16th January 2026
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 2734 ಗ್ರಾಮಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಬಡಾವಣೆಗಳ ವ್ಯಾಪ್ತಿಯಲ್ಲಿ ಇರುವ ರಾಷ್ಟ್ರೀಕೃತ ಬ್ಯಾಂಕ್‍ಗಳು, ಬ್ಯಾಂಕ್‍ವಾರು ಏರಿಯಾ ನಿಗದಿ ಅಥವಾ ಇತರೆ ಇರುವ ವ್ಯವಸ್ಥೆಗಳು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಬ್ಯಾಂಕ್ ಮೂಲಕ ಜಾರಿಗೊಳಿಸುವ ಎಲ್ಲಾ ಯೋಜನೆಗಳ/ಘೋಷಣೆಗಳ ಮಾಹಿತಿಯನ್ನು ಗ್ರಾಮವಾರು/ಬಡಾವಣೆವಾರು ಪಟ್ಟಿ ಮಾಡಲು, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಕಳೆದ 4 ವರ್ಷಗಳಿಂದಲೂ ಒತ್ತಾಯಿಸುತ್ತಾ ಬಂದಿದ್ದೇವೆ. ಇದನ್ನೇ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಪದೇ, ಪದೇ ಹೇಳುತ್ತಾರೆ.

ದಿನಾಂಕ:24.11.2023 ರಂದು ನಡೆದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ, ಈ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಪ್ರಕಾಶ್ ರವರನ್ನು ಕೇಳಿದಾಗ, ಅವರ ಉತ್ತರ ಸಾರ್ ಎಲ್ಲಾ ಮಾಹಿತಿಯನ್ನು ತಾವು ಕೇಳುವ ಮಾದರಿಯಲ್ಲಿ ನೀಡುತ್ತೇನೆ ಎಂಬ ಭರವಸೆ ನೀಡಿದ್ದಾರೆ.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಆರಂಭವಾಗಿರುವ ತುಮಕೂರು ರೀಸರ್ಚ್ ಫೌಂಡೇಷನ್-2047, ಬಗ್ಗೆ ಜ್ಞಾನವಿರುವವರ ಒಂದು ಅಧ್ಯಯನ ಸಮಿತಿ ರಚಿಸಲು ಸಲಹೆ ನೀಡಲಾಗಿದೆ. ಆದ್ದರಿಂದ ಆಸಕ್ತಿ ಇರುವವರು ಸಂಪರ್ಕಿಸಲು ಕೋರಿದೆ.

ಜಿ..ಎಸ್ ತಜ್ಞರು ಎಲ್ಲಾ ಯೋಜನೆಗಳ ಮಾಹಿತಿಯನ್ನು ಜಿ..ಎಸ್ ಲೇಯರ್ ಮೂಲಕ ವಿಶ್ಲೇಷಣೆ ಮಾಡಲು ಆಸಕ್ತಿ ಇರುವವರು, ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಲು ಮನವಿ ಮಾಡಿದೆ.