆ ಪೂರಕವಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿರುವ ಆಸಕ್ತ ವಿವಿಧ ವರ್ಗದ ಸಂಘಸಂಸ್ಥೆಗಳ ಸಹಭಾಗಿತ್ವ ಪಡೆಯಲು ನಿರ್ಣಯ ಕೈಗೊಳ್ಳಲಾಯಿತು.