31st October 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇದ್ರಮೋದಿಯವರ ಗಮನಕ್ಕೆ ಹೋಗಿದೆಯೋ ಅಥವಾ ಗೊತ್ತಿಲ್ಲವೋ, ಪ್ರತಿಯೊಬ್ಬ ಲೋಕಸಭಾ ಸದಸ್ಯರ ವ್ಯಾಪ್ತಿಗೆ ಒಂದು ದಿಶಾ ಸಮಿತಿ ರಚಿಸಿ ಬೇಕು ಎಂಬ ಒತ್ತಾಯ ಇದ್ದರೂ ಇದೂವರೆಗೂ ಆ ಕಡೆ ಗಮನ ಹರಿಸಿಲ್ಲ.

ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಾದ ಶಿರಾ ಮತ್ತು ಪಾವಗಡ ಚಿತ್ರದುರ್ಗ ಜಿಲ್ಲೆಗೆ ಸೇರಿವೆ ಎಂದು, ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಶ್ರೀ ಎ.ನಾಯಾರಣಸ್ವಾಮಿರವರು ಕೇಂದ್ರದಲ್ಲಿ ಸಚಿವರು ಆಗಿದ್ದಾರೆ ಎಂದು, ತುಮಕೂರು ಜಿಲ್ಲೆಗೂ ಮತ್ತು ಚಿತ್ರದುರ್ಗ ಜಿಲ್ಲೆಗೂ ಅವರನ್ನೇ, ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

ಕೇಂದ್ರ ಸರ್ಕಾರದಲ್ಲಿಯೇ ಒಬ್ಬ ಸಂಸದರು ಒಂದು ಜಿಲ್ಲೆಗೆ ಮಾತ್ರ ಅಧ್ಯಕ್ಷರಾಗಿರಬೇಕು  ಎಂಬ ಬಗ್ಗೆ ತಿದ್ದುಪಡಿ ಮಾರ್ಗದರ್ಶಿ ಸೂತ್ರ ರಚಿಸಿದ್ದಾರೆ. ಈ ಎರಡರ ಬಗ್ಗೆ ಪತ್ರ ವ್ಯವಹಾರ ಮಾಡಿದ್ದರೂ, ಇದೂವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರತ್ಯೇಕವಾಗಿ ಒಂದೊಂದೇ ಇಲಾಖೆಯ ಯೋಜನೆಗಳ ಬಗ್ಗೆ ಸಭೆ ನಡೆಸುವ ಉಪಾಯ ಕಂಡುಕೊಂಡಿದ್ದಾರೆ. ರೈಲ್ವೇ ಇಲಾಖೆಗೆ ಪತ್ರ ಬರೆದು, ತುಮಕೂರು ಜಿಲ್ಲೆಯ ಎಲ್ಲಾ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲು ಸೂಚಿಸಿದ್ದರು.

ಈ ಹಿನ್ನಲೆಯಲ್ಲಿ ದಿನಾಂಕ:23.11.2023 ರಂದು ತುಮಕೂರಿಗೆ ನೈರುತ್ಯ ರೈಲ್ವೆವಲಯ ಬೆಂಗಳೂರು ವಿಭಾಗದ ವಿಭಾಗೀಯ ಮ್ಯಾನೇಜರ್ ರವರು ಮತ್ತು ಇತರೆ ರೈಲ್ವೇ ಅಧಿಕಾರಿಗಳು ಬಂದು ಸಮಾಲೋಚನೆ ನಡೆಸಿದರು.

ತುಮಕೂರು ಜಿಲ್ಲೆಯ ಕೆಳಕಂಡ ರೈಲ್ವೆ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ

  1. ತುಮಕೂರು ರೈಲ್ವೆ ನಿಲ್ದಾಣ ಅಮೃತ್ ಭಾರತ್ ರೈಲ್ವೇ ನಿಲ್ದಾಣ ಅಭಿವೃಧ್ಧಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ. 
  2. ತುಮಕೂರು ರೈಲ್ವೆ ನಿಲ್ದಾಣ್‍ದಲ್ಲಿ ಪ್ಲಾಟ್ ¥sóÁರ್‍ಂ ಪೂರ್ಣವಾಗಿ ನೆರಳಿನ ಸೌಕರ್ಯವಾಗಿ ಮೇಲ್ಚಾವಣಿ ಅಳವಡಿಸುವುದು.
  3. 4ನೇ ಪ್ಲಾಟ¥sóÁರಂಗೂ ಲಿ¥sóï್ಟ ಸೌಲಭ್ಯ
  4. ¥sóÁ್ಲಟ¥sóÁರಂ 1 ಎ  ನ್ನು 16 ಸಂಖ್ಯೆ ರೇಕ್ಸ್ ರೈಲ್ ನಿಲ್ಲಿಸಲು ಅನುಕೂಲವಾಗುವಂತೆ  ವಿಸ್ತರಿಸುವುದು.
  5. ರೈಲ್ವೇ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ,
  6. ರೈಲ್ವೆ ನಿಲ್ದಾಣದಲ್ಲಿ ಡಿಜಿಟಲ್ ರಿಯಲ್ ಟೈಮ್ ರೈಲು ಆಗಮನ, ನಿರ್ಗಮನ ಮಾಹಿತಿ  ¥sóÀಲಕ,
  7. ಅಮೃತ್ ಭಾರತ್ ಯೋಜನೆ ಅಡಿ ಗುರುತಿಸಿರುವ ಸೌಕರ್ಯ. 
  8. ತಿಮ್ಮರಾಜನಹಳ್ಳಿ ಬಳಿ ರೈವ್ಲೆ ಟರ್ಮಿನಲ್ ಸ್ಥಾಪನೆ ಬಗ್ಗೆ.
  9. ಗತಿ ಶಕ್ತಿ ಗೂಡ್ಸ್ ಟರ್ಮಿನಲ್ ಅನ್ನು ವಸಂತನರಸಾಪುರ ಬಳಿ ಸ್ಥಾಪನೆ ಮಾಡುವ ಬಗ್ಗೆ.
  10. ಮಲ್ಲಸಂದ್ರ ರೈಲ್ವೆ ನಿಲ್ದಾಣದಲ್ಲಿ 4 ರಿಂದ 5 ಹೆಚ್ಚುವರಿ ರೈಲ್ವೆ ಹಳಿ ಹಾಕಿ, ತುಮಕೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ರೈಲುಗಳನ್ನು ನಿಲ್ಲಿಸಲು ಜಾಗದ ಕೊರತೆ ಇರುವುದನ್ನು ನೀಗಿಸಿಕೊಳ್ಳಲು ಕ್ರಮವಹಿಸುವುದು.
  11. ತುಮಕೂರು ನಗರದ ಬಟವಾಡಿ ಆರ್ ಒ ಬಿ,
  12. ಮಲ್ಲಸಂದ್ರ ಆರ್ ಒಬಿ,
  13. ನಿಟ್ಟೂರು ಬಳಿ ಆರ್ ಒ ಬಿ 
  14. ಗುಬ್ಬಿ ನಿಲ್ದಾಣದ ಬಳಿ ಆರ್ ಒ ಬಿ
  15. ಭೀಮಸಂದ್ರ ಕೆಳಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣ. 
  16. ಸಿದ್ದಗಂಗಾಮಠಕ್ಕೆ ಹೋಗುವ ರಸ್ತೆಯಲ್ಲಿ ಕ್ಯಾತಸಂದ್ರ ಬಳಿ ಆರ್ ಒ ಬಿ ಮತ್ತು ಆರ್ ಯು ಬಿ ಬಗ್ಗೆ ಬಾಕಿ ಇರುವ ಕೆಲಸ
  17. ತುಮಕೂರು-ರಾಯದುರ್ಗ ರೈಲ್ವೆ ಹಳಿ ಯೋಜನೆ.
  18. ತುಮಕೂರು –ದಾವಣಗೆರೆ ರೈಲ್ವೆ ಹಳಿ ಯೋಜನೆ. 
  19. ತುಮಕೂರು-ಬೆಂಗಳೂರು ನಡುವೆ ಹೆಚ್ಚಿನ ಉಪನಗರ ರೈಲು ಮಾದರಿಯಲ್ಲಿ ರೈಲು ಸೇವೆ 
  20. ತುಮಕೂರು-ಅರಸೀಕೆರೆ ನಡುವಿನ ನಿಲ್ದಾಣಗಳಾದ ನಿಟ್ಟೂರು,ಅಮ್ಮಸಂದ್ರ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲ್ಲಲು  ಮತ್ತು ಅರಳಗುಪ್ಪೆ ನಿಲ್ದಾಣದಲ್ಲಿ ಚಿಕ್ಕಮಗಳೂರು ರೈಲ್ ನಿಲ್ಲಲು ಕ್ರಮವಹಿಸಲು ಈಗಾಗಲೇ ಹಲವಾರು ಪತ್ರಗಳನ್ನು ಬರೆಯಲಾಗಿದೆ ಎಂದು ಗಮನಕ್ಕೆ ತರಲಾಗಿದೆ ಹಿನ್ನಲೆಯಲ್ಲಿ ಈ ಸಂಬಂಧ ಬೆಂಗಳೂರು ವಿಭಾಗ ಮತ್ತು ಮೈಸೂರು ವಿಭಾಗ ವಲಯಕಚೇರಿ ಮುಖಾಂತರ ರೈಲ್ವೆ ಮಂಡಳಿಗೆ ಪತ್ರ ಪ್ರಸ್ಥಾವನೆಸಲ್ಲಿಸಿದೆ ಎಂಬ ಮಾಹಿತಿ ಪಡೆಯಲಾಯಿತು.
  21. ಬೆಂಗಳೂರು ಸುತ್ತ ರೈಲ್ವೇ ಹೊಸ ಮಾರ್ಗ.

ಪ್ರತಿಯೊಂದು ಯೋಜನೆಗಳ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿ, ಚಳಿಗಾಲದ ಅಧಿವೇಶನದಲ್ಲಿ ದೆಹಲಿಯಲ್ಲಿ, ರೈಲ್ವೇ ಬೋರ್ಡ್ ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸಲಾಗುವುದು. ಈ ಬಗ್ಗೆ ದೆಹಲಿಯಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳ ವರದಿ ನೀಡಲು ಸೂಚಿಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್ ಇದ್ದರು.