TUMAKURU:SHAKTHIPEETA FOUNDATION
ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯುವ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡುವುದಾಗಿ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳೆರವರು ದೆಹಲಿಯಲ್ಲಿ ತಿಳಿಸಿದ್ದಾರೆ.
ಸುಮಾರು ವರ್ಷಗಳಿಂದ ಈ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಲಾಗಿತ್ತು. ಈಗಿನ ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ನಾನು ದೆಹಲಿಯಲ್ಲಿ ಅವರೊಂದಿಗೆ ಚರ್ಚೆ ಮಾಡುವಾಗ ಸಹಕಾರಿಗಳ ಮಕ್ಕಳಿಗೆ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಹಾಸ್ಟೆಲ್ ತೆರೆಯಬಹುದಿತ್ತು ಎಂಬ ಸಲಹೆಗೆ ಅವರು ತಕ್ಷಣ ಹೇಳಿದ ಮಾತು, ನಾನು ಅಧಿಕಾರದಲ್ಲಿದ್ದಾಗ ಯಾರೊಬ್ಬರು ಈ ಮಾತು ಹೇಳಲಿಲ್ಲ.
ಅಪೆಕ್ಸ್ ಬ್ಯಾಂಕ್ ನಲ್ಲಿ ಯಾವುದೋ ಒಂದು ವಿವಾದದ ಆಸ್ತಿ ಇತ್ತು. ನಾನು ಖಂಡಿತಾ ಮಾಡುತ್ತಿದ್ದೆ. ಇದಕ್ಕಿಂತ ಒಳ್ಳೆಯ ಕೆಲಸ ಇನ್ನೂ ಏನಿದೆ ಎಂದಿದ್ದರು. ಮತ್ತೆ ಅಫೆಕ್ಸ್ ಬ್ಯಾಂಕ್ ನಲ್ಲಿ ಅಧಿಕಾರಕ್ಕೆ ಬಂದರೆ ಮಾಡುತ್ತೇನೆ ಎಂಬ ಖಚಿತ ಭರವಸೆ ನೀಡಿದ್ದರು. ಈಗ ಸಹಕಾರಿ ಸಚಿವರೇ ಆಗಿದ್ದಾರೆ.
ಶ್ರೀ ಮುರಳೀಧರ್ ನಾಯಕ್ ರವರು ಜೊತೆಯಲ್ಲಿ ಇದ್ದರು, ರಾಜ್ಯದ ಪ್ರತಿಯೊಂದು ಗ್ರಾಮದವರು ಒಂದಲ್ಲ ಒಂದು ಸಹಕಾರಿ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದಿರುತ್ತಾರೆ. ಅವರ ಮಕ್ಕಳಿಗೆ ಈ ಯೋಜನೆ ವರದಾನವಾಗಲಿದೆ. ಪ್ರತಿ ಹಳ್ಳಿ ತಲುಪುವ ಯೋಜನೆಯಾಗಲಿದೆ. ಸಹಕಾರ ಸಚಿವರಾದ ನಂತರ ಈ ವಿಷಯವನ್ನು ಅವರ ಬಳಿ ಚರ್ಚೆ ಮಾಡಿಲ್ಲ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಮುರಳೀಧರ್ ನಾಯಕ್ ರವರು ಮತ್ತು ನಾನು ದೆಹಲಿಯಲ್ಲಿ ಇರುವ ಕರ್ನಾಟಕ ಸರ್ಕಾರದ ಆಸ್ತಿಗಳ ಸ್ಥಳ ವೀಕ್ಷಣೆ ಮಾಡಿದೆವು. ಎಲ್ಲಿಯೂ ಕಟ್ಟಡ ಮಾಡುವಷ್ಟು ನಿವೇಶನ ಇಲ್ಲ.
ಕೆ.ಆರ್ ಫುರಂನಲ್ಲಿ ಹಳೇ ಕಟ್ಟಡಗಳನ್ನು ಈಗ ನವೀಕರಿಸಿದ್ದಾರೆ, ಒಡೆಯುವ ಅವಕಾಶ ಕಡಿಮೆ ಧ್ವಾರಕದಲ್ಲಿರುವ ಮನೆಗಳು ಹಳೆಯವಾದರೂ ಒಂದು ಕಡೆ ಇಲ್ಲ. ಅಲ್ಲಲ್ಲಿ ಹಂಚಿಹೋಗಿವೆ, ಇಲ್ಲಿಯೂ ಕಷ್ಟವಾಗಬಹುದು. ದೆಹಲಿ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಂಡು ಹಾಸ್ಟೆಲ್ ನಿರ್ಮಾಣ ಮಾಡಬೇಕಾಗಬಹುದು.
ಶ್ರೀ ಸತೀಶ್ ಜಾರಕಿಹೊಳೆಯವರು ದೆಹಲಿಗೆ ಬಂದಾಗ ದಿನಾಂಕ:26.07.2023 ರಂದು ಅವರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು, ಈ ಬಗ್ಗೆ ಮನವಿ ನೀಡಲು ಹೋದಾಗ, ನಾನು ಸಹ ಈಗಾಗಲೇ ಕಾರ್ಯಪ್ರವೃತ್ತ ನಾಗಿದ್ದೇನೆ. ಜಾಗ ಎಲ್ಲಿದೆ ಎಂದು ಹುಡುಕುತ್ತಿದ್ದೇನೆ ಎಂದಿದ್ದಾರೆ.
ನಾವು ಮೊದಲೇ ದೆಹಲಿಯಲ್ಲಿ ಇರುವ, ಕರ್ನಾಟಕ ಸರ್ಕಾರದ ಕಟ್ಟಡಗಳ ಸ್ಥಳ ವೀಕ್ಷಣೆ ಮಾಡಿದ್ದರಿಂದ ನಮ್ಮ ಸರ್ಕಾರದ ಜಾಗದಲ್ಲಿ ಕಷ್ಟವಾಗಬಹುದು. ದೆಹಲಿ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಕೊಳ್ಳಬೇಕಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಜಮೀನು ಮಂಜೂರು ಮಾಡಲು ಮನವಿ ಸಲ್ಲಿಸಲು ಮನವಿ ಮಾಡಲಾಗಿದೆ.
ದೆಹಲಿಯಲ್ಲಿಯೇ ಇದ್ದ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಶ್ರೀ ಸೆಲ್ವಕುಮಾರ್ ರವರೊಂದಿಗೂ ಸಮಾಲೋಚನೆ ಮಾಡಲಾಗಿದೆ. ದೆಹಲಿಯಲ್ಲಿ ನಗರಾಭಿವೃದ್ಧಿ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ, ನಮ್ಮ ಕರ್ನಾಟಕ ರಾಜ್ಯದವರಿಗೆ ಜಮೀನು ಹುಡುಕಲು ಸಮಾಲೋಚನೆ ನಡೆಸಲಾಗಿದೆ.
ಕೇಂದ್ರ ಸರ್ಕಾರದಿಂದ ಬಿಜೆಪಿಯ ಕೇಂದ್ರ ಸಚಿವರು ಮತ್ತು ಸಂಸದರು ಜಮೀನು ಮಂಜೂರು ಮಾಡಿಸಲು ಶ್ರಮಿಸಬೇಕಿದೆ. ಈ ಹೊಣೆಗಾರಿಕೆಯನ್ನು ಶ್ರೀ ಜಿ.ಎಸ್.ಬಸವರಾಜ್ ರವರು ಹೊತ್ತಿದ್ದಾರೆ.
‘ನಂಬರ್ ಒನ್ ಕರ್ನಾಟಕ’ದ ಸಲಹೆಯಲ್ಲಿ ಇದೂ ಒಂದು ಅಂಶವಾಗಿರುವ ಹಿನ್ನಲೆಯಲ್ಲಿ ಕಡತದ ಅನುಸರಣೆ ಮಾಡುವ ಇಚ್ಚೆ ನನ್ನದಾಗಿದೆ.