12th April 2024
Share

TUMAKURU:SHAKTHIPEETA FOUNDATION

 ಮಾಜಿ ರಾಷ್ಟ್ರಪತಿಯವರಾದ ಶ್ರೀ ರಾಮನಾಥ್ ಕೋವಿಂದ್ ರವರ ನೇತೃತ್ವದ ‘ಒಂದು ರಾಷ್ಟ್ರ – ಒಂದು ಚುನಾವಣೆ’ ಉನ್ನತ ಮಟ್ಟದ ಸಮಿತಿ, ಕೇವಲ 191 ದಿನಗಳಲ್ಲಿ 18000 ಪುಟಗಳು ಅಂದರೆ, ಸರಾಸರಿ ಪ್ರತಿ ದಿನ 94 ಪುಟಗಳ ವರದಿ ಸಿದ್ಧಪಡಿಸಿದ್ದಾರೆ.

ಈ ಸಮಿತಿಯ ವರದಿಯ ಶ್ರಮದ ಹಿಂದೆ, ಅದೆಷ್ಟು ಜನರು ಕಾರ್ಯನಿರ್ವಹಿಸಿದ್ದಾರೆ, ಅದೆಷ್ಟು ವರದಿಗಳ ಅಧ್ಯಯನ ಮಾಡಿದ್ದಾರೆ. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಗಂಭೀರವಾಗಿ ತೆಗೆದುಕೊಂಡು ಒಂದು ಉತ್ತಮ ನಿರ್ಧಾರ ಕೈಗೊಳ್ಳುವುದು ಉತ್ತಮ.

ಚುನಾವಣೆ, ನೀತಿ ಸಂಹಿತೆ, ಓಟರ್ ಲಿಸ್ಟ್ ಕಾರ್ಯ ನಿಜಕ್ಕೂ ಹೊರೆಯಾಗಿದೆ. ವ್ಯಕ್ತಿ ಆಧಾರದ ಚುನಾವಣೆಗಿಂತ, ಪಕ್ಷ ಆಧಾರಿತ ಚುನಾವಣೆ ನಡೆಸಿ, ನಂತರ  ಗೆದ್ದ ಪಕ್ಷದವರು ನಾಮಿನೇಟ್ ಮಾಡುವ ಪದ್ಧತಿ ಜಾರಿಗೆ ಬಂದಲ್ಲಿ ಭ್ರಷ್ಠಾಚಾರಕ್ಕೆ ಕಡಿವಾಣ ಬೀಳಲಿದೆ.

ಸರ್ಕಾರಗಳು, ರಾಜಕೀಯ ಪಕ್ಷಗಳು ಹಾಗೂ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು, ಎಲ್ಲಾ ಹಂತದ ಚುನಾವಣೆಗಳಿಗೆ, ಖರ್ಚು ಮಾಡುವ ಹಣ ಲೆಕ್ಕ ಹಾಕಿದರೆ, ದೇಶದ ಆಯವ್ಯಯವನ್ನೇ ಮೀರಲಿಸಿದೆಯೇನೋ?